Massive fire accident near Marathahalli Bridge: Four people escaped | ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಮಧ್ಯರಾತ್ರಿ ಭಾರೀ ಅಗ್ನಿ ಅವಘಡ: ನಾಲ್ವರು ರೋಚಕವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಬೆಂಗಳೂರು:
ಲೂಯಿಸ್ ಫಿಲಿಪ್ (Louis Philippe) ಬಟ್ಟೆ ಅಂಗಡಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬಟ್ಟೆ ಬೆಂಕಿಗೆ ಆಹುತಿಯಾದ ಘಟನೆ ನಗರದ ಮಾರತಹಳ್ಳಿ ಬ್ರಿಡ್ಜ್ (Marathahalli Bridge) ಸಮೀಪದಲ್ಲಿ ಜರುಗಿದೆ. ಘಟನೆಯಲ್ಲಿ ನಾಲ್ವರು ರೋಚಕವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಓರ್ವ ಅಗ್ನಿ ಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಬೆಂಕಿನ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಲೂಯಿಸ್ ಫಿಲಿಪ್ ಬಟ್ಟೆ ಶೋರೂಂ.

ಪಕ್ಕದ ಕಟ್ಟಡದಲ್ಲಿದ್ದ ಮೂರ್ನಾಲ್ಕು ಅಂಗಡಿಗೂ ಬೆಂಕಿ ತಗುಲಿ ಕ್ಷಣ ಮಾತ್ರದಲ್ಲಿ ಮೂರು ಕಟ್ಟಡಕ್ಕೆ ಹೊತ್ತಿಕೊಂಡ ಬೆಂಕಿಯ ಕೆನ್ನಾಲಗೆ. ಬೆಂಕಿಯ ಕೆನ್ನಾಲಗೆಗೆ ವಾಹನ ಸವಾರರೇ ಬೆಚ್ಚಿಬಿದ್ದಿದ್ದಾರೆ. ಬಟ್ಟೆ ಶೋ ರೂಂನಿಂದ ಮುಖ್ಯ ರಸ್ತೆವರೆಗೂ ಚಾಚಿಕೊಂಡಿದ್ದ ಬೆಂಕಿ ಕಟ್ಟಡದ ಮುಂದಿದ್ದ ತೆಂಗಿನಮರ, ಟ್ರಾನ್ಸ್ಫಾರ್ಮರ್ಗೂ ತಗುಲಿ ಇನ್ನಷ್ಟೂ ಅನಾಹುತವಾಗಿದೆ.
ಮೂರಂತಸ್ತಿನ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಹೇಗೆಂಬುದೇ ನಿಗೂಢವಾಗಿದೆ. ಅಂಗಡಿ ಪಕ್ಕದಲ್ಲೇ ಇರುವ ಟ್ರಾನ್ಸ್ಫಾರ್ಮರ್. ಟ್ರಾನ್ಸ್ಫಾರ್ಮರ್ನಿಂದ ಬೆಂಕಿಹೊತ್ತಿಕೊಂಡಿರು ಶಂಕೆ. ಲೂಯಿಸ್ ಫಿಲಿಪ್ ಬಟ್ಟೆ ಅಂಗಡಿ ಬೋರ್ಡ್ ನಿಂದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತು ಕೊಂಡಿದೆ.