Home ಸಿನಿಮಾ ಈ ವೀಕೆಂಡ್‌ಗೆ ಆನ್‌ಲೈನ್‌ನಲ್ಲಿ ʼಕಲಾನಿಧಿʼ ಸಂಗೀತ ಸುಧೆ

ಈ ವೀಕೆಂಡ್‌ಗೆ ಆನ್‌ಲೈನ್‌ನಲ್ಲಿ ʼಕಲಾನಿಧಿʼ ಸಂಗೀತ ಸುಧೆ

85
0
Advertisement
bengaluru

ನಾಳೆಯಿಂದ 3 ದಿನ ಪ್ರಸಾರ: ಉದಾರವಾಗಿ ದೇಣಿಗೆ ನೀಡಿ ಎಂದು ಜನರನ್ನು ಕೋರಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ಸಂಸದ ತೇಜಸ್ವೀ ಸೂರ್ಯ, ಗಾಯಕರಾದ ವಿಜಯ್ ಪ್ರಕಾಶ್

ಬೆಂಗಳೂರು:

ಕೋವಿಡ್ ನಿಂದ ಸಂಕಷ್ಟಕ್ಕೊಳಗಾಗಿರುವ ಸಂಗೀತಗಾರರು/ಕಲಾವಿದರ ಸಹಾಯಾರ್ಥವಾಗಿ ‘ಕಲಾನಿಧಿ 2021’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು,ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರು,ಈ ಕಾರ್ಯಕ್ರಮಕ್ಕೆ ಗುರುವಾರದಂದು ಚಾಲನೆ ನೀಡಿದರು.

ದೇಶದ ಪ್ರಖ್ಯಾತ ಕಲಾವಿದರು ಈ ಆನ್ ಲೈನ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಉಪಮುಖ್ಯಮಂತ್ರಿ ಸಿ ಎನ್ ಅಶ್ವತ್ಥ್ ನಾರಾಯಣ್ ರ ಸಹಕಾರದೊಂದಿಗೆ, ಕನ್ನಡದ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್ ರ ಉಸ್ತುವಾರಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ.

ಸಂಗೀತ ಕಾರ್ಯಕ್ರಮಗಳು ಸಂಸದ ತೇಜಸ್ವಿ ಸೂರ್ಯ, ವಿಜಯ್ ಪ್ರಕಾಶ್ ಹಾಗೂ ShaaleDotCom ನ ಫೇಸ್ಬುಕ್ ಪೇಜ್ ಗಳಲ್ಲಿ ಜೂನ್ 25 ರಿಂದ 27 ರ ವರೆಗೆ ಸಂಜೆ ಪ್ರೈಮ್ ಟೈಮ್ ನಲ್ಲಿ ಪ್ರಸಾರವಾಗಲಿದ್ದು, ದೇಶದ ಖ್ಯಾತ ಗಾಯಕ ಶ್ರೀ ಸೋನು ನಿಗಮ್ ರವರು ಜೂನ್ 27 ರಂದು ವಿಶೇಷ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿರುವುದು ವಿಶೇಷ.

bengaluru bengaluru

ಇತರ ಸಂಗೀತಗಾರರು/ಗಾಯಕರಾದ ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಗುರುಕಿರಣ್, ರಘು ದೀಕ್ಷಿತ್, ವಿಜಯ್ ಪ್ರಕಾಶ್, ಅನುರಾಧ ಭಟ್ ಸೇರಿದಂತೆ ಅನೇಕ ಕಲಾವಿದರು ಈ ಸದುದ್ದೇಶದ ಕಾರ್ಯಕ್ರಮದಲ್ಲಿ ಜೊತೆಯಾಗಿರುತ್ತಾರೆ. ಶಾಸ್ತ್ರೀಯ ಸಂಗೀತಪಟುಗಳಾದ ವಿದ್ಯಾಭೂಷಣರು, ಆನೂರು ಅನಂತಕೃಷ್ಣ ಶರ್ಮ ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷ.

