Home ಆರೋಗ್ಯ ಕರ್ನಾಟಕದಲ್ಲಿಂದು 21,794 ಹೊಸ ಪ್ರಕರಣ, 149 ಸಾವು

ಕರ್ನಾಟಕದಲ್ಲಿಂದು 21,794 ಹೊಸ ಪ್ರಕರಣ, 149 ಸಾವು

17
0
bengaluru

ಬೆಂಗಳೂರಿನಲ್ಲಿ 13,782 ಮಂದಿ ಸೋಂಕಿತರಾಗಿರುವುದು ದೃಢ

ಬೆಂಗಳೂರು:

ಕರ್ನಾಟಕದಲ್ಲಿಂದು 21,794 ಮಂದಿ ಸೋಂಕಿತರಾಗಿರುವುದು ಹಾಗೂ 149 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ಕರ್ನಾಟಕದಲ್ಲಿ ಸೋಂಕು ದೃಢ ಪ್ರಮಾಣ ಶೇ 14.77ಕ್ಕೆ ಏರಿಕೆಯಾಗಿದೆ. ಮರಣ ಪ್ರಮಾಣ ದರ ಶೇ 0.68ಕ್ಕೆ ತಲುಪಿದೆ.

ರಾಜ್ಯದ 23 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಮೂರಂಕಿ ತಲುಪಿದೆ. ಬೆಂಗಳೂರಿನಲ್ಲಿ 13,782 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ತುಮಕೂರಿನಲ್ಲಿ 1,055 ಮಂದಿ ಸೋಂಕಿತರಾಗಿದ್ದಾರೆ. ಕಲಬುರ್ಗಿ 818, ಮೈಸೂರು 699, ದಕ್ಷಿಣ ಕನ್ನಡ 482, ಹಾಸನ 410, ಬಳ್ಳಾರಿ 406, ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.

bengaluru

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ 92 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ 13 ಮಂದಿ, ಬೀದರ್‌ನಲ್ಲಿ ಏಳು ಮಂದಿ, ಬಳ್ಳಾರಿಯಲ್ಲಿ ಐವರು, ತುಮಕೂರು, ಮೈಸೂರು ಹಾಗೂ ಧಾರವಾಡದಲ್ಲಿ ತಲಾ ನಾಲ್ಕು ಮಂದಿ, ಶಿವಮೊಗ್ಗದಲ್ಲಿ ಇಬ್ಬರು, ಯಾದಗಿರಿ, ಉಡುಪಿ, ರಾಮನಗರ, ರಾಯಚೂರು, ಕೋಲಾರ, ಕೊಡಗು, ಚಿಕ್ಕಮಗಳೂರು ಹಾಗೂ ಚಾಮರಾಜನಗರದಲ್ಲಿ ತಲಾ ಒಬ್ಬರು ಮರಣ ಹೊಂದಿದ್ದಾರೆ. ಈವರೆಗೆ ಮೃತಪಟ್ಟವರ ಸಂಖ್ಯೆ 13,646ಕ್ಕೆ ಏರಿಕೆಯಾಗಿದೆ.

bengaluru

LEAVE A REPLY

Please enter your comment!
Please enter your name here