Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ

ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ

The Bengaluru Live November 19, 2026 7:37 PM 1 minute read
ಇಂದಿರಾ ಕ್ಯಾಂಟೀನ್ ಕುರಿತ ಹಿನ್ನೆಲೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸ್ಮರಣಿಕೆ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗುರುವಾರ ಬೆಂಗಳೂರಿನಲ್ಲಿ ನಡೆದ ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸ್ಮರಣಿಕೆಯೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. ಚಿತ್ರ: ಲಭ್ಯವಾದದ್ದು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ರಾಜ್ಯದ ಎಲ್ಲ ನಗರಗಳಲ್ಲೂ ವಾಹನ ದಟ್ಟಣೆ ಹೆಚ್ಚಾಗಿದ್ದು, ಈ ಕಾರಣಕ್ಕೆ ಸರ್ಕಾರ ಹೊಸ ನಗರ ಯೋಜನೆ ರೂಪಿಸಿದೆ, ಇದರಲ್ಲಿ ಶಿಸ್ತುಬದ್ಧ ರಸ್ತೆ ನಿರ್ಮಾಣಕ್ಕೆ ‘ನೂತನ ರಸ್ತೆ ಗ್ರಿಡ್ ವ್ಯವಸ್ಥೆ’ ಜಾರಿ ಮಾಡುವ ಚಿಂತನೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ತಂಡದ ಪ್ರಕಟಣೆ ತಿಳಿಸಿದೆ. ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯ ಸಭಾಂಗಣದಲ್ಲಿ ಗುರುವಾರ ರಾಜ್ಯದ ವಿವಿಧೆಡೆ ನಿರ್ಮಿಸಿರುವ 16 ಇಂದಿರಾ ಕ್ಯಾಂಟೀನ್‌ಗಳು ಹಾಗೂ ಸ್ವಚ್ಛ ಭಾರತ್ ಮಿಷನ್ (ನಗರ) ಯೋಜನೆಯಡಿ ಕಾಮಗಾರಿಗಳು ಮತ್ತು ಯಂತ್ರೋಪಕರಣಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು, ಬೆಳಗಾವಿಯಲ್ಲಿ ರಸ್ತೆಗಳು ವಿಶಾಲವಾಗಿವೆ, ಆದರೆ ಬೆಂಗಳೂರಿನಲ್ಲಿ ಹಾಗಿಲ್ಲ; ಯೋಜಿತವಾಗಿ ನಗರವನ್ನು ಅಭಿವೃದ್ಧಿಪಡಿಸುವುದರಿಂದ ಮಾತ್ರ ಇದು ಸಾಧ್ಯ ಎಂದರು. ಅಗತ್ಯ ಪ್ರಮಾಣಪತ್ರಗಳನ್ನು ನಗರ ಯೋಜನೆ ಇಲಾಖೆಯಲ್ಲಿ ಪಡೆದುಕೊಳ್ಳಬೇಕು, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನಗರಯೋಜನಾ ಕಾಲೇಜು ಆರಂಭಿಸಲಾಗಿದ್ದು ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ ಎಂದು ಅವರು ಹೇಳಿದರು.

ನಗರಸಭೆಗಳು ಹಾಗೂ ಕಾರ್ಪೊರೇಷನ್‌ಗಳಿಗೆ ಹೆಚ್ಚಿನ ಅನುದಾನ ನೀಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ; ಕಳೆದ ಮೂರು ವರ್ಷಗಳಿಂದ ಅನುದಾನದಲ್ಲಿ ವ್ಯತ್ಯಾಸವಾಗಿತ್ತು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ದೊರೆಯಲಿದೆ, ಆದರೆ ಪ್ರತಿಯೊಂದು ಪೈಸೆಗೂ ಲೆಕ್ಕ ಇಡಬೇಕು ಎಂದರು. ಯೋಜನೆಯ ಫೋಟೋ, ವಿಡಿಯೋ ಮಾಡಬೇಕು; ಉದಾಹರಣೆಗೆ ಶಿವಕುಮಾರ್ ಮನೆಯಿಂದ ಯತೀಂದ್ರ ಮನೆಯ ರಸ್ತೆಗಳನ್ನು ತೋರಿಸಿ ಬಿಲ್ ಮಾಡುವಂತಿಲ್ಲ, ಗುಣಮಟ್ಟದಲ್ಲಿ ರಾಜಿ ಇಲ್ಲ, ಅಕ್ರಮ ವ್ಯವಹಾರಗಳಿಗೆ ಕಠಿಣ ಕ್ರಮ ಕೈಗೊಳ್ಳುತ್ತೇನೆ; ಶಾಸಕರು, ಕಾರ್ಪೊರೇಟರ್‌ಗಳು ಹೇಳಿದರು ಎಂದು ಕಳ್ಳಲೆಕ್ಕ, ಕಳ್ಳಬಿಲ್ ಮಾಡಿದರೆ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು.

