Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ – ಡಾ.ಎಚ್.ಎಸ್. ರಾಘವೇಂದ್ರರಾವ್
  • ಬೆಂಗಳೂರು ನಗರ

ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ – ಡಾ.ಎಚ್.ಎಸ್. ರಾಘವೇಂದ್ರರಾವ್

The Bengaluru Live January 20, 2021 5:00 PM 1 minute read
ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ – ಡಾ.ಎಚ್.ಎಸ್. ರಾಘವೇಂದ್ರರಾವ್

ಸತ್ಯಗಳ ಹುಡುಕಾಟ ಸಾಹಿತ್ಯದ ಶಕ್ತಿ – ಡಾ.ಎಚ್.ಎಸ್. ರಾಘವೇಂದ್ರರಾವ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಸೃಜನಶೀಲ ಸಾಹಿತ್ಯ ರಚನೆಯ ಮೂಲ ಆಶಯ ಸತ್ಯಗಳ ಹುಡುಕಾಟ ಆಗಿರಬೇಕು. ಇಂದಿನ ಯುವಲೇಖಕರು ಮೌಲ್ಯಯುತ ಸಾಹಿತ್ಯ ರಚನೆ ಮಾಡಬೇಕಾದರೆ ಬಹುಮುಖ ಸತ್ಯದ ಶೋಧನೆಯಲ್ಲಿ ತೊಡಗುವುದು ಅವಶ್ಯ ಎಂದು ಖ್ಯಾತ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರರಾವ್ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿದ್ದ, ಯುವಬರಹಗಾರರ ಚೊಚ್ಚಲ ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ತನ್ನಿಂದ ತಾನೆ ಶಕ್ತವಾಗಿದೆ. ಈ ಸಾಹಿತ್ಯ ಲೋಕಕ್ಕೆ ಹೊಸದಾಗಿ ಪಾದಾರ್ಪಣೆ ಮಾಡುವವರು ಮೌಲಿಕ ಕೃತಿಗಳನ್ನು ಕೊಡಬೇಕಾದರೆ ಮೊದಲು ತನ್ನ ಸುತ್ತಲ ಪರಿಸರವನ್ನು ಗ್ರಹಿಸಿ ಹೇಳಬೇಕಾದ ವಿಷಯದ ಬಗ್ಗೆ ಸತ್ಯಶೋಧನೆಯಲ್ಲಿ ತೊಡಗಬೇಕು. ಸತ್ಯವೆನ್ನುವುದು ವಕೀಲರಿಗೆ, ವ್ಯವಸ್ಥೆಗೆ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಒಂದು ರೀತಿಯಲ್ಲಿದ್ದರೆ ನಿಜವಾದ ಬರಹಗಾರನಿಗೆ ಸತ್ಯದ ಹತ್ತು ಮುಖಗಳು ಪರಿಚಯವಾಗುತ್ತದೆ. ಇದನ್ನು ಸಮರ್ಥವಾಗಿ ಹೇಳಬಲ್ಲವನು ಉತ್ತಮ ಲೇಖಕನಾಗುತ್ತಾನೆ ಎಂದು ಅವರ ಹೇಳಿದರು. ಸಮಕಾಲೀನ ಕನ್ನಡ ಸಾಹಿತ್ಯ, ಅಪೇಕ್ಷೆ ಮತ್ತು ಸಂಘರ್ಷಗಳ ನಡುವಿನ ದ್ವಂದ್ವಕ್ಕೆ ಸಿಲುಕಿದೆ. ಕುವೆಂಪು ಅವರ ಪೂರ್ಣ ದೃಷ್ಟಿ ಹೊಂದಿರುವ ಲೇಖಕ ಸತ್ವಯುತ ಸಾಹಿತ್ಯ ಸೃಷ್ಟಿ ಮಾಡಬಲ್ಲವನಾಗುತ್ತಾನೆ ಎಂದು ಅವರು ತಿಳಿಸಿದರು. ಹೊಗಳಿಕೆಯ ಮುಳ್ಳಿನ ಕಿರೀಟ ಧರಿಸಿದರೆ ಸಾಹಿತ್ಯದ ಸತ್ವ ಅಲ್ಲಿಗೆ ಸೀಮಿತವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

