Home ಬೆಂಗಳೂರು ನಗರ ರಾಮ ಮಂದಿರಕ್ಕೆ ಜನ ಭಕ್ತಿಯಿಂದ ಸಹಾಯ ಮಾಡುತ್ತಿದ್ದಾರೆ- ಸಚಿವ ಬಸವರಾಜ ಬೊಮ್ಮಾಯಿ

ರಾಮ ಮಂದಿರಕ್ಕೆ ಜನ ಭಕ್ತಿಯಿಂದ ಸಹಾಯ ಮಾಡುತ್ತಿದ್ದಾರೆ- ಸಚಿವ ಬಸವರಾಜ ಬೊಮ್ಮಾಯಿ

11
0
bengaluru

ಬೆಂಗಳೂರು:

ಭಕ್ತಿಯಿಂದ ಜನ ರಾಮ‌ಮಂದಿರ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಬೆಂಗಳೂರಿನಲ್ಲಿ ರಾಷ್ಟ್ರಧರ್ಮ ಸಂಘಟನೆ ಏರ್ಪಡಿಸಿದ್ದ ರಾಮ‌ಮಂದಿರ ನಿಧಿ ಸಮರ್ಪಣೆ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀರಾಮಚಂದ್ರ ಮರ್ಯಾದಾ ಪುರುಷ. ಅವರ ಜನ್ಮ ಸ್ಥಳದಲ್ಲಿಯೇ ರಾಮ‌ಮಂದಿರ ನಿರ್ಮಾಣ ಮಾಡುತ್ತಿರುವುದು ನಮ್ಮ ಸೌಭಾಗ್ಯ. ಸುದೀರ್ಘ ಹೋರಾಟ ಮತ್ತು ಸಂಕಲ್ಪ ದಿಂದ ರಾಮ‌ಮಂದಿರ ನಿರ್ಮಾಣ ಕೆಲಸ ಆರಂಭವಾಗಿದೆ. ಇದಕ್ಕೆ ದೇಶದಲ್ಲಿ ಜನರು ಸ್ವಯಂಪ್ರೇರಿತರಾಗಿ ಭಕ್ತಿಯ ಪ್ರತೀಕವಾಗಿ ಸಹಾಯ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

bengaluru

ಬೆಂಗಳೂರಿನಲ್ಲಿ ನಾಣ್ಯಗಳಲ್ಲಿ ಪ್ರಭು ಶ್ರೀರಾಮಚಂದ್ರ ಮತ್ತು ರಾಮ ಮಂದಿರದ ಕಲಾಕೃತಿ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಈ ಕಲಾಕೃತಿ ಮಾಡಿರುವ ಒಡೆಯರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

bengaluru

LEAVE A REPLY

Please enter your comment!
Please enter your name here