ಕೊವಿಡ್-19 ಸಾಂಕ್ರಮಿಕ ರೋಗ ತಡೆಗಟ್ಟಲು ಮತ್ತು ಮಾನಸಿಕ ಹಾಗೂ ದೃೆಹಿಕ ಸಧೃಡರಾಗಲು ಯೋಗ, ವ್ಯಾಯಾಮ ಮಾಡಿ
ಬೆಂಗಳೂರು:
ಮಹಿಳಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಮತ್ತು ವರ್ಲ್ಡ್ ಬುಕ್ ಆಫ್ ದಿ ರೆಕಾರ್ಡ್ ಸೇರ್ಪಡೆಗೊಂಡ ಕಾಂತಿ ಸ್ವೀಟ್ಸ್ ಕಂಪನಿ ಸಹಯೋಗದಲ್ಲಿ ಜೂನ್ 21ರಂದು ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಜ಼ೂಮ್ ಮೂಲಕ ಅಚರಿಸಲಾಯಿತು.
ಯೋಗ ಅಧಿವೇಶನದಲ್ಲಿ ಅಕ್ಷರ ಯೋಗ ಫೌಂಡೇಷನ್ ಸಂಸ್ಥಾಪಕರಾದ ಗ್ರಾಂಡ್ ಮಾಸ್ಟರ್ ಅಕ್ಷರ್ ಹಾಗೂ ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯ ಉಪಾಧ್ಯಕ್ಷೆ ರಾಧಾ ಕೊಲ್ಲಿ, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ನೀತಿ ಆಯೋಗ ಅಧ್ಯಕ್ಷರಾದ ಡಾ.ವಿಶ್ವಪತಿ ತ್ರಿವೇದಿ ಮತ್ತು ಸುಪ್ರೀಂ ಕೋರ್ಟ್ ವಕೀಲ ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಅಧ್ಯಕ್ಷರಾದ ಸಂತೋಷ್ ಶುಕ್ಲಾ, ಮಹಾಬೋಧಿ ಅಂತರರಾಷ್ಟ್ರೀಯ ಧ್ಯಾನ ಕೇಂದ್ರದ ಸ್ಥಾಪಕ ಅಧ್ಯಕ್ಷ ಭಿಕ್ಕು ಸಂಘಸೆನ್ ರವರು ಉದ್ಘಾಟನಾ ಮುಖ್ಯ ಅತಿಥಿಯಾಗಿ ಮತ್ತು ಕಾಂತಿ ಸ್ವೀಟ್ಸ್ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಶಿಖಾ ಶರ್ಮಾ ರವರು ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಜ಼ೂಮ್ ಮೂಲಕ ಉದ್ಘಾಟನೆ ಮಾಡಿದರು.
ಕಾಂತಿ ಸ್ವೀಟ್ಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಶ್ರೀಮತಿ ಶಿಖಾ ಶರ್ಮಾ ರವರು ಮಾತನಾಡಿ ಯೋಗವು ಮನಸ್ಸಿನ ಯೋಗಕ್ಷೇಮದ ಬಗ್ಗೆ ಮಾತ್ರವಲ್ಲ, ಅದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಯೋಗದಿಂದ “ಜೀವನದಲ್ಲಿ ಸಾಮರಸ್ಯ ,ಶಾಂತಿ ,ನೆಮ್ಮದಿಯಿಂದ ಇರಬಹುದು ಎಂದು ಹೇಳಿದರು. ಸಾಂಕ್ರಾಮಿಕ-ಪ್ರೇರಿತ ಸವಾಲುಗಳನ್ನು ಎದುರಿಸುವಲ್ಲಿ ಯೋಗ ಉತ್ತಮ ವ್ಯಾಯಾಮವಾಗಿದೆ ಹಾಗೂ ಯೋಗ, ಪ್ರಾಣಯಾಮದಿಂದ ಮನುಷ್ಯರ ಜೀವನದಲ್ಲಿ ಶಾಂತಿ ,ನೆಮ್ಮದ್ದಿ ಮತ್ತು ತಾಳ್ಮೆ ಸಿಗುತ್ತದೆ.
