Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಹತ್ಯೆ ಸಂಚು ಪ್ರಕರಣ: ಸಮಗ್ರ ತನಿಖೆಗೆ ವಿಶ್ವನಾಥ್ ಆಗ್ರಹ
  • ಬೆಂಗಳೂರು ನಗರ

ಹತ್ಯೆ ಸಂಚು ಪ್ರಕರಣ: ಸಮಗ್ರ ತನಿಖೆಗೆ ವಿಶ್ವನಾಥ್ ಆಗ್ರಹ

The Bengaluru Live December 1, 2021 10:30 PM 1 minute read
Murder conspiracy: BJP Legislator Vishwanath demands comprehensive investigation

ಹತ್ಯೆ ಸಂಚು ಪ್ರಕರಣ: ಸಮಗ್ರ ತನಿಖೆಗೆ ವಿಶ್ವನಾಥ್ ಆಗ್ರಹ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ತಮ್ಮನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಹತ್ಯೆ ಸಂಚಿನ ವಿಚಾರ ಬಹಿರಂಗವಾದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಮುಖಂಡನಾಗಿರುವ ಗೋಪಾಲಕೃಷ್ಣ ಈ ಹಿಂದೆ ನನ್ನ ವಿರುದ್ಧ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದು ಸೋಲನುಭವಿಸಿದ್ದರು. ರಾಜಕೀಯ ದ್ವೇಷದಿಂದ ನನ್ನ ಕೊಲೆಗೆ ಸಂಚು ರೂಪಿಸಿರಬೇಕು ಎಂದರು.

ಇದನ್ನೂ ಓದಿ: ಯಲಹಂಕ ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ; ಕೊಲೆ ಕುರಿತ ವಿಡಿಯೋ ಬಗ್ಗೆ ಸಿಸಿಬಿ ತನಿಖೆ

ಮಂಗಳವಾರ ಸಂಜೆ ಯಲಹಂಕದಲ್ಲಿರುವ ನನ್ನ ಗೃಹ ಕಚೇರಿಗೆ ಒಂದು ಪತ್ರ ಬಂದಿತ್ತು. ಅದು ಕುಳ್ಳ ದೇವರಾಜ್ ಬರೆದಿದ್ದ ಕ್ಷಮಾಪಣ ಪತ್ರವಾಗಿತ್ತು. ಯಲಹಂಕ ಶಾಸಕ ವಿಶ್ವನಾಥ್ ಅವರನ್ನು ಕೊಲೆ ಮಾಡದಿದ್ದರೆ ನಿನ್ನನ್ನು ಮತ್ತು ವಿಶ್ವನಾಥ್ ಅವರನ್ನು ಕೊಲೆ ಮಾಡುವುದಾಗಿ ಗೋಪಾಲಕೃಷ್ಣ ಬೆದರಿಕೆ ಹಾಕಿದ್ದಾರೆ. ನಾನು ಆರ್ಥಿಕ ಮುಗ್ಗಟ್ಟಿನಿಂದ ಗೋಪಾಲಕೃಷ್ಣ ಜೊತೆ ಕೈಜೋಡಿಸಿದ್ದು ತಪ್ಪಾಗಿದೆ. ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿಗಳನ್ನು ಅಪರಿಚಿತರ ಮೂಲಕ ನನ್ನ ಕಚೇರಿಗೆ ತಲುಪಿಸಿದ್ದ ಎಂದು ಹೇಳಿದರು.