“ಬಡವನ ತಟ್ಟೆಯಲ್ಲಿ ಅನ್ನ ಇದ್ದಾಗ ಮಾತ್ರ ಅಭಿವೃದ್ಧಿಗೆ ಬೆಲೆ ಬರುತ್ತದೆ. ಹಸಿವಿಗೆ ಜಾತಿ, ಧರ್ಮ ಇಲ್ಲ” ಎಂದ ಶಿವಕುಮಾರ್, ಕೆಲವರು ಹಸಿವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾರೆ, ಸರ್ಕಾರ ಹಾಗೆ ಮಾಡುವುದಿಲ್ಲ ಎಂದರು. ಬಿಜೆಪಿ, ಜನತಾದಳದ ಕ್ಷೇತ್ರಗಳಲ್ಲಿ ಎಷ್ಟೋ ಕಡೆ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಿದ್ದಾರೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಹಾಕಿ ಕೇಂದ್ರೀಕೃತ ವ್ಯವಸ್ಥೆ ಮಾಡಬೇಕು, ಇದರಿಂದ ಪ್ರತಿದಿನ ಎಷ್ಟು ಜನ ಬಂದು ಹೋಗುತ್ತಾರೆ ಎಂಬ ಮಾಹಿತಿ ದೊರೆಯುತ್ತದೆ ಎಂದರು. ದಿನಕ್ಕೆ ಒಬ್ಬರಂತೆ ಸರತಿಯಲ್ಲಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಗುಣಮಟ್ಟ ಪರೀಕ್ಷಿಸಿ ಸಹಿ ಹಾಕಬೇಕು; ಇದು ಬಡವರಿಗಾಗಿ ಮಾಡುತ್ತಿರುವ ಕೆಲಸವಾದ್ದರಿಂದ ಪಾರದರ್ಶಕವಾಗಿರಿ ಎಂದು ಕಿವಿಮಾತು ಹೇಳಿದರು.

ನಗರಾಭಿವೃದ್ಧಿ ಸಚಿವನಾಗಿದ್ದ ಅನುಭವದಲ್ಲಿ ಸ್ವಚ್ಛತೆ ಸವಾಲಿನ ಕೆಲಸ, ಪೌರಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂದ ಅವರು, ತಂತ್ರಜ್ಞಾನ ಬಳಸಿಕೊಂಡು ವೇಗವಾಗಿ ಕೆಲಸ ಮಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ನೆರವಿಗೆ ನಿಲ್ಲಲಿವೆ ಎಂದರು. ಪೌರಕಾರ್ಮಿಕರಿಗಾಗಿ ಮನೆಗಳ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ಪ್ರತಿ ಕ್ಷೇತ್ರದಲ್ಲೂ ಬಡವರಿಗೆ ನಿವೇಶನ ಹಂಚಿಕೆ ಮಾಡುವ ದಿಟ್ಟ ತೀರ್ಮಾನ ಮಾಡಿದೆ; ತಮಗೆ ಐದು ವರ್ಷಕ್ಕೊಮ್ಮೆ ಜನರ ಮುಂದೆ ಹೋಗಿ ಅಧಿಕಾರ ನವೀಕರಿಸಿಕೊಳ್ಳಬೇಕು, ಅವರಿಗೆ ಹಾಗಿಲ್ಲ, ಬದ್ಧತೆಯಿಂದ ಕೆಲಸ ಮಾಡಿ ಎಂದರು.

