Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್
  • ಶಿಕ್ಷಣ
  • ಬೆಂಗಳೂರು ನಗರ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

The Bengaluru Live May 23, 2021 4:00 PM 1 minute read
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಯುವುದು ಉಚಿತ – ಎಸ್.ಸುರೇಶ್ ಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಎಲ್ಲ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ಪ್ರತಿಪಾದನೆ

ಬೆಂಗಳೂರು:

ಪದವಿಪೂರ್ವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉಚಿತ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಸಚಿವರು, ವೃತ್ತಿಪರ ಶಿಕ್ಷಣಕ್ಕೆ ಸನ್ನದ್ಧರಾಗುವ ಹಂತದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ಕೋವಿಡ್ ಸಂಪೂರ್ಣವಾಗಿ ತಹಬಂದಿಗೆ ಬಂದ ನಂತರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿಯಾದರೂ ಪರೀಕ್ಷೆಗಳನ್ನು ನಡೆಸುವುದು ಸಮರ್ಪಕವಾಗುತ್ತದೆ ಎಂದು ಪ್ರತಿಪಾದಿಸಿದರು.

ಪ್ರಸ್ತುತ ಕೋವಿಡ್ ಪ್ರಸರಣವು ಎಲ್ಲೆಡೆ ತೀವ್ರವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಎರಡನೇ ಅಲೆ ತಹಬಂದಿಗೆ ಬಂದ ಕೂಡಲೇ 15-20 ದಿನಗಳ ಕಾಲಾವಕಾಶ ನೀಡಿ ಮುಂಚೆಯೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲು ಸದ್ಯಕ್ಕೆ ತೀರ್ಮಾನಿಸಲಾಗಿದೆ. ಕೋವಿಡ್ ಕಾರಣಕ್ಕಾಗಿ ವಾರ್ಷಿಕ ಪರೀಕ್ಷೆಯನ್ನು ತೆಗೆದುಕೊಳ್ಳಲು ವಿಫಲರಾಗುವ ವಿದ್ಯಾರ್ಥಿಗಳಿಗೆ ಹೊಸದಾಗಿ ಇನ್ನೊಮ್ಮೆ ಪರೀಕ್ಷೆ ಬರೆಯಲು ಇದೇ ಸಾಲಿನಲ್ಲಿ ಅವಕಾಶ ಕಲ್ಪಿಸಲು ಸಹ ಕರ್ನಾಟಕ ಸರ್ಕಾರವು ಯೋಜಿಸಿದೆ ಎಂದರು.

ಪರೀಕ್ಷಾ ಪ್ರಕ್ರಿಯೆ ಸರಳೀಕರಣಗೊಳ್ಳಬೇಕೆಂದು ಹಲವರ ಪ್ರತಿಪಾದನೆಯಾಗಿದೆ. ಸರಳೀಕೃತ ಮಾದರಿಯಲ್ಲಿ ಇಡೀ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು 45 ದಿನಗಳ ಕಾಲಾವಕಾಶ ಅಗತ್ಯವಿದೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯೂ ಕಡಿಮೆ ಅವಧಿಯ ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಸಲಹಾತ್ಮಕವಾಗಿ ಹೇಳಿದೆ. ಕರ್ನಾಟಕ ರಾಜ್ಯವು ಕಳೆದ ಸಾಲಿನಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಿದ ಅನುಭವ ಹೊಂದಿದ್ದು, ಈ ಅನುಭವದ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗಳನ್ನು ಸಮರ್ಥವಾಗಿ ಆಯೋಜಿಸುವುದು ಹೆಚ್ಚಿನ ಸಮಸ್ಯೆಯಾಗದಿದ್ದರೂ, ವಿದ್ಯಾರ್ಥಿಗಳ ಕಲಿಕೆ, ಪೋಷಕರ ಮನ:ಸ್ಥಿತಿ, ಕೇಂದ್ರ ಸರ್ಕಾರದ ಸಲಹೆಗಳು ಹಾಗೂ ಪ್ರಸ್ತುತ ಪೂರ್ವಸಿದ್ಧತಾ ಕಾರ್ಯಗಳನ್ನು ಸಮಗ್ರವಾಗಿ ಅವಲೋಕಿಸಿ, ಒಟ್ಟಾರೆ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದೆಂದರು. ದ್ವಿತೀಯ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಜುಲೈ ಮಾಹೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾದಲ್ಲಿ ಆಗಸ್ಟ್ ಮಾಹೆಯಲ್ಲಿ ಪರೀಕ್ಷಾ ಫಲಿತಾಂಶವನ್ನು ಘೋಷಿಸಲು ಸಾಧ್ಯವಾಗುತ್ತದೆ. ಹಾಗಾಗಿ ನೀಟ್/ಜೆಇಇ/ಸಿಇಟಿ/ಐಸಿಎಆರ್/ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಗಸ್ಟ್ ಮಾಹೆಯ ಸೂಕ್ತ ದಿನಾಂಕಗಳಂದು ಆಯೋಜಿಸಬಹುದಾಗಿದೆಯೆಂದೂ ಸಚಿವ ಸುರೇಶ್ ಕುಮಾರ್ ಸಲಹೆ ನೀಡಿದರು. ಕೇಂದ್ರ ಸರ್ಕಾರದ ಈ ರೀತಿಯ ಸಮಾಲೋಚನಾ ಸಭೆಯು ಅಭಿನಂದನಾರ್ಹ ಪ್ರಯತ್ನ. ಇಂತಹ ಪ್ರಯತ್ನಗಳು ಸಂಕಷ್ಟದ ಸಂದರ್ಭದಲ್ಲಿ ಇಡೀ ನಾಗರಿಕ ಸಮಾಜಕ್ಕೆ ವಿಶ್ವಾಸವನ್ನು ಮೂಡಿಸುವಂತಹದ್ದಾಗಿವೆ ಎಂದೂ ಸುರೇಶ್ ಕುಮಾರ್ ಹೇಳಿದರು.