WhatsApp Image 2021 01 20 at 15.24.06

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಸಾಹಿತ್ಯ, ಪತ್ರಕರ್ತ ಜೋಗಿ ಅವರು ಮಾತನಾಡಿ ಯುವಲೇಖಕರು ಕೆಲವೇ ಪ್ರಕಾಶಕರಿಂದ ಹಾದಿ ತಪ್ಪಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಪುಸ್ತಕ ಪ್ರಕಾಶನದ ಬಗ್ಗೆ ಸರಿಯಾದ ಮಾಹಿತಿಯನ್ನು ಕಲೆಹಾಕಿ ತಮ್ಮ ಕೃತಿ ಪ್ರಕಟಣೆಗೆ ಮುಂದಾಗಬೇಕು ಎಂದರು. ಸ್ವತಃ ಬೆರಳಚ್ಚು ಮಾಡುವ, ಸ್ವತಃ ಮುಖಪುಟ ರಚಿಸುವ ಬಗ್ಗೆ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಬಹಳ ಮುಖ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹವನ್ನು ಹಾಕಿ ಅದಕ್ಕೆ ಬರುವ ಟೀಕೆ, ಟಿಪ್ಪಣಿ, ವಿಮರ್ಶೆಗಳಿಂದ ತಮ್ಮ ಬರವಣಿಗೆಯನ್ನು ತಿದ್ದುಕೊಳ್ಳಲು ಇಂದಿನ ಯುವಲೇಖಕರು ಪ್ರಯತ್ನಿಸಬೇಕು ಎಂದು ಹೇಳಿದರು. ಸತತ ಬರವಣಿಗೆ ಮತ್ತು ಸತತ ಓದು ಯಾವುದೇ ಲೇಖಕನ ಶಕ್ತಿ ಆಗಿರುತ್ತದೆ. ನಿರಂತವಾಗಿ ಬರೆದು ಅದರಲ್ಲಿ ಸತ್ವಯುತವಾದದ್ದನ್ನು ಮಾತ್ರವೇ ಪ್ರಕಟಿಸಬೇಕು. ದಿಢೀರ್ ಜನಪ್ರಿಯತೆ ಬರವಣಿಗೆಯ ಮೌಲ್ಯವನ್ನು ಕುಗ್ಗಿಸಿಬಿಡುತ್ತದೆ. ಆ ಬಗ್ಗೆ ಎಚ್ಚರ ವಹಿಸಬೇಕು ಎಂದು ಜೋಗಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಂ.ಎನ್. ನಂದೀಶ್ ಹಂಚೆ ಮಾತನಾಡಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಚೊಚ್ಚಲ ಕೃತಿಗಳ ಪ್ರಕಟಣೆ ಯೋಜನೆಯಡಿ 161 ಹಸ್ತಪ್ರತಿಗಳು ಸ್ವೀಕೃತವಾಗಿದ್ದವು ಅದರಲ್ಲಿ 55 ಹಸ್ತಪ್ರತಿಗಳನ್ನು ಆಯ್ಕೆ ಮಾಡಲಾಯಿತು. ಪ್ರತೀ ಲೇಖಕರಿಗೆ ರೂ.15,000-00ಗಳ ಧನಸಹಾಯವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