“ಇಂದಿರಾ ಅಂದರೆ ಹಸಿವು ದೂರ. ಇಂದಿರಾ ಅಂದರೆ ಬಡತನ ದೂರ” ಎಂದ ಅವರು, ಇಂದಿರಾ ಗಾಂಧಿ ದೇಶದ ಆರ್ಥಿಕತೆ ಹಾಗೂ ಬಡವರ ಬದುಕಿಗೆ ಬಲ ತುಂಬಿದ ಧೀಮಂತ ಮಹಿಳೆ ಎಂದರು. ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಸರ್ಕಾರದ ಗುರಿ; ಬೆಲೆ ಗಗನಕ್ಕೇರುತ್ತಿದ್ದು ಆದಾಯ ಪಾತಾಳಕ್ಕೆ ಹೋಗುತ್ತಿದ್ದರೂ ಅನ್ನಭಾಗ್ಯ ನೀಡುತ್ತಿದ್ದೇವೆ, ಇಂದಿರಾ ಕ್ಯಾಂಟೀನ್ ಮುಂದುವರಿಸುತ್ತಿದ್ದೇವೆ ಎಂದು ಹೇಳಿದರು.

ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದರು, ಎಸ್.ಎಂ. ಕೃಷ್ಣ ಬಿಸಿಯೂಟ ಆರಂಭಿಸಿದರು, ಬಡವರ ಪರ ಚಿಂತಿಸುವವರು ಕಾಂಗ್ರೆಸ್ ನಾಯಕರು ಮಾತ್ರ ಎಂದು ಅವರು ಹೇಳಿದರು. “ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ, ಬದುಕಿನ ಮೇಲೆ ಮಾಡುತ್ತೇವೆ” ಎಂದ ಅವರು, 1 ಕೋಟಿ 22 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ಕೊಡುತ್ತಿದ್ದೇವೆ, ಉಚಿತ ಬಸ್ ಪ್ರಯಾಣದಿಂದ ಅವರ ಆರ್ಥಿಕ ಸಾಮರ್ಥ್ಯ ಹೆಚ್ಚಿದೆ ಎಂದರು. ಜನಪರ ಯೋಜನೆಗಳು, ಇ-ಖಾತೆ ಮತ್ತು ಭೂಮಿ ಗ್ಯಾರಂಟಿಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ತಿಳಿಸಿದರು.

ತಾವು ತಮ್ಮ ಚಿತ್ರಮಂದಿರಕ್ಕೆ ಇಂದಿರಾ ಎಂದು ಹೆಸರಿಟ್ಟ ಪ್ರಸಂಗವನ್ನು ಶಿವಕುಮಾರ್ ನೆನೆದರು. ಯುವ ಕಾಂಗ್ರೆಸ್ ಸಭೆಗಾಗಿ ದೆಹಲಿಗೆ ರೈಲಿನಲ್ಲಿ ಹೋಗುತ್ತಿದ್ದಾಗ ರೈಲು ದೊಡ್ಡಬಳ್ಳಾಪುರದವರೆಗೆ ಹೋಗಿ ನಿಂತಿತು, ಆಗ ಇಂದಿರಾ ಗಾಂಧಿ ಹತ್ಯೆಯಾಗಿದೆ ಎಂದು ತಿಳಿಯಿತು ಎಂದರು. ಕೆಲವು ದಿನಗಳ ಹಿಂದೆಯಷ್ಟೇ ಚಿತ್ರಮಂದಿರ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಅಂದಿನ ಜಿಲ್ಲಾಧಿಕಾರಿ ಪುಟ್ಟರಂಗಪ್ಪ ಅವರು ಇಂದಿರಾ ಗಾಂಧಿ ಎಂದು ಹೆಸರಿಡಲು ಸಲಹೆ ನೀಡಿದರು ಎಂದು ಹೇಳಿದರು. ಇಂದಿರಾ ಗಾಂಧಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರಿಂದ ಇಂದು ಮನೆ ಬಾಗಿಲಿಗೆ ಬಂದು ಬ್ಯಾಂಕ್‌ನವರು ಸಾಲ ನೀಡುತ್ತಿದ್ದಾರೆ, ರಾಜೀವ್ ಗಾಂಧಿ ತಂತ್ರಜ್ಞಾನ ಕ್ರಾಂತಿ ಮಾಡಿದ್ದರಿಂದ ಇಂದು ಮೊಬೈಲ್, ಲ್ಯಾಪ್‌ಟಾಪ್ ಬಳಸುತ್ತಿದ್ದೇವೆ ಎಂದು ನೆನಪಿಸಿಕೊಂಡರು.

