Home ಕ್ರೀಡೆ ‘ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್’ ನಲ್ಲಿ 240 ತಂಡಗಳು ಭಾಗಿ

‘ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್’ ನಲ್ಲಿ 240 ತಂಡಗಳು ಭಾಗಿ

78
0

ಪ್ರದರ್ಶನ ಪಂದ್ಯದ ಮುಖ್ಯ ಆಕರ್ಷಣೆಯಾಗಿ ಸಂಸದ ತೇಜಸ್ವೀ ಸೂರ್ಯ ಭಾಗಿ

ಬೆಂಗಳೂರು:

ಡಿಸೆಂಬರ್ 25 ರಿಂದ ಬೆಂಗಳೂರಿನ 9 ವಿವಿಧ ಸ್ಥಳಗಳಲ್ಲಿ ಪ್ರಾರಂಭವಾಗಲಿರುವ ‘ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್’ ಪಂದ್ಯವಳಿಗೆ 240 ಕ್ಕೂ ಹೆಚ್ಚಿನ ತಂಡಗಳು ನೋಂದಣಿಗೊಂಡಿದ್ದು, 3.5 ಲಕ್ಷ ಮೌಲ್ಯದ ಬಹುಮಾನ ಮೊತ್ತದ ಅತಿ ದೊಡ್ಡ ಪ್ರಮಾಣದ ಮುಕ್ತ ಫುಟ್ಬಾಲ್ ಟೂರ್ನಿ ಇದಾಗಲಿದೆ.

230 ಸ ತಂಡಗಳು 8 ಸ್ಥಳಗಳಲ್ಲಿ 5-ಎ-ಸೈಡ್ ನಾಕ್ ಔಟ್ ಟೂರ್ನಿ ಆಡಲಿದ್ದು, ಮಂಡ್ಯ, ಮೈಸೂರು, ಕೊಯಮತ್ತೂರು, ಊಟಿ ಯಿಂದ ಸೇರಿದಂತೆ ಇತರ 8 ವೃತ್ತಿಪರ ತಂಡಗಳು 7-ಎ-ಸೈಡ್ ಪಂದ್ಯವನ್ನು ಕಿಕ್ ಸ್ಟಾರ್ಟ್ ಎಫ್ ಸಿ-ಜೆಪಿನಗರ ಕ್ರೀಡಾಂಗಣದಲ್ಲಿ ಡಿಸೆಂಬರ್ 25, 26 ಮತ್ತು 27 ರಂದು ಭಾಗವಹಿಸಲಿವೆ.

ಈ ಪಂದ್ಯಾವಳಿ ಕುರಿತು ಮಾತನಾಡಿರುವ ಬೆಂಗಳೂರು ದಕ್ಷಿಣ ಸಂಸದರು ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವೀ ಸೂರ್ಯ ರವರು, “,ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಫುಟ್ಬಾಲ್ ತಂಡಕ್ಕೆ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆಯಿಂದಲೇ ಬೆಂಗಳೂರು ಫುಟ್ಬಾಲ್ ಪ್ರೇಮಿಗಳ ನಗರವೆಂದು ವ್ಯಕ್ತವಾಗುತ್ತದೆ. ಬೆಂಗಳೂರು ದಕ್ಷಿಣ ಸಂಸದರ ಕಛೇರಿಯು, ಯುವ ಫುಟ್ಬಾಲ್ ಆಟಗಾರರಿಗೆ ಪ್ರೋತ್ಸಾಹ ಒದಗಿಸುವ ನಿಟ್ಟಿನಲ್ಲಿ ಈ ಟೂರ್ನಿಯನ್ನು ಆಯೋಜಿಸುತ್ತಿದ್ದು, ಮುಂದಿನ 3 ದಿನಗಳ ಕಾಲ ರೋಚಕ ಫುಟ್ಬಾಲ್ ಪಂದ್ಯದ ಹಣಾಹಣಿಗೆ ನಗರವು ಸಾಕ್ಷಿಯಾಗಲಿದೆ.” ಎಂದು ತಿಳಿಸಿದರು.

