Home ಬೆಂಗಳೂರು ನಗರ ಏಷ್ಯಾ ಅಭಿವೃದ್ಧಿ ಬ್ಯಾಂಕ್, ಬೆಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆ ಉನ್ನತೀಕರಣಕ್ಕೆ 100 ಮಿಲಿಯನ್ ಡಾಲರ್ ಸಾಲ...

ಏಷ್ಯಾ ಅಭಿವೃದ್ಧಿ ಬ್ಯಾಂಕ್, ಬೆಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆ ಉನ್ನತೀಕರಣಕ್ಕೆ 100 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ

40
0
power distribution

ಬೆಂಗಳೂರು:

ಬೆಂಗಳೂರು ನಗರದಲ್ಲಿ ವಿದ್ಯುತ್ ಸರಬರಾಜಿನ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಆಧುನೀಕರಣ ಮತ್ತು ಉನ್ನತೀಕರಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ಕೇಂದ್ರ ಸರ್ಕಾರದ ನಡುವೆ ಕಳೆದ ಡಿಸೆಂಬರ್ 31 ರಂದು 100 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಬೆಂಗಳೂರು ಸ್ಮಾರ್ಟ್ ವಿದ್ಯುತ್ ವಿತರಣಾ ಯೋಜನೆಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಡಾ. ಸಿ.ಎಸ್. ಮೊಹಾಪಾತ್ರ ಮತ್ತು ಎಡಿಬಿಯ ಭಾರತದ ಉಸ್ತುವಾರಿ ಹೋ ಯುನ್ ಜಿಯಾಂಗ್ ಸಹಿ ಮಾಡಿದರು.

100 ಮಿಲಿಯನ್ ಡಾಲರ್ ಸಾಲದ ಹೊರತಾಗಿ, ಎಡಿಬಿ ಈ ಯೋಜನೆಗೆ ಖಾತ್ರಿಯಿಲ್ಲದ 90 ದಶಲಕ್ಷ ಡಾಲರ್ ಸಾಲವನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಮ್) ಗೆ ನೀಡುತ್ತದೆ, ಇದು ಕರ್ನಾಟಕದ ಐದು ಸರ್ಕಾರಿ ಸ್ವಾಮ್ಯದ ವಿತರಣಾ ಸಂಸ್ಥೆಗಳಲ್ಲಿ ಒಂದಾಗಿದೆ. UNI

LEAVE A REPLY

Please enter your comment!
Please enter your name here