ಇದೇ ಗುರುವಾರ ಇದಕ್ಕೂ ಮುನ್ನ, ಇಂದಿರಾ ಕ್ಯಾಂಟೀನ್‌ಗಳಿಗೆ ಶಾಸಕರು, ಅಧಿಕಾರಿಗಳು ಪ್ರತಿ ತಿಂಗಳು ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಬೇಕು ಎಂದು ಸೂಚಿಸಿದ್ದೇನೆ ಎಂದು ಶಿವಕುಮಾರ್ ಹೇಳಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ತನ್ನ ಕಡಲೆಕಾಯಿ ಎಣ್ಣೆ ಅಸಲಿ ಕೋಲ್ಡ್ ಪ್ರೆಸ್ಡ್, ಇದು ಲೇಬಲ್ ವಿಚಾರ ಮಾತ್ರ ಎಂದ ಬೋಲಾಸ್ ಆಗ್ರೋ; ತಪ್ಪು ಲೇಬಲ್ ಉಲ್ಲೇಖಿಸಿದ್ದ ಆರೋಗ್ಯ ಇಲಾಖೆ ಟಿಪ್ಪಣಿ
Next: ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ

Latest Post

ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಕಟ್ಟಡಗಳು, ಲಾಂಛನ ಮತ್ತು ಹೆಸರಿನೊಂದಿಗೆ

ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ

November 19, 2026 7:43 PM
ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ

ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ

November 19, 2026 7:43 PM
ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ ಹೂವಿನ ಅಲಂಕಾರದ ವೇದಿಕೆಯಲ್ಲಿ ಹಿನ್ನೆಲೆಯಲ್ಲಿ ದೊಡ್ಡ ರಾಷ್ಟ್ರಧ್ವಜದ ಮುಂದೆ ತ್ರಿವರ್ಣ ಶಾಲು ಹಾಕಿದ ಕಾಂಗ್ರೆಸ್ ನಾಯಕರು

ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ

November 19, 2026 7:40 PM
ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ ಇಂದಿರಾ ಕ್ಯಾಂಟೀನ್ ಕುರಿತ ಹಿನ್ನೆಲೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸ್ಮರಣಿಕೆ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ

November 19, 2026 7:37 PM
ತನ್ನ ಕಡಲೆಕಾಯಿ ಎಣ್ಣೆ ಅಸಲಿ ಕೋಲ್ಡ್ ಪ್ರೆಸ್ಡ್, ಇದು ಲೇಬಲ್ ವಿಚಾರ ಮಾತ್ರ ಎಂದ ಬೋಲಾಸ್ ಆಗ್ರೋ; ತಪ್ಪು ಲೇಬಲ್ ಉಲ್ಲೇಖಿಸಿದ್ದ ಆರೋಗ್ಯ ಇಲಾಖೆ ಟಿಪ್ಪಣಿ ಬೋಲಾಸ್ ಕಡಲೆಕಾಯಿ ಎಣ್ಣೆಯ ಬಾಟಲಿಯನ್ನು ಹಿಡಿದಿರುವ ಕೈ
  • Uncategorized

ತನ್ನ ಕಡಲೆಕಾಯಿ ಎಣ್ಣೆ ಅಸಲಿ ಕೋಲ್ಡ್ ಪ್ರೆಸ್ಡ್, ಇದು ಲೇಬಲ್ ವಿಚಾರ ಮಾತ್ರ ಎಂದ ಬೋಲಾಸ್ ಆಗ್ರೋ; ತಪ್ಪು ಲೇಬಲ್ ಉಲ್ಲೇಖಿಸಿದ್ದ ಆರೋಗ್ಯ ಇಲಾಖೆ ಟಿಪ್ಪಣಿ

