Home ಬೆಂಗಳೂರು ನಗರ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ ವಾಲಿದೆ

ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ ವಾಲಿದೆ

76
0
Police quarter building in Bengaluru tilts due to wide crack
Advertisement
bengaluru

ಕಟ್ಟಡದಲ್ಲಿ ತಾಂತ್ರಿಕ ಕೊರತೆ: ಕಮಲ್ ಪಂತ್

ಬೆಂಗಳೂರು:

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ವಾಲಿದೆ. ಕಾಟನ್‌ಪೇಟೆಯ ಬಿನ್ನಿಮಿಲ್ ಸಮೀಪದ ಪೊಲೀಸ್ ವಸತಿ ಗೃಹದ ಬಿ ಬ್ಲಾಕ್​ನ ವಸತಿ ಸಮುಚ್ಚಯ ಒಂದು ಅಡಿಯಷ್ಟು ಎಡಕ್ಕೆ ವಾಲಿದೆ.

ನಗರದ ಬಿನ್ನಿಪೇಟೆ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯಿಸಿ, ಕ್ವಾರ್ಟರ್ಸ್​ನಲ್ಲಿ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಸದ್ಯಕ್ಕೆ ಇನ್ನಿತರ ಕ್ವಾರ್ಟರ್ಸ್​ನಲ್ಲಿ ಹೊಸದಾಗಿ ವಾಸಕ್ಕೆ ಅಲಾಟ್ ಮಾಡಿದ್ದೇವೆ ಎಂದರು.

ಇನ್ನು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಜಿನಿಯರ್​ಗಳು, ಇಂಡಿಯನ್ ಇನ್ಸ್ಟಿಟಿಟ್ಯೂಟ್ ಆಫ್ ಸೈನ್ಸ್​ನಿಂದ ಪರಿಶೀಲನೆ ನಡೆಸಿದ್ದು, ಕ್ವಾರ್ಟರ್ಸ್ ಕಟ್ಟಡ ವಾಲಲು ಕಾರಣ ಏನು ಎಂಬುದರ ಬಗ್ಗೆ ಅವರು ವರದಿ ನೀಡಲಿದ್ದಾರೆ ಎಂದರು.

bengaluru bengaluru
Police quarter building in Bengaluru tilts due to wide crack

ಕಟ್ಟಡದಲ್ಲಿ ತಾಂತ್ರಿಕ ಕೊರತೆ ಇದೆ. ಕಟ್ಟಡದಲ್ಲಿ ಎರಡು ವರ್ಷದಿಂದ ಜನರು ವಾಸವಿದ್ದಾರೆ. ಸದ್ಯಕ್ಕೆ ವಾಸವಾಗಿದ್ದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಕ್ವಾರ್ಟರ್ಸ್ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಆ ಕಟ್ಟಡದ ಪರಿಸ್ಥಿತಿ ಗಮನಕ್ಕೆ ಬಂದಿದ್ದು, ಪೊಲೀಸ್ ಕ್ವಾಟರ್ಸ್ ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.

ಗೃಹ-2025 ಯೋಜನೆಯಡಿ 10 ಸಾವಿರ ಪೊಲೀಸ್ ಕ್ವಾರ್ಟರ್ಸ್ ನಿರ್ಮಿಸುತ್ತಿದ್ದೇವೆ. ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಇದಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಮುಕ್ತಾವಾಗಿದೆ. ಹೊಸ ಕಟ್ಟಡ ನಿರ್ಮಾಣವಾದರೆ ಕ್ವಾರ್ಟರ್ಸ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Also Read: Police quarter building in Bengaluru tilts due to wide crack


bengaluru

LEAVE A REPLY

Please enter your comment!
Please enter your name here