ವಿಶ್ವದಲ್ಲಿ ಕೊವಿಡ್-19 ಸಾಂಕ್ರಾಮಿಕ ರೋಗಗಳು ಲಾಕ್‌ಡೌನ್‌ಗಳು, ಪ್ರಯಾಣದ ನಿರ್ಬಂಧಗಳು, ಸ್ಥಗಿತಗೊಂಡ ವ್ಯವಹಾರಗಳು ಮತ್ತು ಕಾರ್ಯಕ್ಷೇತ್ರಗಳು ಮತ್ತು ಮನೆಯಿಂದ ಕೆಲಸ ಮಾಡುವ (WFH) ಸಂಸ್ಕೃತಿಯೊಂದಿಗೆ ಆರ್ಥಿಕ ತೊಂದರೆಗಳು ಸೇರಿದಂತೆ ಇತರ ಅನಿಶ್ಚಿತತೆಗಳೂ ಜನರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.
“ಕೆಲಸ ಮಾಡುವ ಮಹಿಳೆಯರ ವಿಷಯದಲ್ಲಿ ಇದು ವಿಶೇಷವಾಗಿ ನಿಜವಾಗಿದೆ, ಅವರು ಆಫೀಸು ಕೆಲಸಗಳ ನಡುವೆ ತಮ್ಮ ಮನೆಗಳನ್ನು ಸಹ ನಿರ್ವಹಿಸಬೇಕಾಗಿದೆ”
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಅವರ ಪ್ರಕಾರ, ಬಿಕ್ಕಟ್ಟುಗಳನ್ನು ನಿಭಾಯಿಸಲು ಜನರಿಗೆ ಉತ್ತಮ ಸಹಾಯ ಮಾಡುತ್ತದೆ. ಭರವಸೆಯನ್ನು ನೀಡುತ್ತದೆ, ಕೋವಿಡ್ -19 ತಂದ ಕತ್ತಲೆಯ ಮಧ್ಯೆ ಬೆಳಕು ಚೆಲ್ಲುತ್ತದೆ. ಮತ್ತು ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ವಿಭಾಗಗಳಾದ್ಯಂತ ಸಂಕಷ್ಟದಲ್ಲಿ ಇರುವ ಜನರ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಅದು ಪರಿಣಾಮ ಬೀರುತ್ತದೆ. WICCI ಅಂತರಾಷ್ಟೀಯ ಯೋಗ ದಿನಾಚರಣೆಯ ಜ಼ೂಮ್ ಸಭೆಗೆ ಸೇರಿದ ಎಲ್ಲರಿಗೂ ಧನ್ಯವಾದಗಳು ಹಾಗೂ . “ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ ಸಂತೋಷ್ ಶುಕ್ಲಾ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತಾ, “WICCI ತನ್ನ ಸಾಮಾಜಿಕ ಹೊಣೆಗಾರಿಕೆಯನ್ನ ಉತ್ತಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.
ಮಹಾಬೋಧಿ ಅಂತರಾಷ್ಟೀಯ ಧ್ಯಾನ ಕೇಂದ್ರ ಸಂಸ್ಥಾಪಕರಾದ ಭಿಕ್ಕು ಸಂಘಸೆನ್ ರವರು ಮಾತನಾಡಿ ಯೋಗ ಮತ್ತು ಧ್ಯಾನದಿಂದ ಮಾನಸಿಕ ,ದೃಹಿಕ ಆರೋಗ್ಯ ಲಭಿಸುತ್ತದೆ. ಯೋಗದಿಂದ ಕುಟುಂಬ ಮತ್ತು ಸಮಾಜ ಉತ್ತಮ ಸ್ಥಿತಿಯಲ್ಲಿ ಇರುತ್ತದೆ ಎಂದು ಹೇಳಿದರು.
