ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ವ್ಯಾಪ್ತಿಯ ಜಯನಗರ ಆರನೇ ಬ್ಲಾಕ್ನಲ್ಲಿ ಸುಮಾರು ₹9 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾ ಸಂಕೀರ್ಣ ಉದ್ಘಾಟನೆಯಾಗಿದೆ ಎಂದು ಆರ್. ಅಶೋಕ ಗುರುವಾರ ತಿಳಿಸಿದ್ದಾರೆ.
ಮೂರು ಮಹಡಿಗಳ ಸಂಕೀರ್ಣದಲ್ಲಿ ಸ್ಕೇಟಿಂಗ್ ಅಕಾಡೆಮಿ, ಕೆಫೆಟೇರಿಯಾ, ಪಿಕಲ್ಬಾಲ್ ಕೋರ್ಟ್, 10 ಆಟಗಾರರ ಫುಟ್ಬಾಲ್ ಕೋರ್ಟ್ ಹಾಗೂ ಬಾಕ್ಸ್ ಕ್ರಿಕೆಟ್ ಅಭ್ಯಾಸ ಕೋರ್ಟ್ಗಳಿವೆ ಎಂದು ಅವರು ವಿವರಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅಶೋಕ, ಕ್ರೀಡಾ ಸೌಲಭ್ಯಗಳನ್ನು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಸಂಕೀರ್ಣವು ಕ್ರೀಡೆಗೆ ಉತ್ತೇಜನ ನೀಡಿ ಯುವಜನರಿಗೆ ಅವಕಾಶ ಕಲ್ಪಿಸಲಿದೆ ಎಂದು ಅವರು ತಿಳಿಸಿದ್ದಾರೆ.