WhatsApp Image 2021 01 20 at 15.24.05

ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮಾತನಾಡಿ ಯುವಬರಹಗಾರರು ತಮ್ಮ ಸುತ್ತಲ ಪರಿಸರವನ್ನು ಗ್ರಹಿಸಿ ಅದರ ಸಾರವನ್ನು ತಮ್ಮ ಬರವಣಿಗೆಯಲ್ಲಿ ಅಳವಡಿಸುವುದರಿಂದ ಆ ಕೃತಿ ಸತ್ವಯುತವಾಗುತ್ತದೆ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಸೌಭಾಗ್ಯ ವಂದಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಒಂದು ಕುಟುಂಬಕ್ಕೆ ಒಂದೇ ಹುದ್ದೆ ನೀತಿ ಜಾರಿಗೆ ತನ್ನಿ: ಮುಖ್ಯಮಂತ್ರಿ ಕುಟುಂಬ ವಿರುದ್ದ ಯತ್ನಾಳ್ ಕಿಡಿ
Next: ಗ್ರಾಮ ರಾಜ್ಯದ ಮೂಲಕ ರಾಮ ರಾಜ್ಯ ಸ್ಥಾಪಿಸುವುದು ನಮ್ಮ ಗುರಿ

Related Stories

ಕರ್ನಾಟಕ ಲೋಕಾಯುಕ್ತ ಬೆಂಗಳೂರು ಎಂಬ ಗೋಡೆ ಫಲಕದ ಕೆಳಗೆ ಉದ್ದನೆಯ ಮರದ ಮೇಜಿನ ಹಿಂದೆ ಕುಳಿತಿರುವ ಬೂದು ಬಣ್ಣದ ಸೂಟ್ ಧರಿಸಿದ ವ್ಯಕ್ತಿ
  • ಬೆಂಗಳೂರು ನಗರ

ವಾಲಗೆರಹಳ್ಳಿ ಕೆರೆ ಮಾಲಿನ್ಯವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಲೋಕಾಯುಕ್ತ; ಜಂಟಿ ಸ್ಥಳ ಪರಿಶೀಲನೆ, ಕೆರೆ ಪುನಶ್ಚೇತನಕ್ಕೆ ಆದೇಶ

The Bengaluru Live November 16, 2026 3:15 PM
ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ತೆರವಿಗೂ ಮುನ್ನ ಸಂಗ್ರಹವಾಗಿದ್ದ ಕಸ
  • ಬೆಂಗಳೂರು ನಗರ

ಲೋಕಾಯುಕ್ತರ ಮಧ್ಯಪ್ರವೇಶ: ಬೆಂಗಳೂರಿನ ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ 80 ಟನ್ ಕಸ ತೆರವು

The Bengaluru Live November 15, 2026 12:36 PM
ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಪಾದಚಾರಿ ಮಾರ್ಗ ಸ್ವಚ್ಛತಾ ಕಾರ್ಯ
  • ಬೆಂಗಳೂರು ನಗರ

ರಾಜಾಜಿನಗರ ವಿಭಾಗದಲ್ಲಿ ವಾರ್ಡ್ ಒನ್ ಅಭಿಯಾನದ ಕಾಮಗಾರಿ ಕೈಗೊಂಡ ಪಶ್ಚಿಮ ನಗರ ಪಾಲಿಕೆ

The Bengaluru Live November 15, 2026 12:31 PM

Latest Post

ಪತ್ರಿಕೋದ್ಯಮದಲ್ಲಿ ಹೊಣೆಗಾರಿಕೆ ಮತ್ತು ಜನಪ್ರಿಯತೆಯ ಸಮತೋಲನ ಅಗತ್ಯ: ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ ಹಳದಿ ಹೂಗಳಿಂದ ಅಲಂಕೃತ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಲಾಂಛನವಿರುವ ವೇದಿಕೆಯಲ್ಲಿ ಮಾತನಾಡುತ್ತಿರುವ ಕನ್ನಡಕ ಧರಿಸಿದ ವ್ಯಕ್ತಿ
  • ಕರ್ನಾಟಕ