November 19, 2026 6:42 PM
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಒನ್ ಅಭಿಯಾನದಡಿ 273 ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು; ದಂಡ, ಕಾನೂನು ಕ್ರಮದ ಎಚ್ಚರಿಕೆ ನಗರದ ರಸ್ತೆಯಲ್ಲಿ ಕಂಬಕ್ಕೆ ಒರಗಿದ ಬಿದ್ದಿರುವ ಬ್ಯಾನರ್ ಚೌಕಟ್ಟು; ಹಿಂದೆ ವಾಹನ ಸಂಚಾರ ಮತ್ತು ಕಟ್ಟಡಗಳು

ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಒನ್ ಅಭಿಯಾನದಡಿ 273 ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು; ದಂಡ, ಕಾನೂನು ಕ್ರಮದ ಎಚ್ಚರಿಕೆ

November 19, 2026 6:37 PM

ನೀವು ತಪ್ಪಿಸಿಕೊಂಡಿರಬಹುದು

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಕಟ್ಟಡಗಳು, ಲಾಂಛನ ಮತ್ತು ಹೆಸರಿನೊಂದಿಗೆ

ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ

The Bengaluru Live November 19, 2026 7:43 PM
ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ

ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ

The Bengaluru Live November 19, 2026 7:43 PM
ಹೂವಿನ ಅಲಂಕಾರದ ವೇದಿಕೆಯಲ್ಲಿ ಹಿನ್ನೆಲೆಯಲ್ಲಿ ದೊಡ್ಡ ರಾಷ್ಟ್ರಧ್ವಜದ ಮುಂದೆ ತ್ರಿವರ್ಣ ಶಾಲು ಹಾಕಿದ ಕಾಂಗ್ರೆಸ್ ನಾಯಕರು

ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ

The Bengaluru Live November 19, 2026 7:40 PM
ಇಂದಿರಾ ಕ್ಯಾಂಟೀನ್ ಕುರಿತ ಹಿನ್ನೆಲೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸ್ಮರಣಿಕೆ ಹಿಡಿದಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ

The Bengaluru Live November 19, 2026 7:37 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕೆಇಎ: ನ.20ರಿಂದ 22ರವರೆಗೆ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಸೇರಿ ವಿವಿಧ ನೇಮಕಾತಿ ಪರೀಕ್ಷೆ; ವೆಬ್ ಕಾಸ್ಟಿಂಗ್, ಕಟ್ಟೆಚ್ಚರ
  • ಪಿಜಿ ವೈದ್ಯಕೀಯ ಎರಡನೇ ಸುತ್ತು: ಮುಂಗಡ ಹಣ ಪಾವತಿಗೆ ನ.21ರವರೆಗೆ ದಿನಾಂಕ ವಿಸ್ತರಣೆ; ಆಪ್ಷನ್ಸ್ ದಾಖಲಿಸಲು ನ.23ರವರೆಗೆ ಅವಕಾಶ
  • ವಯೋಸಹಜ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದ ಸಿದ್ದರಾಮಯ್ಯ; ಕಾಂಗ್ರೆಸ್‌ನಲ್ಲಿ ಕಡೆಗಣನೆ ಆರೋಪ ನಿರಾಕರಣೆ
  • ವಾಹನ ದಟ್ಟಣೆ ನಿಯಂತ್ರಣಕ್ಕೆ ನೂತನ ರಸ್ತೆ ಗ್ರಿಡ್ ವ್ಯವಸ್ಥೆ: ಇಂದಿರಾ ಕ್ಯಾಂಟೀನ್ ಕಾರ್ಯಕ್ರಮದಲ್ಲಿ ಸಿಎಂ ಶಿವಕುಮಾರ್; ಕಳ್ಳ ಬಿಲ್‌ಗೆ ಅಧಿಕಾರಿಗಳಿಗೆ ಎಚ್ಚರಿಕೆ
©Copyright 2025 The Bengaluru Live All rights reserved. | MoreNews by AF themes.