Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು, ಅವರೇ ನನ್ನ ಹಿಂದಿರುವ ಶಕ್ತಿ: ಡಿಸಿಎಂ ಡಿ.ಕೆ ಶಿವಕುಮಾರ್
  • ರಾಜಕೀಯ
  • ಬೆಂಗಳೂರು ನಗರ

ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು, ಅವರೇ ನನ್ನ ಹಿಂದಿರುವ ಶಕ್ತಿ: ಡಿಸಿಎಂ ಡಿ.ಕೆ ಶಿವಕುಮಾರ್

The Bengaluru Live June 21, 2024 12:30 PM
ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು, ಅವರೇ ನನ್ನ ಹಿಂದಿರುವ ಶಕ್ತಿ: ಡಿಸಿಎಂ ಡಿ.ಕೆ ಶಿವಕುಮಾರ್

ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು, ಅವರೇ ನನ್ನ ಹಿಂದಿರುವ ಶಕ್ತಿ: ಡಿಸಿಎಂ ಡಿ.ಕೆ ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: “ನನ್ನ ರಾಜಕೀಯ ಅಂತ್ಯ ತೀರ್ಮಾನ ಮಾಡೋರು ಜನರು. ಬೇರೆ ಯಾರೂ ಅಲ್ಲ. ಜನರೇ ನನ್ನ ಹಿಂದಿರುವ ಶಕ್ತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸೌಧದ ಆವರಣದಲ್ಲಿ ಶುಕ್ರವಾರ ನಡೆದ ಅಂತರಾಷ್ಟ್ರೀಯ ಯೋಗದಿನ ಕಾರ್ಯಕ್ರಮದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದರೆ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯ ಅಂತ್ಯವಾಗಲಿದೆ ಎಂಬ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ರಾಜಕೀಯ ಅಂತ್ಯ ತೀರ್ಮಾನ ಮಾಡುವವರು ಜನರು. ಯೋಗೇಶ್ವರ್ ದೊಡ್ಡವರು. ಅವರ ಮಾತಿಗೆ ಪ್ರತಿಕ್ರಿಯೆ ನೀಡುವಷ್ಟು ಸಮಯ ನನ್ನ ಬಳಿ ಇಲ್ಲ. ನಾನೂ ರಾಮನಗರ ಜಿಲ್ಲೆಯವನು. “ನಿಮ್ಮ ಋಣ ತೀರಿಸಲು ಬದ್ಧನಿದ್ದೇನೆ, ಶಕ್ತಿ ಕೊಡಿ ಎಂದು ಆ ಕ್ಷೇತ್ರದ ಜನರ ಬಳಿ ಕೇಳಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿದ್ದರೆ ಬೆಂಬಲ ನೀಡುತ್ತಾರೆ” ಎಂದು ತಿಳಿಸಿದರು.

ಸ್ವಪ್ರತಿಷ್ಠೆಗಾಗಿ ದೇಶದ ಸಂಪತ್ತು ಹಾಳು ಮಾಡುತ್ತಿದ್ದಾರೆ ಎಂಬ ಸುರೇಶ್ ಕುಮಾರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆದರೆ ಕನಕಪುರದಲ್ಲಿ ಯಾಕೆ ಉಪಚುನಾವಣೆ ನಡೆಯುತ್ತದೆ. ನಾನು ಕನಕಪುರದ ಶಾಸಕ. ಪಕ್ಷದ ಅಧ್ಯಕ್ಷನಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಇದೂ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ಸಿದ್ದರಾಮಯ್ಯ ಹಾಗೂ ನಾನು ಸೇರಿ ಚುನಾವಣೆ ನಡೆಸುತ್ತೇವೆ” ಎಂದರು.

ಯೋಗ ನಮ್ಮ ದೇಶದ ಆಸ್ತಿ: ಯೋಗಕ್ಕೆ ಐದು ಸಾವಿರ ವರ್ಷಗಳ ಇತಿಹಾಸವಿದ್ದು, ದೇಶ ಮಾತ್ರವಲ್ಲದೇ ಇಡೀ ವಿಶ್ವ ನಮ್ಮ ಧರ್ಮ, ಸಂಸ್ಕೃತಿ, ಪದ್ಧತಿಯಾಗಿರುವ ಯೋಗವನ್ನು ಒಪ್ಪಿದೆ. ಅನೇಕ ಹಿರಿಯರು, ಋಷಿಗಳು ಇದಕ್ಕೆ ಕೊಡುಗೆ ನೀಡಿದ್ದು, ಯೋಗಕ್ಕೆ ಯಾವುದೇ ಜಾತಿ, ಕುಲ, ಧರ್ಮದ ಎಲ್ಲೆ ಇಲ್ಲ. ನನಗೆ ಯೋಗಾಭ್ಯಾಸವಿಲ್ಲ. ಶಾಲಾ ದಿನಗಳಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸುತ್ತಿದ್ದೆ. ನನ್ನ ಮನೆಯಲ್ಲಿ ಯೋಗಭ್ಯಾಸ ಮಾಡುತ್ತಾರೆ. ಯೋಗ ಈ ದೇಶದ ಆಸ್ತಿ. ಯೋಗಕ್ಕೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ನೀವು ಆರೋಗ್ಯವಂತರಾಗಿರಬೇಕು, ಮಾನಸಿಕವಾಗಿ ಶಕ್ತಿಶಾಲಿಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ. ಹಿರಿಯರು, ಕಿರಿಯರು ಸೇರಿದಂತೆ ಎಲ್ಲಾ ವರ್ಗದ ಜನರು ಯೋಗಾಭ್ಯಾಸ ಮಾಡಿ ಆರೋಗ್ಯವಂತರಾಗಿರಲಿ ಎಂದು ಮನವಿ ಮಾಡುತ್ತೇನೆ.