ಪತ್ರಿಕೋದ್ಯಮದಲ್ಲಿ ಹೊಣೆಗಾರಿಕೆ ಮತ್ತು ಜನಪ್ರಿಯತೆಯ ಸಮತೋಲನ ಅಗತ್ಯ: ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ

November 16, 2026 10:45 PM
ಶಿರಾದ ಚಿಕ್ಕನಹಳ್ಳಿ ಕೆಪಿಎಸ್ ಶಾಲೆಗೆ ಮಧು ಬಂಗಾರಪ್ಪ ದಿಢೀರ್ ಭೇಟಿ; ಮಕ್ಕಳೊಂದಿಗೆ ಬಿಸಿಯೂಟ, ಎಲ್ಲ ಕೆಪಿಎಸ್ ಶಾಲೆಗಳಿಗೆ ಜೂನ್‌ನಿಂದ ಬಸ್ ಕಪ್ಪುಹಲಗೆಯ ಮುಂದೆ ನೆಲದ ಮೇಲೆ ಕುಳಿತು ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿಯುತ್ತಿರುವ ಬಿಳಿ ಅಂಗಿ ಧರಿಸಿದ ವ್ಯಕ್ತಿ
  • ಕರ್ನಾಟಕ

ಶಿರಾದ ಚಿಕ್ಕನಹಳ್ಳಿ ಕೆಪಿಎಸ್ ಶಾಲೆಗೆ ಮಧು ಬಂಗಾರಪ್ಪ ದಿಢೀರ್ ಭೇಟಿ; ಮಕ್ಕಳೊಂದಿಗೆ ಬಿಸಿಯೂಟ, ಎಲ್ಲ ಕೆಪಿಎಸ್ ಶಾಲೆಗಳಿಗೆ ಜೂನ್‌ನಿಂದ ಬಸ್

November 16, 2026 10:39 PM
ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ದುರ್ಬಳಕೆ: ಡಿಜಿ ಭೇಟಿ ನಂತರ ಛಲವಾದಿ ನಾರಾಯಣಸ್ವಾಮಿ ಆರೋಪ ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮನವಿ ಪತ್ರದೊಂದಿಗೆ ನಿಂತಿರುವ ಬಿಜೆಪಿ ನಾಯಕರ ತಂಡ
  • ಕರ್ನಾಟಕ
  • ರಾಜಕೀಯ

ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ದುರ್ಬಳಕೆ: ಡಿಜಿ ಭೇಟಿ ನಂತರ ಛಲವಾದಿ ನಾರಾಯಣಸ್ವಾಮಿ ಆರೋಪ

November 16, 2026 9:46 PM
ನೆರೆಯ ರಾಜ್ಯಗಳು ಶೇ.50 ಸಬ್ಸಿಡಿ ನೀಡುತ್ತಿವೆ, ಕರ್ನಾಟಕದಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹವಿಲ್ಲ: ಕಾಪುವಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ; ರಾಜ್ಯ ಕ್ರಮ ಕೈಗೊಂಡರೆ ಕೇಂದ್ರದ ಸಹಕಾರದ ಭರವಸೆ ಬಿಳಿ ಧಾರ್ಮಿಕ ವಸ್ತ್ರ ಧರಿಸಿ ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಹೆಚ್.ಡಿ. ಕುಮಾರಸ್ವಾಮಿ, ಅವರ ಅಕ್ಕಪಕ್ಕ ಇಬ್ಬರು
  • ಕರ್ನಾಟಕ
  • ರಾಜಕೀಯ

ನೆರೆಯ ರಾಜ್ಯಗಳು ಶೇ.50 ಸಬ್ಸಿಡಿ ನೀಡುತ್ತಿವೆ, ಕರ್ನಾಟಕದಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹವಿಲ್ಲ: ಕಾಪುವಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ; ರಾಜ್ಯ ಕ್ರಮ ಕೈಗೊಂಡರೆ ಕೇಂದ್ರದ ಸಹಕಾರದ ಭರವಸೆ