ಯೋಗ ಫೌಂಡೇಶನ್ ಸ್ಥಾಪಕರಾದ ಗ್ರಾಂಡ್ ಮಾಸ್ಟರ್ ಅಕ್ಷರ್ ರವರು ಮಾತನಾಡಿ ಯೋಗ ಮತ್ತು ಧ್ಯಾನ ,ಪ್ರಾಣಯಾಮ ಶಕ್ತಿ ಬಗ್ಗೆ ಅರಿತು ಅದರ ಪ್ರಯೋಜನ ತಿಳಿದು ಕಲಿಯಬೇಕು. ಯೋಗದಿಂದ ಅತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದರು.
*ಅಕ್ಷರ ಯೋಗ ಫೌಂಡೇಷನ್ ನಾ ಯೋಗ ಪಟು ವಿಷ್ಣು ಅವರಿಂದ ಯೋಗ ಮತ್ತು ಪ್ರಾಣಯಾಮದ ತರಬೇತಿ ಹಾಗೂ ಅದರ ಮಹತ್ವ ತಿಳಿಸಿಕೊಡಲಾಯಿತು.
ನೀತಿ ಆಯೋಗದ ಅಧ್ಯಕ್ಷರಾದ ವಿಶ್ವಪತಿ ತಿವೇದಿ ರವರು ಯೋಗ ಎಂದರೆ ನಮ್ಮ ದೇಶಕ್ಕೆ ಗೌರವ,ಹೆಮ್ಮೆ ತರುವ ವಿಷಯವಾಗಿದೆ . ಪ್ರತಿ ದಿನ ಯೋಗ ಮಾಡಬೇಕು ಎಂದು ಹೇಳಿದರು.
ಬಾಹ್ಯಕಾಶ ಮತ್ತು ಪರಿಸರ ವಿಜ್ಞಾನಿ ಮಿಥಿಲೇಶ್ ತಿವಾರಿ ರವರು ಮಾತನಾಡಿ ಅಂತರಾಷ್ಟೀಯ ಯೋಗ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ, ಯೋಗ ,ಧ್ಯಾನ ಮತ್ತು ಪ್ರಾಣಯಾಮ , ಏಕಾಗ್ರತೆ ,ಕುಂಡಿಲಿನಿ ಶಕ್ತಿ ಬಗ್ಗೆ ತಿಳಿಸಿಕೊಟ್ಟರು.
ಮಿಸೆಸ್ ಕರ್ನಾಟಕ ಶುಭಾ ಶ್ರೀರಾಮ್ ರವರು ಮತ್ತು ಶ್ರೀಮತಿ ವಸಂತ ಕವಿತಾ, (ಕರ್ನಾಟಕದ ಮೊದಲ ಮುಖ್ಯಮಂತ್ರಿಗಳಾದ ಶ್ರೀ ಕೆ.ಸಿ.ರೆಡ್ಡಿ ರವರ ಮೊಮ್ಮಗಳು), ಬಾಲಿವುಡ್ ನಟಿ ಮತ್ತು ನೃತ್ಯ ಸಂಯೋಜಕಿ ಅಶಿಮಾ ಶರ್ಮಾ, ಮಹೇಶ್ ಬ್ಯಾಂಗ್ (ದಕ್ಷಿಣ ಆಫ್ರಿಕಾದ ಪ್ರಸಿದ್ಧ ಜ್ಯೋತಿಷಿ), 110ವರ್ಷದ ಮ್ಯಾರಥಾನ್ ರನ್ನರ್ ಆಗಿರುವ ಫೌಜಾ ಸಿಂಗ್ ರವರುಗಳು ಮುಖ್ಯ ಅತಿಥಿಗಳಾಗಿ ಅಂತರಾಷ್ಟೀಯ ಯೋಗ ದಿನಾಚರಣೆ ಜ಼ೂಮ್ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.