ನಾನು ಸದಾ ಒಬ್ಬಂಟಿಯಾಗಿಯೇ ಓಡಾಡುತ್ತೇನೆ. ಪ್ರವಾಸ ಮಾಡುತ್ತಿರುತ್ತೇನೆ. ನನ್ನ ವಾಹನ ಚಾಲಕ ಮತ್ತು ಅಂಗರಕ್ಷಕನೊಬ್ಬನ್ನನ್ನು ಬಿಟ್ಟರೆ ನನಗೆ ಯಾವುದೇ ಭದ್ರತೆ ಇಲ್ಲ. ಧೈರ್ಯವಾಗಿ ಓಡಾಡುತ್ತಿರುತ್ತೇನೆ. ಇಂತಹ ಸಂದರ್ಭದಲ್ಲಿ ನನ್ನ ವಿರುದ್ಧ ಏನೋ ಷಡ್ಯಂತ್ರ ನಡೆಯುತ್ತಿದೆ ಎಂಬ ಅನುಮಾನ ಹಲವು ದಿನಗಳ ಹಿಂದೆಯೇ ಬಂದಿತ್ತು. ಆದರೆ, ನನ್ನ ಕೊಲೆಗೇ ಸಂಚು ನಡೆಯುತ್ತಿದೆ ಎಂಬುದು ಮಾತ್ರ ತಿಳಿದಿರಲಿಲ್ಲ. ಹಾಗೊಂದು ವೇಳೆ ಇದ್ದಿದ್ದರೆ ನಾವು ಎಚ್ಚೆತ್ತುಕೊಳ್ಳುತ್ತಿದ್ದೆ ಎಂದರು.

Also Read: Video on alleged plot to kill Karnataka BJP MLA Vishwanath surfaces probe on

ಆಂಧ್ರದ ಹಂತಕರಿಗೆ ಸುಪಾರಿ

ಕಡಪ ಮತ್ತು ಆಂಧ್ರ ಪ್ರದೇಶದಿಂದ ಕೊಲೆಗಡುಕರಿಗೆ ಸುಪಾರಿ ನೀಡಿ ವಿಶ್ವನಾಥ್ ಅವರನ್ನು ಕೊಲೆ ಮಾಡಿಸುವುದಾಗಿ ಗೋಪಾಲಕೃಷ್ಣ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೇವರಾಜ್ ತಪ್ಪೊಪ್ಪಿಗೆ ಪತ್ರದಲ್ಲಿ ಹೇಳಿಕೊಂಡಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.

ಈ ಹಿಂದೆ ಕಡಬಗೆರೆ ಶೀನನ ಮೇಲೆ ನಡೆದ ಶೂಟೌಟ್ ಪ್ರಕರಣದಲ್ಲಿ ಇದೇ ಗೋಪಾಠಲಕೃಷ್ಣ ಶೀನನಿಂದ ಬಲವಂತದಿಂದ ನನ್ನ ಹೆಸರನ್ನು ಹೇಳಿಸಿದ್ದರು. ಈ ರೀತಿ ನನ್ನ ವಿರುದ್ಧ ವಿನಾ ಕಾರಣ ರಾಜಕೀಯ ದ್ವೇಷ ಮಾಡುತ್ತಿದ್ದಾರೆ. ಇಂತಹ ರಾಜಕೀಯ ಮಾಡುವ ಬದಲು ಚುನಾವಣೆಯನ್ನು ಎದುರಿಸಲಿ ಎಂದು ವಿಶ್ವನಾಥ್ ಸವಾಲು ಹಾಕಿದರು.

