ಬೆಂಗಳೂರು:
ರಾಜ್ಯದಲ್ಲಿ ಬರ ಬಂದಿರುವ ಕಾರಣದಿಂದ ಮೈಸೂರು ದಸರಾ ಸೇರಿದಂತೆ ಎಲ್ಲಾ ಉತ್ಸವಗಳನ್ನು ಸಾಂಕೇತಿಕವಾಗಿ ನಡೆಸಬೇಕು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ಉತ್ಸವಗಳು ಅದ್ಧೂರಿತನವನ್ನು ತೊರೆದು ಸರಳವಾಗಿ ಆಚರಿಸುವ ಮೂಲಕ ಅರ್ಥಪೂರ್ಣವಾಗಿ ಜನರ ನೋವಿಗೆ ಸ್ಪಂದಿಸುವಂತಿರಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಬರ ಪರಸ್ಥಿತಿಯನ್ನು ಸರಕಾರ ಮತ್ತು ನಾಡಿನ ಜನತೆ ಸಮರ್ಥವಾಗಿ ಎದುರಿಸಬೇಕು. ಈ ಹಿನ್ನೆಲೆಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯಲ್ಲಿ ನಾಡಿನ ಬರ ಪರಸ್ಥಿತಿಯನ್ನು ಕಳೆದು ಸಮೃದ್ಧಿಯನ್ನು ನಾಡಿಗೆ ನೀಡುವಂತೆ ಪ್ರಾರ್ಥಿಸುವುದರ ಮೂಲಕ ಸಮಸ್ತ ಕನ್ನಡಿಗರ ಅಭ್ಯುದಯಕ್ಕೆ ಕಾರಣವಾಗಬೇಕು ಎಂದು ನಾಡೋಜ ಡಾ. ಮಹೇಶ ಜೋಶಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.