Home ಅಪರಾಧ ಅರ್ಧ ಕೆಜಿ ಚಿನ್ನ ಕದ್ದಿದ್ದ ಆರೋಪಿ 48 ಗಂಟೆಗಳಲ್ಲಿ ಬಂಧನ

ಅರ್ಧ ಕೆಜಿ ಚಿನ್ನ ಕದ್ದಿದ್ದ ಆರೋಪಿ 48 ಗಂಟೆಗಳಲ್ಲಿ ಬಂಧನ

52
0
Rajajinagar Police gold theft arrested
ಬಂಧಿತ ಆರೋಪಿ ವರದರಾಜು
bengaluru

ಬೆಂಗಳೂರು:

ರಾಜಾಜಿನಗರ ಪೊಲೀಸರು ಸ್ಕ್ರೂ ಡ್ರೈವ್ ನಿಂದ ಡೋರ್ ಲಾಕ್ ಮುರಿದು ಚಿನ್ನ ಎಗರಿಸಿದ್ದ ಆರೋಪಿಯನ್ನು 48 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ವರದರಾಜು ಎಂದು ಗುರುತಿಸಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಬೀಗ ಹಾಕಿರುವ ಮನೆ ಹಾಗೂ ಕಚೇರಿಗಳನ್ನು ವರದರಾಜು ಟಾರ್ಗೆಟ್ ಮಾಡುತ್ತಿದ್ದನು. ಇದೇ ರೀತಿ ಟ್ರಾವೆಲ್ಸ್ ಕಚೇರಿಯಲ್ಲಿ ಮಾಲೀಕರೊಬ್ಬರು ಚಿನ್ನಾಭರಣ ಇಟ್ಟು ತೆರಳಿದ್ದರು.

bengaluru

ಈ ವೇಳೆ ಸ್ಕ್ರೂ ಡ್ರೈವ್ ನಿಂದ ಡೋರ್ ಲಾಕ್ ಮುರಿದು ಆರೋಪಿ ವರದರಾಜು ಚಿನ್ನ ಕದ್ದಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಆರೋಪಿ ವರದರಾಜುನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಅರ್ಧ ಕೆಜಿ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಈ ಹಿಂದೆ ನಂದಿನಿ ಲೇಔಟ್ ಪೊಲೀಸರಿಂದ ಆರೋಪಿ ಅರೆಸ್ಟ್ ಆಗಿರುವ ವಿಚಾರ ಸಹ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

bengaluru

LEAVE A REPLY

Please enter your comment!
Please enter your name here