Home ಮಂಗಳೂರು ಲಷ್ಕರ್ ಪರ ಗೋಡೆ ಬರಹ: ಓರ್ವನ ವಿಚಾರಣೆ!

ಲಷ್ಕರ್ ಪರ ಗೋಡೆ ಬರಹ: ಓರ್ವನ ವಿಚಾರಣೆ!

43
0

ಮಂಗಳೂರು:

ನಗರದಲ್ಲಿ ಲಷ್ಕರ್ ಪರ ಗೋಡೆ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಶಂಕಿತ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಆನ್ ಲೈನ್ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ನಝೀರ್ ಮಹಮ್ಮದ್ (26) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಆದರೆ, ಈ ಕುರಿತು ಪೊಲೀಸ್ ಅಧಿಕಾರಿಗಳು ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ.

ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಯಾರನ್ನೂ ಸಹ ಬಂಧಿಸಿಲ್ಲ. ಆದರೆ, ಸಂಶಯ ಆಧಾರದ ಮೇಲೆ ಹಲವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಸಾಕ್ಷ್ಯಧಾರಗಳು ದೊರಕಿದ ನಂತರ ದೃಢಪಡಿಸಲಾಗುವುದು ಎಂದರು.

ಮೊಬೈಲ್ ದಾಖಲೆ ಆಧಾರದಡಿ ಕದ್ರಿ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ https://kannada.thebengalurulive.com/pro-terrorist-write-up-on-wall-in-mangaluru/

LEAVE A REPLY

Please enter your comment!
Please enter your name here