ವಿವಿಧ ರಾಜ್ಯಗಳ ಶಿಕ್ಷಣ ಸಚಿವರು ತಮ್ಮ ರಾಜ್ಯಗಳ ಸ್ಥಿತಿಗತಿಗಳನ್ನು ಗಮನಕ್ಕೆ ತಂದರು ಹಾಗೂ ಸಿ.ಬಿ.ಎಸ್.ಇ. ಮಂಡಳಿಯು ಸೇರಿದಂತೆ ಬಹುತೇಕ ರಾಜ್ಯಗಳು ಪರೀಕ್ಷೆ ನಡೆಸುವ ಪರವಾಗಿ ವಿಚಾರ ಮಂಡಿಸಿದರು. ಬಹುಪಾಲು ಸಚಿವರು ಪರೀಕ್ಷೆಗಳನ್ನು ನಡೆಸಲೇಬೇಕೆಂದು ಪ್ರತಿಪಾದಿಸಿದರು. ಇಂದಿನ ಸಭೆಯಲ್ಲಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಜವಳಿ ಸಚಿವೆ ಸ್ಮೃತಿ ಇರಾನಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಸೇರಿದಂತೆ ಹಲವು ರಾಜ್ಯಗಳ ಶಿಕ್ಷಣ ಸಚಿವರು ಹಾಜರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ
Next: ಕೋವಿಡ್ ಸೋಂಕಿತರಲ್ಲಿ ಆತ್ಮವಿಶ್ವಾಸ ತುಂಬಲು ಸಚಿವ ಸುರೇಶ್ ಕುಮಾರ್ ಅವರ ವೈದ್ಯೆ ಪುತ್ರಿ ಡಾ. ದಿಶಾ.ಎಸ್.ಕುಮಾರ್ ನೃತ್ಯ

Related Stories

ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಕರ್ನಾಟಕ
  • ಬೆಂಗಳೂರು ನಗರ

ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್

The Bengaluru Live November 13, 2026 8:24 AM
ಪಶ್ಚಿಮ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೆ ಸ್ವೀಕರಿಸುತ್ತಿರುವ ಆಯುಕ್ತೆ ಶಿಲ್ಪಾ ನಾಗ್
  • ಕರ್ನಾಟಕ
  • ಬೆಂಗಳೂರು ನಗರ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಫೋನ್-ಇನ್: 34 ಕರೆ, ಆಯುಕ್ತೆ ಶಿಲ್ಪಾ ನಾಗ್‌ರಿಂದ ದೂರು ಆಲಿಕೆ

The Bengaluru Live November 12, 2026 9:22 PM
Photo with the report on the Whitefield advocate murder arrest
  • ಅಪರಾಧ
  • ಕರ್ನಾಟಕ
  • ಬೆಂಗಳೂರು ನಗರ

ವೈಟ್‌ಫೀಲ್ಡ್ ವಕೀಲರ ಹತ್ಯೆ: ಪ್ರಮುಖ ಆರೋಪಿ ಬಿಹಾರದಲ್ಲಿ ಬಂಧನ, ಇನ್ನೊಬ್ಬ ಪರಾರಿ

The Bengaluru Live November 12, 2026 9:22 PM

Latest Post

ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್ ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಕರ್ನಾಟಕ
  • ಬೆಂಗಳೂರು ನಗರ

ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್

November 13, 2026 8:24 AM
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್ cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್

November 13, 2026 2:51 AM
ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ gruha-lakshmi-beneficiaries-file-photo-20261106
  • ಕರ್ನಾಟಕ

ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

November 13, 2026 2:39 AM
ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಬನ್ನೇರುಘಟ್ಟ ರಸ್ತೆ ಜಂಕ್ಷನ್‌ಗಳಿಗೆ ಡಿಪಿಆರ್: ಸುರಕ್ಷಿತ ಪಾದಚಾರಿ ಮಾರ್ಗ, ಕ್ರಾಸಿಂಗ್‌ಗೆ ಆದ್ಯತೆ
  • ಬೆಂಗಳೂರು

ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

November 12, 2026 11:24 PM
ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90 ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಭಾವಚಿತ್ರ ಮತ್ತು ಕರ್ನಾಟಕ ಕಾಂಗ್ರೆಸ್ ಲೋಗೊ ಇರುವ ಕೊಲಾಜ್
  • ಕರ್ನಾಟಕ

ನಮ್ಮ ಮೆಟ್ರೋ ನಿಧಿ: ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ ಕಾಂಗ್ರೆಸ್, ಇದುವರೆಗಿನ ಸಾಲ ಮರುಪಾವತಿಯಲ್ಲಿ ರಾಜ್ಯದ ಪಾಲು ಶೇ 90

November 12, 2026 11:22 PM
ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ ಪ್ರಹ್ಲಾದ ಜೋಶಿ ಅವರ ಪೋಸ್ಟ್‌ನ ಗ್ರಾಫಿಕ್‌ನಲ್ಲಿರುವ, ಕ್ಯಾಬ್ ಮುಂದೆ ಫೋನ್ ಹಿಡಿದಿರುವ ಕೈ
  • ಕರ್ನಾಟಕ

ಸವಾರಿಗೆ ಮುನ್ನ ಪಾವತಿಯ ದಾರಿತಪ್ಪಿಸುವ ಸೂಚನೆ: ಓಲಾಗೆ ₹10 ಲಕ್ಷ ದಂಡ ವಿಧಿಸಿದ ಸಿಸಿಪಿಎ ಎಂದ ಪ್ರಲ್ಹಾದ ಜೋಶಿ

November 12, 2026 10:00 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರು ಉತ್ತರದ ಇ-ಖಾತಾ ಸೇವಾ ಕೇಂದ್ರದಲ್ಲಿ ನಾಗರಿಕರು ಮತ್ತು ಸಿಬ್ಬಂದಿ
  • ಕರ್ನಾಟಕ
  • ಬೆಂಗಳೂರು ನಗರ

ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್

The Bengaluru Live November 13, 2026 8:24 AM
cm-scst-council-meeting-20261112
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್

The Bengaluru Live November 13, 2026 2:51 AM
gruha-lakshmi-beneficiaries-file-photo-20261106
  • ಕರ್ನಾಟಕ

ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

The Bengaluru Live November 13, 2026 2:39 AM
ಬನ್ನೇರುಘಟ್ಟ ರಸ್ತೆ ಜಂಕ್ಷನ್‌ಗಳಿಗೆ ಡಿಪಿಆರ್: ಸುರಕ್ಷಿತ ಪಾದಚಾರಿ ಮಾರ್ಗ, ಕ್ರಾಸಿಂಗ್‌ಗೆ ಆದ್ಯತೆ
  • ಬೆಂಗಳೂರು

ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ

The Bengaluru Live November 12, 2026 11:24 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ನವೆಂಬರ್ 14ರಂದು ಬೆಂಗಳೂರಿನ ಎಲ್ಲ 64 ಎಆರ್‌ಒ ಕಚೇರಿಗಳಲ್ಲಿ ಇ-ಖಾತಾ ಓಪನ್ ಹೌಸ್
  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು 9ನೇ ಅನುಸೂಚಿಗೆ ಸೇರಿಸಲು ಪ್ರಧಾನಿಗೆ ಪತ್ರ; ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನದ ಸಾಮಾಜಿಕ ಆಡಿಟ್‌ಗೆ ಸೂಚನೆ: ಶಿವಕುಮಾರ್
  • ಗೃಹಲಕ್ಷ್ಮಿ ಹಣ ಬೇರೆಡೆ ಬಳಕೆಯಾಗಿಲ್ಲ: ಆನೇಕಲ್ ತಾಲ್ಲೂಕು ಪಂಚಾಯಿತಿಯಲ್ಲಿ ₹1,111 ಕೋಟಿ ಇಟ್ಟಿರುವ ಆರೋಪ ತಳ್ಳಿಹಾಕಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
  • ನವೆಂಬರ್ 13ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ: ಸಂಚಾರ ಮಾರ್ಗ ಬದಲಾವಣೆ, ಆರು ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ
©Copyright 2025 The Bengaluru Live All rights reserved. | MoreNews by AF themes.