Home ಬೆಂಗಳೂರು ನಗರ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಚಿವ ಸುಧಾಕರ್ ಭೇಟಿ

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಚಿವ ಸುಧಾಕರ್ ಭೇಟಿ

36
0

ಯುಕೆ ಪ್ರಯಾಣಿಕರ ಪರೀಕ್ಷೆಗೆ ವ್ಯವಸ್ಥೆ ಪರಿಶೀಲನೆ

ಯುಕೆನಿಂದ ಆಗಮಿಸಿದವರಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಕಡ್ಡಾಯ

ಬೆಂಗಳೂರು:

ನಾಳೆ ಬೆಳಗ್ಗೆ 4 ಗಂಟೆಗೆ ಯುಕೆ ಇಂದ ಮೊದಲ ವಿಮಾನ ಬರಲಿದೆ. ಬಹಳ ದಿನಗಳ ನಂತರ ವಿಮಾನ ಆರಂಭವಾಗಿರುವುದರಿಂದ ಪ್ರತೀ ವಿಮಾನದಲ್ಲಿ 300-350 ಪ್ರಯಾಣಿಕರು ಭರ್ತಿಯಾಗಿ ಬರಲಿದ್ದಾರೆ ಎಂದು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

WhatsApp Image 2021 01 09 at 18.20.40 1

ಯುಕೆನಿಂದ ಬರುವ ಪ್ರಯಾಣಿಕರು ನೆಗಟೀವ್ ರಿಪೋರ್ಟ್ ತಂದಿದ್ದರು ಇಲ್ಲಿ ಪರೀಕ್ಷೆ ಕಡ್ಡಾಯ ಎಂದು ಮಾರ್ಗಸೂಚಿ ಹೊರಡಿಸಲಾಗಿದೆ. ಅವರಿಗೆ ವಿಮಾನ ನಿಲ್ದಾಣದಲ್ಲೇ ಪರೇಕ್ಷೆ ಮಾಡಲಾಗುವುದು. ನೆಗಟೀವ್ ವರದಿ ಬಂದ ನಂತರವೇ ಅವರನ್ನು ಬಿಡಲಾಗುವುದು.

ಬೇರೆ ದೇಶಗಳಿಂದ ಬಂದವರಿಗೆ 72 ಗಂಟೆಗಳ ಅಂತರದಲ್ಲಿ ನೆಗಟೀವ್ ರಿಪೋರ್ಟ್ ಇರಬೇಕು. ಇಲ್ಲದಿದ್ದರೆ ಅವರನ್ನು ಪರೀಕ್ಷೆಗೊಳಪಡಿಸಲಾಗುವುದು. ಆರೋಗ್ಯ ಇಲಾಖೆ ಸಹಯೋಗದಲ್ಲಿ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ವ್ಯವಸ್ಥೆ ಮಾಡಲಾಗಿದೆ. ಏರ್ ಪೋರ್ಟ್ ಸಿಬ್ಬಂದಿ ಸಹ ಸಹಕಾರ ನೀಡಿದ್ದಾರೆ. ಪಾಸಿಟಿವ್ ವರದಿ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿವುದು.

LEAVE A REPLY

Please enter your comment!
Please enter your name here