About the Author

The Bengaluru Live

Administrator

Visit Website View All Posts

Post navigation

Previous: ಜೂನ್ 22 ರಂದು ಕರ್ನಾಟಕದ ಎನ್‍ಡಿಎ ಸಂಸದರ ಸನ್ಮಾನ
Next: ನಿಗಮ, ಮಂಡಳಿ ನಿರ್ದೇಶಕರು-ಸದಸ್ಯರ ಆಯ್ಕೆಗೆ ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

Related Stories

ಜಕ್ಕೂರಿನ ಶ್ರೀರಾಮಪುರ ಕ್ರಾಸ್ ರಸ್ತೆಯಲ್ಲಿ ದುರಸ್ತಿ ನಡೆಸುತ್ತಿರುವ ಕಾರ್ಮಿಕರು
  • Uncategorized
  • ಬೆಂಗಳೂರು ನಗರ

ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ

The Bengaluru Live November 13, 2026 7:55 PM
ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮುಂಭಾಗ
  • ಕ್ರೀಡೆ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ

The Bengaluru Live November 13, 2026 7:40 PM
ಚಿಕ್ಕಪೇಟೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಉಲ್ಲಂಘನೆಗಾಗಿ ಝೆಪ್ಟೊ ಅಂಗಡಿಯಲ್ಲಿ ಜಿಬಿಎ ಅಧಿಕಾರಿಗಳ ತಪಾಸಣೆ
  • ಬೆಂಗಳೂರು ನಗರ

ಚಿಕ್ಕಪೇಟೆ ವಿಭಾಗದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಯಮ ಉಲ್ಲಂಘನೆ: ಝೆಪ್ಟೊಗೆ ₹25,000 ದಂಡ

The Bengaluru Live November 13, 2026 4:40 PM

Latest Post

ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ ಜಕ್ಕೂರಿನ ಶ್ರೀರಾಮಪುರ ಕ್ರಾಸ್ ರಸ್ತೆಯಲ್ಲಿ ದುರಸ್ತಿ ನಡೆಸುತ್ತಿರುವ ಕಾರ್ಮಿಕರು
  • Uncategorized
  • ಬೆಂಗಳೂರು ನಗರ

ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ

November 13, 2026 7:55 PM
ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮುಂಭಾಗ
  • ಕ್ರೀಡೆ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ

November 13, 2026 7:40 PM
ಚಿಕ್ಕಪೇಟೆ ವಿಭಾಗದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಯಮ ಉಲ್ಲಂಘನೆ: ಝೆಪ್ಟೊಗೆ ₹25,000 ದಂಡ ಚಿಕ್ಕಪೇಟೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಉಲ್ಲಂಘನೆಗಾಗಿ ಝೆಪ್ಟೊ ಅಂಗಡಿಯಲ್ಲಿ ಜಿಬಿಎ ಅಧಿಕಾರಿಗಳ ತಪಾಸಣೆ
  • ಬೆಂಗಳೂರು ನಗರ

ಚಿಕ್ಕಪೇಟೆ ವಿಭಾಗದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಯಮ ಉಲ್ಲಂಘನೆ: ಝೆಪ್ಟೊಗೆ ₹25,000 ದಂಡ

November 13, 2026 4:40 PM
ಸರ್ಜಾಪುರ–ಹೆಬ್ಬಾಳ ಮೆಟ್ರೋ ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಪ್ರಧಾನಿ ಮೋದಿಗೆ ಶಿವಕುಮಾರ್ ಮನವಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಎಕ್ಸ್ ಪೋಸ್ಟ್ ಸ್ಕ್ರಿನ್ಶಾಟ್
  • ಬೆಂಗಳೂರು ನಗರ
  • ರಾಜಕೀಯ

ಸರ್ಜಾಪುರ–ಹೆಬ್ಬಾಳ ಮೆಟ್ರೋ ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಪ್ರಧಾನಿ ಮೋದಿಗೆ ಶಿವಕುಮಾರ್ ಮನವಿ