November 16, 2026 9:34 PM
27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್‌ಗೆ ಪ್ರಿಯಾಂಕ್ ಖರ್ಗೆ ಚಾಲನೆ; 17 ರಾಜ್ಯಗಳ 180 ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ ನೀಲಿ ಟೋಪಿ ಮತ್ತು ಬೂದು ಬಣ್ಣದ ಬಂಡಿ ಧರಿಸಿ ಟೆನಿಸ್ ರಾಕೆಟ್ ಮತ್ತು ಚೆಂಡು ಹಿಡಿದಿರುವ ಸಚಿವ ಪ್ರಿಯಾಂಕ್ ಖರ್ಗೆ
  • ಕರ್ನಾಟಕ
  • ಕ್ರೀಡೆ

27ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್‌ಶಿಪ್‌ಗೆ ಪ್ರಿಯಾಂಕ್ ಖರ್ಗೆ ಚಾಲನೆ; 17 ರಾಜ್ಯಗಳ 180 ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ

November 16, 2026 8:52 PM
ಕಾವೇರಿ: ಪ್ರಧಾನಿ ಮೋದಿಗೆ ದೇವೇಗೌಡರ ಪತ್ರ; CWMA ಅಧಿಕಾರಕ್ಕೆ ಕಡಿವಾಣ, ನ್ಯಾಯಮಂಡಳಿ ತೀರ್ಪುಗಳ ಮರುಪರಿಶೀಲನೆ, ಮೇಕೆದಾಟು ಅನುಮೋದನೆಗೆ ಆಗ್ರಹ ಪ್ರತಿಭಟನೆಯಲ್ಲಿ ಹಸಿರು ಶಾಲು ಧರಿಸಿದ ನಾಯಕರು ಮತ್ತು ಕ್ಯಾಮೆರಾಗಳ ನಡುವೆ ಮೈಕ್ ಮುಂದೆ ಮಾತನಾಡುತ್ತಿರುವ ಹೆಚ್.ಡಿ. ದೇವೇಗೌಡ
  • ಕರ್ನಾಟಕ
  • ರಾಜಕೀಯ

ಕಾವೇರಿ: ಪ್ರಧಾನಿ ಮೋದಿಗೆ ದೇವೇಗೌಡರ ಪತ್ರ; CWMA ಅಧಿಕಾರಕ್ಕೆ ಕಡಿವಾಣ, ನ್ಯಾಯಮಂಡಳಿ ತೀರ್ಪುಗಳ ಮರುಪರಿಶೀಲನೆ, ಮೇಕೆದಾಟು ಅನುಮೋದನೆಗೆ ಆಗ್ರಹ

November 16, 2026 6:15 PM

ನೀವು ತಪ್ಪಿಸಿಕೊಂಡಿರಬಹುದು

ಹಳದಿ ಹೂಗಳಿಂದ ಅಲಂಕೃತ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಲಾಂಛನವಿರುವ ವೇದಿಕೆಯಲ್ಲಿ ಮಾತನಾಡುತ್ತಿರುವ ಕನ್ನಡಕ ಧರಿಸಿದ ವ್ಯಕ್ತಿ
  • ಕರ್ನಾಟಕ

ಪತ್ರಿಕೋದ್ಯಮದಲ್ಲಿ ಹೊಣೆಗಾರಿಕೆ ಮತ್ತು ಜನಪ್ರಿಯತೆಯ ಸಮತೋಲನ ಅಗತ್ಯ: ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ

The Bengaluru Live November 16, 2026 10:45 PM
ಕಪ್ಪುಹಲಗೆಯ ಮುಂದೆ ನೆಲದ ಮೇಲೆ ಕುಳಿತು ಶಾಲಾ ಮಕ್ಕಳೊಂದಿಗೆ ಬಿಸಿಯೂಟ ಸವಿಯುತ್ತಿರುವ ಬಿಳಿ ಅಂಗಿ ಧರಿಸಿದ ವ್ಯಕ್ತಿ
  • ಕರ್ನಾಟಕ