Kulla Devraj
ಕುಳ್ಳ ದೇವರಾಜ್

ಕುಳ್ಳ ದೇವರಾಜ್ ಜೊತೆ ಸಂಬಂಧವಿಲ್ಲ

ಕುಳ್ಳ ದೇವರಾಜ್ ಕಾಂಗ್ರೆಸ್ ಕಾರ್ಯಕರ್ತ. ನನಗೆ ಎಲ್ಲಾ ಪಕ್ಷದಲ್ಲಿಯೂ ಸ್ನೇಹಿತರಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಡೆಯುವ ಸಮುದಾಯಗಳ ಕಾರ್ಯಕ್ರಮಗಳಲ್ಲಿ ಎಲ್ಲಾ ಪಕ್ಷದ ಮುಖಂಡರೂ ಪಾಲ್ಗೊಳ್ಳುತ್ತಾರೆ. ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತೇವೆ. ಹಾಗಂತ ನನಗೂ ದೇವರಾಜ್ ಗೂ ಯಾವುದೇ ಸಂಬಂಧವಿಲ್ಲ. ಪರಿಚಯವಿದೆಯಾದರೂ ಆತನೊಂದಿಗೆ ಯಾವುದೇ ವ್ಯವಹಾರವನ್ನು ಇಟ್ಟುಕೊಂಡಿಲ್ಲ. ಅಂತಹ ಅಗತ್ಯವೂ ನನಗಿಲ್ಲ ಎಂದರು.

ಪೊಲೀಸರಿಗೆ ದೂರು

ಈ ಹತ್ಯೆ ಸಂಚಿನ ವಿರುದ್ಧ ನಾನು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ಮಾಹಿತಿ ನೀಡಿದ್ದೇನೆ. ಪ್ರಕರಣದ ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ವಿಶ್ವನಾಥ್ ತಿಳಿಸಿದರು.

Yelahanka MLA SR Vishwanath.jpg murder plot complaint copy
Yelahanka MLA SR Vishwanath.jpg murder plot complaint copy

ಡಿಕೆಶಿ ಸಾಧು ಸಂತರ ಜೊತೆಯಲ್ಲಿದ್ದಾರಾ?

ನಾನು ರೌಡಿಗಳನ್ನಿಟ್ಟುಕೊಂಡು ಓಡಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹಾಗಾದರೆ ಡಿ.ಕೆ.ಶಿವಕುಮಾರ್ ಅವರು ಸಾಧು ಸಂತರ ಜೊತೆಯಲ್ಲಿ ಓಡಾಡುತ್ತಿದ್ದಾರಾ? ಅವರ ಹಿನ್ನೆಲೆ ಏನೆಂದು ಎಲ್ಲರಿಗೂ ತಿಳಿದಿದೆ. ಅವರು ಹತ್ಯೆ ಸಂಚಿನಂತಹ ಪ್ರಕರಣದಲ್ಲಿ ನನ್ನ ಪರವಾಗಿ ನಿಲ್ಲುವ ಬದಲು ಸಂಚು ರೂಪಿಸಿದವರ ಪರವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.

ಈ ಹಿಂದೆ ತಮ್ಮದೇ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಇಟ್ಟಾಗಲೇ ಡಿ.ಕೆ.ಶಿವಕುಮಾರ್ ಅವರು ಶ್ರೀನಿವಾಸಮೂರ್ತಿ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಇಂತಹ ಶಿವಕುಮಾರ್ ಅವರು ಈ ಪ್ರಕರಣದಲ್ಲಿ ನನ್ನ ಪರವಾಗಿ ನಿಲ್ಲುತ್ತಾರೆ ಎಂಬುದು ದೂರದ ಮಾತು ಎಂದರು.

ಪ್ರಭಾವ ಬೀರಿ ಗೋಪಾಲಕೃಷ್ಣನನ್ನು ಬಿಡಿಸಿದ್ದಾರೆ ಮಂಗಳವಾರ ಸಿಸಿಬಿಯವರು ಗೋಪಾಲಕೃಷ್ಣನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಆದರೆ, ರಾತ್ರಿ ವೇಳೆಗೆ ಪ್ರಭಾವಿ ರಾಜಕಾರಣಿಯೊಬ್ಬರು ಧಮ್ಕಿ ಹಾಕಿ ಅವರನ್ನು ಬಿಡಿಸಿದ್ದಾರೆ ಎಂದು ವಿಶ್ವನಾಥ್ ಆರೋಪಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ದೇವೇಗೌಡರು ದೆಹಲಿಯಿಂದ ಬಂದ ಮೇಲೆ ಮೇಲ್ಮನೆ ಚುನಾವಣೆ ಮೈತ್ರಿ ಬಗ್ಗೆ ನಿರ್ಧಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
Next: ಜೆಡಿಎಸ್ ಪಕ್ಷ ಬಿಜೆಪಿ ಟೀಮ್ ಅಂತ ಬರೆದು ಸ್ಲೇಟಿಗೆ ಕಟ್ಟು ಹಾಕಿಸಿ ಕುತ್ತಿಗೆಗೆ ನೇತು ಹಾಕಿಕೊಂಡು ಸಿದ್ದರಾಮಯ್ಯ ಓಡಾಡಲಿ

