Home ಕಲಬುರ್ಗಿ ಪ್ರಧಾನಿ ಮೋದಿಗೆ ‘ನಾಲಾಯಕ್’ ಎಂದ ಪ್ರಿಯಾಂಕ್ ಖರ್ಗೆ

ಪ್ರಧಾನಿ ಮೋದಿಗೆ ‘ನಾಲಾಯಕ್’ ಎಂದ ಪ್ರಿಯಾಂಕ್ ಖರ್ಗೆ

37
0
Priyank Kharge cals PM Modi as Nalayak

ಕಲಬುರಗಿ:

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ‘ವಿಷಪೂರಿತ ಹಾವು’ ಎಂದು ವಾಗ್ದಾಳಿ ನಡೆಸಿದ ಬೆನ್ನಲ್ಲೇ ಅವರ ಪುತ್ರ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮೋದಿ ಅವರನ್ನು ಪರೋಕ್ಷವಾಗಿ ‘ನಾಲಾಯಕ್’ ಎಂದು ಕರೆದಿದ್ದಾರೆ.

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಿಂದ ಪುನರಾಯ್ಕೆ ಬಯಸಿರುವ ಪ್ರಿಯಾಂಕ್ ಖರ್ಗೆ, ಮೋದಿ ಮಳಖೇಡಕ್ಕೆ ಬಂದಾಗ ಬಂಜಾರಾ ಸಮಾಜದವರಿಗೆ ಏನು ಹೇಳಿದ್ರು? ಬಂಜಾರಾ ಸಮಾಜದ ಮಗ ದೆಹಲಿಯಲ್ಲಿದ್ದಾನೆ ಅಂತ ಮೋದಿ ಹೇಳಿದ್ದರು. ಆದರೆ ಇಂತಹ ನಾಲಾಯಕ್ ಮಗ ಇದ್ದರೆ ಹೇಗೆ ನಡೆಯುತ್ತೆ? ದೇಶ ನಡೆಸೋನು ಮಾತ್ರವಲ್ಲ. ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ರೂ ಮನೆ ಸುಸೂತ್ರವಾಗಿ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯ ಕೊನೆಯಲ್ಲಿ ನಾನು ಮೋದಿಗೆ ಹಾಗೆ ಹೇಳಿಲ್ಲ. ನಾನು ಯಾರಿಗೂ ನಾಲಾಯಕ್ ಅಂದಿಲ್ಲ, ನಾಲಾಯಕ್ ಮಗ ಇದ್ರೆ ಮನೆ ಹೇಗೆ ನಡೆಯುತ್ತೆ ಅಂತ ಪ್ರಶ್ನಿಸಿದ್ದೇನೆ. ನನಗೆ ವೈಯಕ್ತಿಕ ನಿಂದನೆಗಿಂತ ಅವರಿಂದ ಕೆಲವು ಪ್ರಶ್ನೆಗೆ ಉತ್ತರ ಮುಖ್ಯ ಎಂದು ಸಮಜಾಯಿಸಿ ನೀಡಲು ಯತ್ನಿಸಿದರು.

Also Read: Congress president Mallikarjun Kharge’s son Priyank calls Modi ‘nalayak’

ಮುಂದುವರಿದು ಮಾತನಾಡಿದ ಅವರು, ನಾವು ಬಂಜಾರ ಸಮುದಾಯದ ಮಗ ಎಂದು ಹೇಳಿ ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿಸಿ, ಬಂಜಾರ ಸಮಾಜಕ್ಕೆ ಅನ್ಯಾಯ ಆಗಿಲ್ಲವೇ? ಶಿಕಾರಿಪುರದಲ್ಲಿ ಯಡಿಯೂರಪ್ಪ ಮನೆಗೆ ಕಲ್ಲು ತೂರಿದ್ದು ಏಕೆ? ಕಲಬುರಗಿ ಮತ್ತು ಜೇವರ್ಗಿಯಲ್ಲಿ ಏಕೆ ಬಂದ್ ಆಚರಿಸಲಾಯಿತು? ಮೀಸಲಾತಿಯಲ್ಲಿ ಗೊಂದಲವಿದೆ ಎಂದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ‘ನಾಲಾಯಕ್’ ಎಂದ ಪ್ರಿಯಾಂಕ್ ಖರ್ಗೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು 

LEAVE A REPLY

Please enter your comment!
Please enter your name here