Home ಆರೋಗ್ಯ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ, 998 ಹೊಸ ಪ್ರಕರಣ ಪತ್ತೆ

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ, 998 ಹೊಸ ಪ್ರಕರಣ ಪತ್ತೆ

101
0

ಸೋಂಕಿತರ ಸಂಖ್ಯೆ 8.83 ಲಕ್ಷಕ್ಕೇರಿಕೆ

ಬೆಂಗಳೂರು:

ರಾಜ್ಯದಲ್ಲಿ ಗುರುವಾರ 998 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಕಂಡ ನಂತರ ದಾಖಲಾದ ಅತಿ ಕಡಿಮೆ ಪ್ರಕರಣವಾಗಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8.84 ಲಕ್ಷ ತಲುಪಿದೆ. ಜೊತೆಗೆ, ಕಳೆದ 24 ಗಂಟೆಗಳಲ್ಲಿ 2209 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 8.49 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 23279 ರಷ್ಟಿದೆ. ಇಲ್ಲಿಯವರೆಗೆ 11778 ಮಂದಿ ಮೃತಪಟ್ಟಿದ್ದಾರೆ. ಸದ್ಯ 349 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 444 ಪ್ರಕರಣಗಳು ವರದಿಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.

ಉಳಿದಂತೆ ಬಾಗಲಕೋಟೆಯಲ್ಲಿ 3, ಬಳ್ಳಾರಿಯಲ್ಲಿ 10, ಬೆಳಗಾವಿಯಲ್ಲಿ 12, ಬೆಂಗಳೂರು ಗ್ರಾಮಾಂತರದಲ್ಲಿ 23, ಬೀದರ್‌ನಲ್ಲಿ 2, ಚಾಮರಾಜನಗರದಲ್ಲಿ 4, ಚಿಕ್ಕಬಳ್ಳಾಪುರದಲ್ಲಿ 10, ಚಿಕ್ಕಮಗಳೂರಿನಲ್ಲಿ 14, ಚಿತ್ರದುರ್ಗದಲ್ಲಿ 1, ದಕ್ಷಿಣ ಕನ್ನಡದಲ್ಲಿ 27, ದಾವಣಗೆರೆಯಲ್ಲಿ 11, ಧಾರವಾಡದಲ್ಲಿ 8, ಗದಗದಲ್ಲಿ 3, ಹಾಸನದಲ್ಲಿ 45 ಪ್ರಕರಣಗಳು ವರದಿಯಾಗಿವೆ.

ಹಾವೇರಿಯಲ್ಲಿ 123, ಕಲಬುರಗಿಯಲ್ಲಿ 15, ಕೊಡಗಿನಲ್ಲಿ 4, ಕೋಲಾರದಲ್ಲಿ 12, ಕೊಪ್ಪಳದಲ್ಲಿ 10, ಮಂಡ್ಯದಲ್ಲಿ 30, ಮೈಸೂರಿನಲ್ಲಿ 43, ರಾಯಚೂರಿನಲ್ಲಿ 10, ರಾಮನಗರದಲ್ಲಿ 8, ಶಿವಮೊಗ್ಗದಲ್ಲಿ 14, ತುಮಕೂರಿನಲ್ಲಿ 43, ಉಡುಪಿಯಲ್ಲಿ 14, ಉತ್ತರಕನ್ನಡದಲ್ಲಿ 21, ವಿಜಯಪುರದಲ್ಲಿ 30, ಯಾದಗಿರಿಯಲ್ಲಿ 4 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

LEAVE A REPLY

Please enter your comment!
Please enter your name here