Home ಅಪರಾಧ ಬೆಳ್ಳಂಬೆಳಗ್ಗೆ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್

ಬೆಳ್ಳಂಬೆಳಗ್ಗೆ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್

55
0
Advertisement
bengaluru

ಬೆಂಗಳೂರು:

ಬೆಳ್ಳಂಬೆಳಗ್ಗೆ ಪೊಲೀಸರು ದರೋಡೆಕೋರನ ಮೇಲೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದ ಲಗ್ಗೆರೆ ಬಳಿಯ ಕೂಲಿ ನಗರ ಬ್ರಿಡ್ಜ್ ಬಳಿ ನಡೆದಿದೆ. ದರೋಡೆಕೋರ ಅನ್ಬನ್ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

IMG 20201201 111805

ಆರೋಪಿ ಅನ್ಬನ್, ನ. 26ರಂದು ರಿಂಗ್‌ ರಸ್ತೆ ಬಳಿ ಲಾರಿ ಚಾಲಕರೊಬ್ಬರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ಸಂಬಂಧ ಚಾಲಕ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನ್ಬನ್ ಇರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅನ್ಬನ್ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಅನ್ಬನ್‌, ಮುಖ್ಯ ಪೇದೆ ಅಭಿಷೇಕ್ ಮೇಲೆ ಡ್ಯಾಗರ್‌ನಿಂದ ಹಲ್ಲೆ ನಡೆಸಿದ್ದಲ್ಲದೇ, ಪಿಎಸ್‌ ಐ ಜೋಗಾನಂದ್ ಮೇಲೂ ಹಲ್ಲೆಗೆ ಮುಂದಾಗಿದ್ದನು. ಹೀಗಾಗಿ ತಮ್ಮ ಆತ್ಮರಕ್ಷಣೆಗಾಗಿ ಅನ್ಬನ್‌ ಮೇಲೆ ಪಿಎಸ್‌ಐ ಫೈರಿಂಗ್ ಮಾಡಿದ್ದಾರೆ.

bengaluru bengaluru

ಸದ್ಯ ಗಾಯಾಳು ಮುಖ್ಯ ಪೇದೆ, ಆರೋಪಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


bengaluru

LEAVE A REPLY

Please enter your comment!
Please enter your name here