ಬೆಂಗಳೂರು:
ಬೆಂಗಳೂರುನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪೆಟ್ರೋಲ್ , ಡೀಸಲ್ ಮತ್ತು ಅಡುಗೆ ಆನಿಲ , ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಮೌರ್ಯ ವೃತ್ತ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜಭವನಕ್ಕೆ ತೆರಳಲು ಹೋರಾಟ ಕಾಂಗ್ರೆಸ್ ಕಾರ್ಯಕರ್ತರನ್ನ ಪೋಲೀಸ್ ರು ಬಂಧಿಸಿದರು.
ರಾಮಲಿಂಗಾರೆಡ್ಡಿ ರವರು ಮಾತನಾಡಿ ಕಳೆದ ಏಳು ವರ್ಷಗಳ ಬಿ.ಜೆ.ಪಿ.ಪಕ್ಷದ ಆಡಳಿತದಲ್ಲಿ ಆಚ್ಚೇದೀನ್ ಬಂದಿಲ್ಲ ಬುರೇ (ಕೆಟ್ಟ) ದಿನಗಳು ಬಂದಿದೆ.
ಪೆಟ್ರೋಲ್ ಬೆಲ್ 105ರೂಪಾಯಿ ,ಡೀಸಲ್ ಬೆಲೆ 96ರೂಪಾಯಿ ಮತ್ತು ಅಡುಗೆ ಆನಿಲ ಬೆಲೆ 900ರೂಪಾಯಿ ,ದಿನಬಳಕೆ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಬಡವರು ,ಮಧ್ಯಮ ವರ್ಗದ ಕುಟುಂಬ ನಿರ್ವಹಣೆ ಮಾಡಲು ಆಸಾಧ್ಯವಾಗಿದೆ . ವಿದೇಶ ಕಪ್ಪು ಹಣ ಬಂದಿಲ್ಲ ,ವರ್ಷಕ್ಕೆ ಯುವಕರಿಗೆ 2ಕೋಟಿ ಉದ್ಯೋಗ ಸಿಕ್ಕಿಲ್ಲ. ಬಿ.ಜೆ.ಪಿ.ಸುಳ್ಳು ಹೇಳುವುದು ಕಾಯಕವಾಗಿದೆ ,ಕೇಂದ್ರ ಮತ್ತು ರಾಜ್ಯ ಬಿ.ಜೆ.ಪಿ.ಸರ್ಕಾರ ಆಡಳಿತ ಜನ ವಿರೋಧಿ ಆಡಳಿತವಾಗಿದೆ ಎಂದು ಹೇಳಿದರು.
ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ ಮತ್ತು ವಿಧಾನಪರಿಷತ್ ಸದಸ್ಯರಾದ ಯು.ಬಿ.ವೆಂಕಟೇಶ್ , ನಾರಾಯಣಸ್ವಾಮಿ ಮತ್ತು ಕೆ.ಪಿ.ಸಿ.ಸಿ.ಮಹಿಳಾ ಅಧ್ಯಕ್ಷರಾದ ಪುಷ್ಪ ಅಮರ್ ನಾಥ್ ಮತ್ತು ಬೆಂಗಳೂರುನಗರ ಜಿಲ್ಲಾ ಅಧ್ಯಕ್ಷರುಗಳಾದ ರಾಜ್ ಕುಮಾರ್ ,ಶೇಖರ್ ,ಕೃಷ್ಣಪ್ಪರವರು ಮಾಜಿ ಮಹಾಪೌರರುಗಳಾದ ರಾಮಚಂದ್ರಪ್ಪ ,ಜೆ.ಹುಚ್ಚಪ್ಪ ,ಮಂಜುನಾಥರೆಡ್ಡಿ ಹಾಗೂ ಮಾಜಿ ಆಡಳಿತ ಪಕ್ಷದ ನಾಯಕರುಗಳಾದ ಉದಯಶಂಕರ್ , ಎಮ್.ಶಿವರಾಜುರವರು ಮತ್ತು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವಿಮಲ ವೆಂಕಟ್ ರವರು ಹಾಗೂ ಮಾಜಿ ಪಾಲಿಕೆ ಸದಸ್ಯರು ,ಮಹಿಳಾ ಕಾಂಗ್ರೆಸ್ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.