ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ಜಾರಿ
ಬೆಂಗಳೂರು:
ರಾಜ್ಯದಲ್ಲಿ ಕೊರೊನಾ ಪ್ರಕರಣ ಕೈಮೀರಿರುವ ಬೆನ್ನಲ್ಲೇ ರಾಜ್ಯ ಸರಕಾರ ಹೊಸ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಏಪ್ರಿಲ್ 21ರ ರಾತ್ರಿ 9ರಿಂದ ಮೇ 4ರ ಬೆಳಗ್ಗೆ 6 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ.
ಅದೇ ರೀತಿ ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದ್ದಾರೆ.
ನೈಟ್ ಕರ್ಪ್ಯೂ ಸಮಯದಲ್ಲಿ ಕೂಡ ಬದಲಾವಣ ಮಾಡಲಾಗಿದೆ. ರಾತ್ರಿ 10ರ ಬದಲು, ರಾತ್ರಿ 9 ಗಂಟೆಯಿಂದಲೇ ಕರ್ಫ್ಯೂ ಆರಂಭವಾಗಿ, ಬೆಳಗ್ಗೆ 6 ಗಂಟೆವೆರೆಗೆ ಜಾರಿಯಲ್ಲಿರಲಿದೆ. ವಾರಾಂತ್ಯದಲ್ಲಿ ವೀಕೆಂಡ್ ಕರ್ಪ್ಯೂ (ಸಂಪೂರ್ಣ ಲಾಕ್‌ಡೌನ್) ಜಾರಿಯಾಗಿದ್ದು, ಅನಗತ್ಯವಾಗಿ ಯಾರೂ ಹೊರಗೆ ಬರುವಂತಿಲ್ಲ.
ಮದ್ಯದ ಅಂಗಡಿಗಳು ಕೂಡ ಬಂದ ಆಗಲಿದೆ. ಬಾರ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ಅವಕಾಶವಿಲ್ಲ. ಆದರೆ ಮದ್ಯವನ್ನು ಪಾರ್ಸಲ್ ಪಡೆಯಲು ಅವಕಾಶವಿದೆ.
ಸ್ವಿಮ್ಮಿಂಗ್ ಪೂಲ್, ಆಟದ ಮೈದಾನ, ಧಾರ್ಮಿಕ ಕೇಂದ್ರಗಳು ಬಂದ್. ಮಾರ್ಕೆಟ್‌ಗಳನ್ನು ಸ್ಥಳಾಂತರಿಸಲಾಗುವುದು. ಶಾಲೆ- ಕಾಲೇಜುಗಳನ್ನು ಬಂದ್ ಮಾಡಲಾಗುವುದು. ಬಾರ್, ರೆಸ್ಟೋರಂಟ್‌ಗಳು ಬಂದ್ ಆಗಲಿವೆ. ಪಾರ್ಸಲ್‌ಗಷ್ಟೇ ಅವಕಾಶವಿದೆ ಎಂದು ತಿಳಿಸಿದ್ದಾರೆ.