WhatsApp Image 2020 12 24 at 15.34.34

ಸಂಸದರ ಕಛೇರಿಯು, 9 ವಿವಿಧ ಫುಟ್ಬಾಲ್ ಟರ್ಫ್‌ಗಳಲ್ಲಿ ಪಂದ್ಯವನ್ನು ಆಯೋಜನೆಗೊಳಿಸಿದ್ದು, ಕಿಕ್ ಸ್ಟಾರ್ಟ್ ಎಫ್ ಸಿ (ಜೆಪಿ ನಗರ), ಫಿಟ್ ಆನ್ ಸ್ಪೋರ್ಟ್ಸ್ (ಗೊಟ್ಟಿಗೆರೆ), ಸ್ಪೋರ್ಟ್ಸ್ ರಶ್ (ಜಯನಗರ), ರಶ್ ಅರೇನಾ (ರಾಜಾಜಿನಗರ), ಟೈಗರ್ 5 ಬನಶಂಕರಿ, ಡ್ರಿಬಲ್ ಅರೇನಾ (ಉತ್ತರಹಳ್ಳಿ), ಗೋಲ್ಡನ್ ಲೆಗ್ (ಎಚ್ ಎಸ್ ಆರ್ ಲೇ ಔಟ್) ,ಟರ್ಫ್ ಪಾರ್ಕ್ (ಕೋರಮಂಗಲ) & ಟರ್ಫ್ ಪಾರ್ಕ್, ಎಚ್ ಎಸ್ ಆರ್ ಲೇ ಔಟ್ ಗಳಲ್ಲಿ ನಡೆಯಲಿವೆ.

ಮಹಿಳಾ ಪಂದ್ಯಗಳು ಫಿಟ್ ಆನ್ ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪುರುಷ ಓಪನ್ ಕೆಟಗರಿಯ ಪಂದ್ಯಗಳು ಡಿಸೆಂಬರ್ 26 ರಂದು ನಡೆಯಲಿವೆ.

ಟೂರ್ನಮೆಂಟ್ ನ ನಿರ್ದೇಶಕರಾದ ಶ್ರೀ ಅರವಿಂದ್ ಸುಚಿಂದ್ರನ್ ರವರು ಇದೇ ಸಂದರ್ಭದಲ್ಲಿ ಮಾತನಾಡಿ, ” ಈ ಟೂರ್ನಮೆಂಟ್ ಗೆ ದಾಖಲೆಯ 550 ಕ್ಕೂ ಹೆಚ್ಚಿನ ತಂಡಗಳು ನೋಂದಣಿಗೊಂಡಿದ್ದು, 250 ಕ್ಕೂ ಅಧಿಕ ಸ್ವಯಂಸೇವಕರು ಪಂದ್ಯದ ಯಶಸ್ವಿ ನಿರ್ವಹಣೆಗೆ ಸಹಕರಿಸಲು ತಮ್ಮ ಹೆಸರನ್ನು ನೋಂದಣಿಗೊಂಡಿರುತ್ತಾರೆ.

ಪ್ರತೀ ತಂಡಕ್ಕೂ ನಮೂದಿಸಿರುವ ಹತ್ತಿರದ ಕ್ರೀಡಾಂಗಣದಲ್ಲಿ ಪಂದ್ಯಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ಸ್ಥಳದಲ್ಲಿನ 2 ಟಾಪ್ ತಂಡಗಳನ್ನು ಆಯ್ಕೆ ಮಾಡಿ ಮುಂದಿನ ಪಂದ್ಯಕ್ಕೆ ಆಯ್ಕೆಗೊಳಿಸಲಾಗುವುದು. ಡಿಸೆಂಬರ್ 25 ರಂದು ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಖುದ್ದು ಸಂಸದರಾದ ಶ್ರೀ ತೇಜಸ್ವೀ ಸೂರ್ಯ ಕೂಡಾ ಭಾಗವಹಿಸಿ ಆಡಲಿದ್ದು ಈ ಪಂದ್ಯಾವಳಿಯ ಪ್ರಮುಖ ಆಕರ್ಷಣೆ ” ಎಂದು ತಿಳಿಸಿದರು.

” ಬೆಂಗಳೂರಿನ ಸಮಸ್ತ ಫುಟ್ಬಾಲ್ ಪ್ರೇಮಿಗಳು, ಪ್ರಾಯೋಜಕರು, ಟರ್ಫ್ ಆಡಳಿತ ಮಂಡಳಿ, ಕರ್ನಾಟಕ ಸ್ಟೇಟ್ ಫುಟ್ಬಾಲ್ ಅಸೋಷಿಯೇಷನ್, ರೆಫರೀ ಹಾಗೂ ಈ ಫುಟ್ಬಾಲ್ ಪಂದ್ಯವಳಿಗೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಇದೇ ಸಂದರ್ಭದಲ್ಲಿ ಸಂಸದ ಶ್ರೀ ತೇಜಸ್ವೀ ಸೂರ್ಯ ತಿಳಿಸಿದರು.

LEAVE A REPLY

Please enter your comment!
Please enter your name here