Bengaluru | Sabotage conspiracy case: NIA raids at six locations, probe continues | Bengaluru | ವಿಧ್ವಂಸಕ ಕೃತ್ಯಕ್ಕೆ ಸಂಚು ಪ್ರಕರಣ: ಆರು ಕಡೆ ಎನ್ಐಎ ದಾಳಿ
ಬೆಂಗಳೂರು:
ಉಗ್ರ ಚಟುವಟಿಕೆಗಳ ನಿಗ್ರಹದ ಹೊಣೆ ಹೊತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಕೆಲ ದಿನಗಳ ಹಿಂದಷ್ಟೇ ಕರ್ನಾಟಕ, ಕೇರಳ ಸೇರಿ ಹಲವು ಭಾಗಗಳಲ್ಲಿ ದಾಳಿ ನಡೆಸಿದ್ದರು. ಇದೀಗ ಮತ್ತೆ ದಾಳಿ ನಡೆದಿದೆ.
ಕೇರಳ ಹಾಗೂ ಕರ್ನಾಟಕದ ಹಲವು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ 12 ಕಡೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಡಿಸೆಂಬರ್ 9ರಂದು ದಾಳಿ ನಡೆಸಿದಾಗ ಅಲಿ ಅಬ್ಬಾಸ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಮುಂಬೈ ಮೂಲದವನಾಗಿದ್ದು, ನಾಲ್ಕು ವರ್ಷದ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದ.
ಪುಲಿಕೇಶಿನಗರದ ಮನೆಯೊಂದರ ಮೂರನೇ ಮಹಡಿಯಲ್ಲಿ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದ. ಖಾಸಗಿ ಕಂಪನಿಯಲ್ಲಿ ಡಾಟಾ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಲಿ ಅಬ್ಬಾಸ್‌ಗೆ ಐಸಿಸ್ ನಂಟು ಇದೆ ಎಂದು ತಿಳಿದುಬಂದಿದೆ