Home ರಾಜಕೀಯ ಚುನಾವಣೆಯಲ್ಲಿ ಗೆಲ್ಲುವರೆಗೆ ಎಚ್‌.ವಿಶ್ವನಾಥ್‌ ಸಂಪುಟಕ್ಕೆ ಸೇರುವಂತಿಲ್ಲ: ಹೈಕೋರ್ಟ್

ಚುನಾವಣೆಯಲ್ಲಿ ಗೆಲ್ಲುವರೆಗೆ ಎಚ್‌.ವಿಶ್ವನಾಥ್‌ ಸಂಪುಟಕ್ಕೆ ಸೇರುವಂತಿಲ್ಲ: ಹೈಕೋರ್ಟ್

73
0

ಬೆಂಗಳೂರು:

ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಂಡು, ಈಗ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿರುವ ಎ.ಎಚ್‌.ವಿಶ್ವನಾಥ್‌ ಅವರನ್ನು ಸಚಿವರನ್ನಾಗಿ ನೇಮಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್‌ ಸೋಮವಾರ ಆದೇಶ ನೀಡಿದೆ.

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ,ಅನರ್ಹ ಶಾಸಕರು ಚುನಾವಣೆಯಲ್ಲಿ ಗೆದ್ದು ಬಂದರೆ ಮಾತ್ರ ಸಂಪುಟದಲ್ಲಿ ಸ್ಥಾನ ಪಡೆಯಲು ಅರ್ಹರಾಗುತ್ತಾರೆ. ಕೇವಲ ವಿಧಾನಪರಿಷತ್‌ಗೆ ನಾಮನಿರ್ದೇಶನಗೊಳ್ಳುವುದು ಚುನಾವಣೆಯಲ್ಲಿ ಗೆದ್ದಂತೆ ಆಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ್‌ ಓಕಾ ನೇತೃತ್ವದ ನ್ಯಾಯಪೀಠ ಸ್ಪಷ್ಟಪಡಿಸಿದೆ.

ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ವಿಶ್ವನಾಥ್‌, ಆರ್‌.ಶಂಕರ್ ಮತ್ತು ಎಂಟಿಬಿ ನಾಗರಾಜ್‌ ಅವರನ್ನು ಸಂಪುಟಕ್ಕೆ ಸೇರಿಸಲು ನಿರ್ಬಂಧ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿತು.

ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿರುವ ವಿಶ್ವನಾಥ್‌, ಈಗಲೂ ಅನರ್ಹತೆಯ ನಿಯಮಗಳಿಗೆ ಒಳಪಡುತ್ತಾರೆ. ಆದರೆ, ಅದೇ ನಿಯಮ ಶಂಕರ್‌ ಮತ್ತು ಎಂ.ಟಿ.ನಾಗರಾಜ್‌ ಅವರಿಗೆ ಇದು ಅನ್ವಯಿಸುವುದಿಲ್ಲ ಏಕೆಂದರೆ,ಅವರು ವಿಧಾನಸಭಾ ಸದಸ್ಯರ ಮತಗಳ ಮೂಲಕ ಪರಿಷತ್‌ಗೆ ಆಯ್ಕೆಯಾಗಿದ್ದಾರೆ ಎಂದು ನ್ಯಾಯಪೀಠ ತಿಳಿಸಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷ ಪತನಗೊಳಿಸುವ ಸಲುವಾಗಿ ಎ.ಎಚ್.ವಿಶ್ವನಾಥ್‌ ಸೇರಿದಂತೆ 17 ಶಾಸಕರನ್ನು ಸ್ಪೀಕರ್‌ ರಮೇಶ್‌ಕುಮಾರ್‌ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅನರ್ಹ ಶಾಸಕರು ಚುನಾವಣೆ ಎದುರಿಸಿ ಗೆಲುವು ಸಾಧಿಸಿದಲ್ಲಿ ಮಾತ್ರ ಸಂಪುಟದಲ್ಲಿ ಸೇರ್ಪಡೆಗೊಳ್ಳಲು ಸಾಧ್ಯ. ಇಲ್ಲದಿದ್ದರೆ ಪ್ರಸಕ್ತ ವಿಧಾನಮಂಡಲದ ಅವಧಿ ಎಂದರೆ 2023ರವರೆಗೆ ಅವರ ಅನರ್ಹತೆ ಮುಂದುವರಿಯಲಿದೆ ಎಂದು ಆದೇಶ ನೀಡಿತ್ತು.

LEAVE A REPLY

Please enter your comment!
Please enter your name here