November 13, 2026 4:22 PM
ಪ್ರಧಾನಿ ಮೋದಿಯಿಂದ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣೆ ಪ್ರಧಾನಿ ನರೇಂದ್ರ ಮೋದಿಗೆ ಮೈಸೂರಿನಲ್ಲಿ ಸ್ವಾಗತ
  • ಕರ್ನಾಟಕ
  • ಸಿನಿಮಾ

ಪ್ರಧಾನಿ ಮೋದಿಯಿಂದ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ‘COSMOS-Mysuru’ ಲೋಕಾರ್ಪಣೆ

November 13, 2026 4:13 PM
ರೆಡ್ ಲೈನ್ ಅನುಮೋದನೆ, ಡಬಲ್ ಡೆಕ್ಕರ್‌ಗೆ ಅನುಮತಿ, ಪಶ್ಚಿಮ ಘಟ್ಟ ಅಧಿಸೂಚನೆ ಮರುಪರಿಶೀಲನೆ: ಪ್ರಧಾನಿ ಮೋದಿಗೆ ರಾಜ್ಯದ ಮನವಿ ಪತ್ರ ನಮ್ಮ ಮೆಟ್ರೋ ನಿಲ್ದಾಣದ ಮಾದರಿಯನ್ನು ವೀಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ರೆಡ್ ಲೈನ್ ಅನುಮೋದನೆ, ಡಬಲ್ ಡೆಕ್ಕರ್‌ಗೆ ಅನುಮತಿ, ಪಶ್ಚಿಮ ಘಟ್ಟ ಅಧಿಸೂಚನೆ ಮರುಪರಿಶೀಲನೆ: ಪ್ರಧಾನಿ ಮೋದಿಗೆ ರಾಜ್ಯದ ಮನವಿ ಪತ್ರ

November 13, 2026 3:14 PM

ನೀವು ತಪ್ಪಿಸಿಕೊಂಡಿರಬಹುದು

ಜಕ್ಕೂರಿನ ಶ್ರೀರಾಮಪುರ ಕ್ರಾಸ್ ರಸ್ತೆಯಲ್ಲಿ ದುರಸ್ತಿ ನಡೆಸುತ್ತಿರುವ ಕಾರ್ಮಿಕರು
  • Uncategorized
  • ಬೆಂಗಳೂರು ನಗರ

ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ

The Bengaluru Live November 13, 2026 7:55 PM
ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮುಂಭಾಗ
  • ಕ್ರೀಡೆ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ

The Bengaluru Live November 13, 2026 7:40 PM
ಚಿಕ್ಕಪೇಟೆಯಲ್ಲಿ ಏಕಬಳಕೆ ಪ್ಲಾಸ್ಟಿಕ್ ಉಲ್ಲಂಘನೆಗಾಗಿ ಝೆಪ್ಟೊ ಅಂಗಡಿಯಲ್ಲಿ ಜಿಬಿಎ ಅಧಿಕಾರಿಗಳ ತಪಾಸಣೆ
  • ಬೆಂಗಳೂರು ನಗರ

ಚಿಕ್ಕಪೇಟೆ ವಿಭಾಗದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಯಮ ಉಲ್ಲಂಘನೆ: ಝೆಪ್ಟೊಗೆ ₹25,000 ದಂಡ

The Bengaluru Live November 13, 2026 4:40 PM
ಸಿಎಂ ಡಿ.ಕೆ. ಶಿವಕುಮಾರ್ ಅವರ ಎಕ್ಸ್ ಪೋಸ್ಟ್ ಸ್ಕ್ರಿನ್ಶಾಟ್
  • ಬೆಂಗಳೂರು ನಗರ
  • ರಾಜಕೀಯ

ಸರ್ಜಾಪುರ–ಹೆಬ್ಬಾಳ ಮೆಟ್ರೋ ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಪ್ರಧಾನಿ ಮೋದಿಗೆ ಶಿವಕುಮಾರ್ ಮನವಿ

The Bengaluru Live November 13, 2026 4:22 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರು ಉತ್ತರ ವಾರ್ಡ್ ಒನ್ ಅಭಿಯಾನದಲ್ಲಿ 30 ಕಸದ ಬ್ಲ್ಯಾಕ್‌ಸ್ಪಾಟ್‌ ತೆರವು, 10 ರಸ್ತೆ ಗುಂಡಿ ದುರಸ್ತಿ
  • ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ
  • ಚಿಕ್ಕಪೇಟೆ ವಿಭಾಗದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಯಮ ಉಲ್ಲಂಘನೆ: ಝೆಪ್ಟೊಗೆ ₹25,000 ದಂಡ
  • ಸರ್ಜಾಪುರ–ಹೆಬ್ಬಾಳ ಮೆಟ್ರೋ ಮಾರ್ಗಕ್ಕೆ ಶೀಘ್ರ ಅನುಮೋದನೆ ನೀಡುವಂತೆ ಪ್ರಧಾನಿ ಮೋದಿಗೆ ಶಿವಕುಮಾರ್ ಮನವಿ
©Copyright 2025 The Bengaluru Live All rights reserved. | MoreNews by AF themes.