ಬೆಂಗಳೂರು:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ಇಂದಿರಾ ಕ್ಯಾಂಟೀನ್ ಬಗ್ಗೆ ನಿರ್ಲಕ್ಷ್ಯ ಧೋರಣೆ ಹಾಗೂ ಇಂದಿರಾ ಕ್ಯಾಂಟೀನ್ ಮುಚ್ಚುವ ಹುನ್ನಾರ ಬಿ.ಜೆ.ಪಿ.ಸರ್ಕಾರದ ನಿಲುವನ್ನ ಖಂಡಿಸಿ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಎದುರು ಬೃಹತ್ ಪ್ರತಿಭಟನೆ ಮಾಡಲಾಯಿತು.
ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್. ಶಿವರಾಜು ರವರು ಮತ್ತು ಕೆ.ಪಿ.ಸಿ.ಸಿ.ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಪುಟ್ಟಸ್ವಾಮಿಗೌಡರು ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ಪ ಮತ್ತು ಕಾರ್ಯದರ್ಶಿಗಳಾದ ದಿನೇಶ್ ,ನಾಗರಾಜ್ ಮತ್ತು ನೂರಾರು ಕಾರ್ಮಿಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ನಂತರ ಬಿ.ಬಿ.ಎಂ.ಪಿ. ವಿಶೇಷ ಆಯುಕ್ತರಾದ ರಂದೀಪ್ ರವರಿಗೆ ಮನವಿ ಸಲ್ಲಿಸಿದರು.
ಶಿವರಾಜುರವರು ಮಾತನಾಡಿ 2017ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಜೀ ನೆನಪಿನಲ್ಲಿ ಬಡವರಿಗೆ, ಕೂಲಿಕಾರ್ಮಿಕರು ಹಸಿವಿನಿಂದ ಬಳಲಾಬಾರದು ಎಂದು 5ರೂಪಾಯಿ ಉಪಹಾರ ಮತ್ತು 10ರೂಪಾಯಿ ಊಟವನ್ನು ಇಂದಿರಾ ಕ್ಯಾಂಟೀನ್ ಮೂಲಕ ಲಕ್ಷಾಂತರ ಜನ ಪ್ರತಿದಿನ ಊಟ ಮಾಡುತ್ತಿದ್ದಾರೆ.
ಬಿ.ಜೆ.ಪಿ. ಸರ್ಕಾರ ಆಡಳಿತದಲ್ಲಿ ಇಂದಿರಾ ಕ್ಯಾಂಟೀನ್ ಗೆ ಅನುದಾನ ನೀಡದೆ ಮುಚ್ಚುವ ಕುತಂತ್ರ ಮಾಡುತ್ತಿದೆ. ಕೊರೋನ ಲಾಕ್ ಡೌನ್ ಆಹಾರ ಕಿಟ್ ಹಗರಣ ಮತ್ತು ಹೆಲ್ತ್ ಕಿಟ್ ,ಸ್ಯಾನಿಟೈಸರ್ ,ಸೀಲ್ ಡೌನ್ ಹಗರಣದ ಸರ್ಕಾರವಾಗಿದೆ. ಇದೀಗ ಬಡವರು ತಿನ್ನುವ ಒಂದು ಹೊತ್ತಿನ ಊಟಕ್ಕೆ ಕಲ್ಲು ಹಾಕುವ ತಂತ್ರ ಮಾಡುತ್ತಿದೆ. ಬಿ.ಜೆ.ಪಿ. ಸರ್ಕಾರದ ವಿರುದ್ದ ಬೆಂಗಳೂರಿನ 198ವಾರ್ಡ್ಗಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಕಾರ್ಮಿಕ ಘಟಕ ಅಧ್ಯಕ್ಷರಾದ ಪುಟ್ಟಸ್ವಾಮಿಗೌಡರು ಮಾತನಾಡಿ ಶಾಲಾ ,ಕಾಲೇಜು ಮತ್ತು ಬಡವರು ,ಕೂಲಿ ಕಾರ್ಮಿಕರು ,ಆಟೋ ಚಾಲಕರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ವೆಚ್ಚದಲ್ಲಿ ಸಿಗುವ ಉಪಹಾರ ಮತ್ತು ಊಟದಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು .ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.