ಶಿರಾದ ಚಿಕ್ಕನಹಳ್ಳಿ ಕೆಪಿಎಸ್ ಶಾಲೆಗೆ ಮಧು ಬಂಗಾರಪ್ಪ ದಿಢೀರ್ ಭೇಟಿ; ಮಕ್ಕಳೊಂದಿಗೆ ಬಿಸಿಯೂಟ, ಎಲ್ಲ ಕೆಪಿಎಸ್ ಶಾಲೆಗಳಿಗೆ ಜೂನ್‌ನಿಂದ ಬಸ್

The Bengaluru Live November 16, 2026 10:39 PM
ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮನವಿ ಪತ್ರದೊಂದಿಗೆ ನಿಂತಿರುವ ಬಿಜೆಪಿ ನಾಯಕರ ತಂಡ
  • ಕರ್ನಾಟಕ
  • ರಾಜಕೀಯ

ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ದುರ್ಬಳಕೆ: ಡಿಜಿ ಭೇಟಿ ನಂತರ ಛಲವಾದಿ ನಾರಾಯಣಸ್ವಾಮಿ ಆರೋಪ

The Bengaluru Live November 16, 2026 9:46 PM
ಬಿಳಿ ಧಾರ್ಮಿಕ ವಸ್ತ್ರ ಧರಿಸಿ ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಹೆಚ್.ಡಿ. ಕುಮಾರಸ್ವಾಮಿ, ಅವರ ಅಕ್ಕಪಕ್ಕ ಇಬ್ಬರು
  • ಕರ್ನಾಟಕ
  • ರಾಜಕೀಯ

ನೆರೆಯ ರಾಜ್ಯಗಳು ಶೇ.50 ಸಬ್ಸಿಡಿ ನೀಡುತ್ತಿವೆ, ಕರ್ನಾಟಕದಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹವಿಲ್ಲ: ಕಾಪುವಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ; ರಾಜ್ಯ ಕ್ರಮ ಕೈಗೊಂಡರೆ ಕೇಂದ್ರದ ಸಹಕಾರದ ಭರವಸೆ

The Bengaluru Live November 16, 2026 9:34 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಪತ್ರಿಕೋದ್ಯಮದಲ್ಲಿ ಹೊಣೆಗಾರಿಕೆ ಮತ್ತು ಜನಪ್ರಿಯತೆಯ ಸಮತೋಲನ ಅಗತ್ಯ: ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ
  • ಶಿರಾದ ಚಿಕ್ಕನಹಳ್ಳಿ ಕೆಪಿಎಸ್ ಶಾಲೆಗೆ ಮಧು ಬಂಗಾರಪ್ಪ ದಿಢೀರ್ ಭೇಟಿ; ಮಕ್ಕಳೊಂದಿಗೆ ಬಿಸಿಯೂಟ, ಎಲ್ಲ ಕೆಪಿಎಸ್ ಶಾಲೆಗಳಿಗೆ ಜೂನ್‌ನಿಂದ ಬಸ್
  • ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗೆ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ದುರ್ಬಳಕೆ: ಡಿಜಿ ಭೇಟಿ ನಂತರ ಛಲವಾದಿ ನಾರಾಯಣಸ್ವಾಮಿ ಆರೋಪ
  • ನೆರೆಯ ರಾಜ್ಯಗಳು ಶೇ.50 ಸಬ್ಸಿಡಿ ನೀಡುತ್ತಿವೆ, ಕರ್ನಾಟಕದಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹವಿಲ್ಲ: ಕಾಪುವಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ; ರಾಜ್ಯ ಕ್ರಮ ಕೈಗೊಂಡರೆ ಕೇಂದ್ರದ ಸಹಕಾರದ ಭರವಸೆ
©Copyright 2025 The Bengaluru Live All rights reserved. | MoreNews by AF themes.