Home ಬೆಂಗಳೂರು ನಗರ ವಿಶ್ವದ ಗಮನ ಸೆಳೆದಿರುವ ಬೆಂಗಳೂರಿನ ಕನ್ನಡೇತರರಿಗೆ ಕನ್ನಡ ಕಲಿಸುವುದು ಅಗತ್ಯ: ಲಿಂಬಾವಳಿ

ವಿಶ್ವದ ಗಮನ ಸೆಳೆದಿರುವ ಬೆಂಗಳೂರಿನ ಕನ್ನಡೇತರರಿಗೆ ಕನ್ನಡ ಕಲಿಸುವುದು ಅಗತ್ಯ: ಲಿಂಬಾವಳಿ

18
0

ಬೆಂಗಳೂರು:

ವಿಶ್ವದ ಗಮನ ಸೆಳೆದಿರುವ ಬೆಂಗಳೂರಿನ ಕನ್ನಡೇತರರಿಗೆ ಕನ್ನಡ ಕಲಿಸುವುದು ಅಗತ್ಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಸಚಿವಾದ ಶ್ರೀ ಅರವಿಂದ ಲಿಂಬಾವಳಿ ಅವರು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಕಾಸಸೌಧದಲ್ಲಿಂದು ಹಮ್ಮಿಕೊಳ್ಳಾಗಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ 2 ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸುತ್ತಲಿರುವ ಒಬ್ಬ ಕನ್ನಡೇತರರಿಗಾದರೂ ಕನ್ನಡ ಕಲಿಸುವ ಪ್ರತಿಜ್ಞೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ಅಭಿಪ್ರಾಯ ಪಟ್ಟರು.

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಿಶ್ವದ ವಿವಿಧೆಡೆಯಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಕನ್ನಡೇತರರು ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲಿತು ಅಭಿಮಾನಿಸಿ ಕನ್ನಡದ ಸಾರ್ವಭೌಮತೆಗೆ ಶ್ರಮಿಸಬೇಕಿದೆ. ಕನ್ನಡಿಗ ಸಾಫ್ಟ್ ವೇರ್ ತಜ್ಞರೊಬ್ಬರು ಕನ್ನಡದ ‘ಗುರು’ ಪದವನ್ನು ವಿಶ್ವವ್ಯಾಪಿಯಾಗಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಅದೇ ರೀತಿ ಪ್ರತಿಯೊಬ್ಬರೂ ಒಂದೊಂದು ಪದವನ್ನು ಪಸರಿಸುತ್ತಾ ಹೋದಲ್ಲಿ ಕನ್ನಡ ತಾನಾಗಿಯೇ ವಿಶ್ವಮಟ್ಟಕ್ಕೆ ಏರಲಿದೆ ಎಂದರು.

Kannada Development Authority Arvind Limbavali1

ಕರ್ನಾಟಕ ಶ್ರೀಗಂಧವಿದ್ದಂತೆ; ಅದನ್ನು ತೇದಿದಂತೆ ಪರಿಮಳಹೊಮ್ಮುವ ರೀತಿಯಲ್ಲಿ ಸುಮಧುರವಾದ ಕನ್ನಡವನ್ನು ಯಥೇಚ್ಛವಾಗಿ ಬಳಸಿದಲ್ಲಿ ಕನ್ನಡ ವಿಶ್ವವ್ಯಾಪಿಯಾಗಲಿದೆ ಎಂದ ಸಚಿವರು, ಮುಖ್ಯಮಂತ್ರಿಗಳು ಕನ್ನಡ ಕಾಯಕ ವರ್ಷಾಚರಣೆ ಘೋಸಿಸಿದ್ದು, ಪ್ರಾಧಿಕಾರವು ಆ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿದೆ. ಅದರ ಜೊತೆಗೆ ‘ಕನ್ನಡ ಕಾಯಕ ವರ್ಷವನ್ನು ನಮ್ಮೆಲ್ಲರ ಕಾಯಕ ವರ್ಷಾ’ ಎಂದು ಭಾವಿಸಿ ಕನ್ನಡ ಕಟ್ಟುವಿಕೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆನೀಡಿದರು.

ಕನ್ನಡ ಕಲಿಸುವೆಂದರೆ ಕಂಗ್ಲಿಷ್ ಕಲಿಸುವುದಲ್ಲ; ಬದಲಿಗೆ ಆಡುಭಾಷೆ ಕನ್ನಡವನ್ನು ಅಭಿಮಾನ ಮೂಡುವಂತೆ ಕಲಿಸುವುದು ಬಹಳ ಮುಖ್ಯವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ ಮಹತ್ವದ ಕಾರ್ಯ ಹಮ್ಮಿಕೊಂಡಿವುದು ಅಭಿನಂದನೀಯ ಎಂದು ಹೇಳಿದ ಅವರು, ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟದ ದಿನಗಳನ್ನು ಸ್ಮರಿಸಿಕೊಂಡರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿರುವ ಕನ್ನೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ ಕಾರ್ಯಾಗಾರವು ಅತ್ಯಂತ ಉಪಯೋಗವಾಗಿದ್ದು, ಕನ್ನಡೇತರರಿಗೆ ಆಡುಭಾಷೆ ಕನ್ನಡವನ್ನು ಕಲಿಸುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್.ನಾಗಾಭರಣ ಅವರು ಮಾತನಾಡಿ, ಕನ್ನಡೇತರಿಗೆ ಯಾವ ರೀತಿ ಅಭಿಮಾನ ಪೂರ್ವಕವಾಗಿ ಕಲಿಸಬೇಕು ಎಂಬುದನ್ನು ಈ ಕಾರ್ಯಾಗಾರದದಲ್ಲಿ ಹೇಳಿಕೊಡಲಾಗುವುದು. ಅದರಂತೆ ಮತ್ತು ಆಯಾ ಪ್ರಾದೇಶಿಕತೆಗೆ ಪೂರಕವಾಗಿ ಪಠ್ಯಕ್ರಮಗಳನ್ನು ರೂಪಿಸಿಕೊಂಡು ಕನ್ನಡ ಕಲಿಸುವಂತೆ ಸಲಹೆ ನೀಡಿದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಪ್ರೊ. ಅಬ್ದುಲ್ ರೆಹಮಾನ್ ಪಾಷಾ, ಡಾ.ಕಿಶೋರ್ , ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here