Related Stories

ಸಿಸಿಬಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ತೋರಿಸುವ ಬೆಂಗಳೂರು ನಗರ ಪೊಲೀಸ್ ವಿಡಿಯೊದ ದೃಶ್ಯ
  • ಅಪರಾಧ
  • ಬೆಂಗಳೂರು ನಗರ

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದಲ್ಲಿ 32 ವರ್ಷದ ವ್ಯಕ್ತಿಯನ್ನು ಬಂಧಿಸಿದ ಬೆಂಗಳೂರು ಸಿಸಿಬಿ

The Bengaluru Live November 11, 2026 8:20 AM
ಹೆಣ್ಣೂರು–ಬಾಗಲೂರು ರಸ್ತೆಯಲ್ಲಿ ಹೊಸದಾಗಿ ಹಾಕಿದ ಕಾಂಕ್ರೀಟ್ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು.
  • ಬೆಂಗಳೂರು ನಗರ

ಹೆಣ್ಣೂರು–ಬಾಗಲೂರು ರಸ್ತೆಯ 170 ಮೀಟರ್ ಭಾಗದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಪೂರ್ಣ

The Bengaluru Live November 11, 2026 1:28 AM
ಎತ್ತರಿಸಿದ ಹಳಿಗಳ ಮೇಲೆ ಸಾಗುತ್ತಿರುವ ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ
  • ಕರ್ನಾಟಕ

ಬೆಂಗಳೂರು ಮೆಟ್ರೋ ಹಣಕಾಸು ವಿವಾದ: ಕರ್ನಾಟಕದ ಪಾಲು ₹65,291 ಕೋಟಿ ಎಂದ ಕಾಂಗ್ರೆಸ್

The Bengaluru Live November 11, 2026 12:25 AM

Latest Post

ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಿದ್ಯಾಪೀಠ ಮುಖ್ಯರಸ್ತೆಯಲ್ಲಿ ಹೊಸದಾಗಿ ಡಾಂಬರು ಹಾಕಿದ ಭಾಗದ ಬಳಿ ರಸ್ತೆ ರೋಲರ್
  • ಬೆಂಗಳೂರು

ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ

November 12, 2026 9:55 PM
ವಿಕಾಸ ಸೌಧದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಭಿವೃದ್ಧಿ ಪರಿಷತ್ ಸಭೆಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಿಕಾಸ ಸೌಧದಲ್ಲಿ ರಾಜ್ಯ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಭಿವೃದ್ಧಿ ಪರಿಷತ್ತಿನ ಸಭೆ
  • ಬೆಂಗಳೂರು

ವಿಕಾಸ ಸೌಧದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಭಿವೃದ್ಧಿ ಪರಿಷತ್ ಸಭೆಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ

November 12, 2026 9:47 PM
ಇನ್ವೆಸ್ಟ್ ಕರ್ನಾಟಕ 2027: ಬೆಂಗಳೂರಿನಲ್ಲಿ ಏಪ್ರಿಲ್ 20ರಿಂದ 22ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2027ರ ಪೂರ್ವಭಾವಿ ಕಾರ್ಯಕ್ರಮದ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಇತರರು
  • ಬೆಂಗಳೂರು

