Home ಮಂಗಳೂರು Mangaluru: ಪೋಷಕರು ಪಾಕೆಟ್ ಮನಿ ನೀಡಲಿಲ್ಲವೆಂದು ವಿದ್ಯಾರ್ಥಿ ಆತ್ಯಹತ್ಯೆ

Mangaluru: ಪೋಷಕರು ಪಾಕೆಟ್ ಮನಿ ನೀಡಲಿಲ್ಲವೆಂದು ವಿದ್ಯಾರ್ಥಿ ಆತ್ಯಹತ್ಯೆ

16
0
Mangaluru: Student commits suicide because parents did not give him pocket money
Mangaluru: Student commits suicide because parents did not give him pocket money
Advertisement
bengaluru

ಮಂಗಳೂರು:

ಪೋಷಕರು ಪಾಕೆಟ್ ಮನಿ ನೀಡದಿದ್ದಕ್ಕೆ ಮನನೊಂದ 17 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಕುತಾರ್ ನಲ್ಲಿ ನಡೆದಿದೆ. ಸುಶಾಂತ್ ಮೃತ ವಿದ್ಯಾರ್ಥಿ.

ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿಗೆ ಡಿಪ್ಲೋಮಾ ಕೋರ್ಸ್ ಗೆ ದಾಖಲಾಗಿದ್ದ ಈತ ತರಗತಿ ಆರಂಭದ ಮೊದಲ ದಿನವೇ ಪಾಕೆಟ್ ಮನಿ ಸಿಗಲಿಲ್ಲ ಎಂದು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಭಾಸ್ಕರ್ ಪೂಜಾರಿ ಮತ್ತು ದಾಕ್ಷಾಯಿಣಿ ಮೃತ ಸುಶಾಂತ್ ನ ತಂದೆ- ತಾಯಿಗಳು. ಇವರೆಲ್ಲರೂ ಕುತಾರ್‌ನ ಸುಭಾಷ್ ನಗರದಲ್ಲಿ ವಾಸವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಲ್ಲಿನ ಕ್ಯಾಪಿಟಾನಿಯೊ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದ ಸುಶಾಂತ್ ಬುಧವಾರ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆದಿದ್ದ ಎನ್ನಲಾಗಿದೆ.

bengaluru bengaluru

ಪೋಷಕರು 500 ರೂಪಾಯಿ ನೀಡದ ಕಾರಣ ಆತ ಮನೆಯಲ್ಲೇ ಉಳಿದಿದ್ದ. ನಂತರ, ತಂದೆ ಇಲ್ಲದಿದ್ದಾಗ, ತಾಯಿ ಅಡುಗೆಮನೆಯಲ್ಲಿದ್ದಾಗ, ಅವನು ತನ್ನ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ


bengaluru

LEAVE A REPLY

Please enter your comment!
Please enter your name here