Online fund raiser concerts for musicians from June 25 to 27 DCM Tejasvi and Vijay Prakash1

‘ಕಲಾನಿಧಿ 2021’ ಅಭಿಯಾನದ ಕುರಿತು ಮಾತನಾಡಿದ ಸಂಸದ ತೇಜಸ್ವೀ ಸೂರ್ಯ ರವರು, “ಕಲೆ,ಸಂಗೀತವು ನಮ್ಮೆದುರು ಇರುವ ಸವಾಲುಗಳನ್ನು ಎದುರಿಸಲು ನವಚೈತನ್ಯ ಒದಗಿಸುತ್ತವೆ. ಆದರೆ, ಕೋವಿಡ್ 2ನೇ ಅಲೆಯು ಕಲೆ & ಕಲಾವಿದರಿಗೆ ಹಲವು ಅವಕಾಶಗಳಿಂದ ವಂಚಿತರನ್ನಾಗಿಸಿದ್ದು, ಕಲೆಯನ್ನೇ ನಂಬಿಕೊಂಡು ಬದುಕಿರುವ ಹಲವಾರು ಕುಟುಂಬಗಳಿಗೆ ಅನಿರೀಕ್ಷಿತವಾಗಿ ಒದಗಿಬಂದಿರುವ ಕರೋನ ಸಾಂಕ್ರಾಮಿಕದ ಹೊಡೆತವು ಜರ್ಝರಿತರನ್ನಾಗಿಸಿದೆ. ಕಲೆಯು ಉಳಿಯಬೇಕೆಂದರೆ,ಕಲಾವಿದರ ಯೋಗಕ್ಷೇಮವೂ ಅವಶ್ಯಕ.

”ಕಲಾನಿಧಿ 2021′ ದೇಶದ ಪ್ರಮುಖ ಕಲಾವಿದರು, ಮಾನವೀಯ ಕಳಕಳಿಗೆ ಒಂದಾಗುತ್ತಿರುವ ಮುಖ್ಯ ವೇದಿಕೆಯಾಗಿದ್ದು, ಈ ಕಾರ್ಯಕ್ಕೆ ಹರಿದುಬರುವ ನಿಧಿಯನ್ನು ಬೆಂಗಳೂರು & ರಾಜ್ಯಾದ್ಯಂತ ಇರುವ ಸಾವಿರಾರು ಕಲಾವಿದರಿಗೆ ನೇರವಾಗಿ ಅವರ ಬ್ಯಾಂಕ್ ಅಕೌಂಟ್ ಖಾತೆಗಳಿಗೆ ಸಂದಾಯ ಮಾಡಲಾಗುವುದು.ಈ ವೇದಿಕೆಯಡಿಯಲ್ಲಿ ಕಲಾವಿದರು, ಸಹಕಲಾವಿದರ ಸಂಕಷ್ಟದ ಸಮಯದಲ್ಲಿ ಕೈಜೋಡಿಸಲಿದ್ದು, ನಿಮ್ಮ ಕಾಣಿಕೆಯು ಇಂತಹ ಅನಿರೀಕ್ಷಿತ ಸನ್ನಿವೇಶದಲ್ಲಿ ಕಲಾವಿದರ ಕುಟುಂಬಗಳಿಗೆ ಸಹಾಯವಾಗಲಿದೆ.” ಎಂದು ವಿವರಿಸಿದರು.

ಈ ಕಾರ್ಯಕ್ಕೆ ಬರುವ ನಿಧಿಗೋಸ್ಕರ ಮಿಲಾಪ್ ಜಾಲತಾಣವನ್ನು http://bit.ly/kalanidhi2021 ಆರಂಭಿಸಲಾಗಿದ್ದು, ಇಲ್ಲಿಗೆ ಹರಿದುಬರುವ ಮೊತ್ತವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದರು ನಾಮನಿರ್ದೇಶನಗೊಳಿಸಲಿರುವ ಅರ್ಹ ಫಲಾನುಭವಿ ಕಲಾವಿದರ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಲಾಗುವುದು .

‘ಕಲಾನಿಧಿ 2021’ರ ಕುರಿತು ಇದೇ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಶ್ರೀ ಸಿ ಎನ್ ಅಶ್ವತ್ಥ್ ನಾರಾಯಣ್ ರವರು,” ಈ ಕಾರ್ಯಕ್ರಮದ ಮೂಲಉದ್ದೇಶ ಸಾರ್ವಜನಿಕರಿಗೆ ಸಂಗೀತದ ರಸದೌತಣ ಒದಗಿಸುವುದರೊಂದಿಗೆ ಸಾಮಾಜಿಕ ಕಳಕಳಿಗೂ ಧ್ವನಿಯಾಗಲಿದೆ” ಎಂದು ತಿಳಿಸಿದರು.

ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ಗಾಯಕ ವಿಜಯ್ ಪ್ರಕಾಶ್ ಮಾತನಾಡಿ,” ಈ ಸದುದ್ದೇಶದ ಕಾರ್ಯಕ್ರಮಕ್ಕೆ ಸಹಕಾರ ಒದಗಿಸಿರುವ ಎಲ್ಲ ಕಲಾವಿದರು/ಸಂಗೀತಗಾರರಿಗೆ ನನ್ನ ಕೃತಜ್ಞತೆಗಳು.ನಮ್ಮ ಮನವಿಗೆ ಸ್ಪಂದಿಸಿ, ಈ ಕಾರ್ಯಕ್ರಮಕ್ಕೆ ಆಗಮಿಸಿರುವ ದೇಶದ ಖ್ಯಾತ ಸಂಗೀತಗಾರರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತ, ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸಲು ಈ ಕಾರ್ಯಕ್ರಮ ಆಯೋಜನಗೊಳಿಸಿರುವ ಸಂಸದ ತೇಜಸ್ವೀ ಸೂರ್ಯ, ಉಪಮುಖ್ಯಮಂತ್ರಿ ಸಿ ಎನ್ ಅಶ್ವಥ್ ನಾರಾಯಣ್ ರಿಗೂ ಧನ್ಯವಾದಗಳು” ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.

ಬ್ಯಾಂಕ್‌ ಖಾತೆಗೇ ಹಣ:

ದೇಣಿಗೆಯಿಂದ ಸಂಗ್ರಹವಾಗುವ ಹಣವನ್ನು ಸಂಕಷ್ಟದಲ್ಲಿರುವ ಸಂಗೀತ ಕಲಾವಿದರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಕೈಗೆ ನಗದು ಕೊಡುವ ವ್ಯವಹಾರವೇ ಇರುವುದಿಲ್ಲ. ಹೀಗಾಗಿ ಕಲಾನಿಧಿ ಕಾರ್ಯಕ್ರಮದ ಎಲ್ಲ ಹಣಕಾಸು ವ್ಯವಹಾರವೂ ಸಂಪೂರ್ಣ ಪಾರದರ್ಶಕ. ಆದ್ದರಿಂದ ಎಲ್ಲರೂ ಇಂಥ ಮಹತ್ತರ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಡಾ.ಅಶ್ವತ್ಥನಾರಾಯಣ ಕೋರಿದರು.

‘ಕಲಾನಿಧಿ 2021’ರ ಕಾರ್ಯಕ್ರಮಗಳು ಈ ಕೆಳಕಂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದ್ದು, ಸಾರ್ವಜನಿಕರು ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

http://facebook.com/surya.tejasvi.ls

http://facebook.com/vijayprakashofficial

http://facebook.com/shaaledotcom


bengaluru

LEAVE A REPLY

Please enter your comment!
Please enter your name here