ಇನ್ವೆಸ್ಟ್ ಕರ್ನಾಟಕ 2027: ಬೆಂಗಳೂರಿನಲ್ಲಿ ಏಪ್ರಿಲ್ 20ರಿಂದ 22ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ

November 12, 2026 9:36 PM
ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

November 12, 2026 7:13 PM
ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಸಮುದಾಯಗಳ ಅನುದಾನ ಗೋಚರವಾಗಿರಲಿ, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಕೆಲಸ ಮಾಡಿ: ಸಿಎಂ ಶಿವಕುಮಾರ್

November 12, 2026 7:10 PM
ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ tejasvi-surya-metro-presser-20261112
  • ಕರ್ನಾಟಕ

ನಮ್ಮ ಮೆಟ್ರೊ ಹಣಕಾಸು ಲೆಕ್ಕದಲ್ಲಿ ರಾಜ್ಯದ ಕುಚೇಷ್ಟೆ: 29 ಸಾವಿರ ಕೋಟಿ ಸಾಲ ರಾಜ್ಯದ ಕಾಲಂಗೆ ಎಂದ ತೇಜಸ್ವಿ ಸೂರ್ಯ

November 12, 2026 7:07 PM

ನೀವು ತಪ್ಪಿಸಿಕೊಂಡಿರಬಹುದು

ವಿದ್ಯಾಪೀಠ ಮುಖ್ಯರಸ್ತೆಯಲ್ಲಿ ಹೊಸದಾಗಿ ಡಾಂಬರು ಹಾಕಿದ ಭಾಗದ ಬಳಿ ರಸ್ತೆ ರೋಲರ್
  • ಬೆಂಗಳೂರು

ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ

The Bengaluru Live November 12, 2026 9:55 PM
ವಿಕಾಸ ಸೌಧದಲ್ಲಿ ರಾಜ್ಯ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಭಿವೃದ್ಧಿ ಪರಿಷತ್ತಿನ ಸಭೆ
  • ಬೆಂಗಳೂರು

ವಿಕಾಸ ಸೌಧದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಭಿವೃದ್ಧಿ ಪರಿಷತ್ ಸಭೆಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ

The Bengaluru Live November 12, 2026 9:47 PM
ಇನ್ವೆಸ್ಟ್ ಕರ್ನಾಟಕ 2027ರ ಪೂರ್ವಭಾವಿ ಕಾರ್ಯಕ್ರಮದ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಇತರರು
  • ಬೆಂಗಳೂರು

ಇನ್ವೆಸ್ಟ್ ಕರ್ನಾಟಕ 2027: ಬೆಂಗಳೂರಿನಲ್ಲಿ ಏಪ್ರಿಲ್ 20ರಿಂದ 22ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ

The Bengaluru Live November 12, 2026 9:36 PM
parameshwara-file-photo
  • ಕರ್ನಾಟಕ

ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ

The Bengaluru Live November 12, 2026 7:13 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ವಿದ್ಯಾಪೀಠ ವಾರ್ಡ್‌ನಲ್ಲಿ ರಸ್ತೆ ಗುಂಡಿ ಮುಚ್ಚಿದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ
  • ವಿಕಾಸ ಸೌಧದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಅಭಿವೃದ್ಧಿ ಪರಿಷತ್ ಸಭೆಗೆ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ
  • ಇನ್ವೆಸ್ಟ್ ಕರ್ನಾಟಕ 2027: ಬೆಂಗಳೂರಿನಲ್ಲಿ ಏಪ್ರಿಲ್ 20ರಿಂದ 22ರವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ
  • ನ.14ಕ್ಕೆ ಕಾವೇರಿ ಐಟಿ ಸೆಲ್ ಉದ್ಘಾಟನೆ: ನೋಂದಣಿ ಇಲಾಖೆ ಕಾಮಗಾರಿಗಳಿಗೂ ಪರಮೇಶ್ವರ್ ಚಾಲನೆ
©Copyright 2025 The Bengaluru Live All rights reserved. | MoreNews by AF themes.