Home ಅಪರಾಧ ಪಾಕಿಸ್ತಾನ ಮೂಲದ ಐಎಸ್‌ಐ ಅಧಿಕಾರಿಗೆ ವಾಟ್ಸಾಪ್ ಸಂದೇಶಗಳ ರವಾನಿಸುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

ಪಾಕಿಸ್ತಾನ ಮೂಲದ ಐಎಸ್‌ಐ ಅಧಿಕಾರಿಗೆ ವಾಟ್ಸಾಪ್ ಸಂದೇಶಗಳ ರವಾನಿಸುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ

85
0
Rajasthan man arrested in Bengaluru for sending WhatsApp messages to Pakistan-based ISI official
bengaluru

ಬೆಂಗಳೂರಿನ ಪ್ರಮುಖ ಕಟ್ಟಡಗಳ ಫೋಟೋ ಕ್ಲಿಕ್ ಮಾಡುತ್ತಿದ್ದ ವ್ಯಕ್ತಿ

ಬೆಂಗಳೂರು:

ನಗರದ ಪ್ರಮುಖ ಸ್ಥಳ, ಕಟ್ಟಡ, ರಕ್ಷಣಾ ಸಂಸ್ಥೆಯ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದ ಮತ್ತು ಪಾಕಿಸ್ತಾನ ಮೂಲದ ಐಎಸ್‌ಐ ಅಧಿಕಾರಿಗೆ ವಾಟ್ಸಾಪ್ ಸಂದೇಶಗಳ ರವಾನಿಸುತ್ತಿದ್ದ ರಾಜಸ್ಥಾನ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಆರೋಪಿ ತಾನು ತೆಗೆದ ಫೋಟೋಗಳನ್ನು ವಿದೇಶಿ ಏಜೆನ್ಸಿಗಳಿಗೆ (ಪಾಕಿಸ್ತಾನ ಮೂಲದ ಐಎಸ್‌ಐ ಅಧಿಕಾರಿಗೆ) ಕಳುಹಿಸುತ್ತಿದ್ದ ಎಂಬ ಮಿಲಿಟರಿ ಇಂಟೆಲಿಜೆನ್ಸ್ ನೀಡಿದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದೇಶದ ಬಹುತೇಕ ಏಜೆನ್ಸಿಗಳಿಗೆ ಭಯೋತ್ಪಾದಕರ ಸಂಪರ್ಕವಿರುವುದರಿಂದ ನಗರದ ಪ್ರಮುಖ ಡಿಫೆನ್ಸ್ ಸೇರಿ ಹಲವು ಮಾಹಿತಿ ಸೋರಿಕೆಯಾದರೆ ಅಪಾಯ ವಿರುತ್ತದೆ. ಹೀಗಾಗಿ ಬಂಧಿತ ಯಾವ ಏಜೆನ್ಸಿಗಳಿಗೆ ಮಾಹಿತಿ ರವಾನಿಸುತ್ತಿದ್ದ ಎಂಬುದರ ಕುರಿತು ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

bengaluru

Read Here: Pak ISI’s Indian mole nabbed in Bengaluru

“ಸೆಪ್ಟೆಂಬರ್,19, 2021 ರಂದು, ಸದರ್ನ್ ಕಮಾಂಡ್ ಮಿಲಿಟರಿ ಇಂಟೆಲಿಜೆನ್ಸ್, ಬೆಂಗಳೂರು ಮತ್ತು ನಗರ ಅಪರಾಧ ವಿಭಾಗದ ಜಂಟಿ ಕಾರ್ಯಾಚರಣೆಯಲ್ಲಿ, ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದಿಂದ ಜಿತೇಂದರ್ ಸಿಂಗ್ ಎಂಬ ಶಂಕಿತನನ್ನು ಬಂಧಿಸಲಾಯಿತು,” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಶಂಕಿತ ರಾಜಸ್ಥಾನದ ಬಾರ್ಮರ್ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬಟ್ಟೆ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಅವರು ಪಾಕಿಸ್ತಾನ ಮೂಲದ ಐಎಸ್‌ಐ ಅಧಿಕಾರಿಯೊಂದಿಗೆ ವಾಟ್ಸಾಪ್ ಸಂದೇಶಗಳು, ವಾಟ್ಸಾಪ್ ಆಡಿಯೋ ಮತ್ತು ವಿಡಿಯೋ ಕರೆಗಳಲ್ಲಿ ಸಂವಹನ ನಡೆಸುತ್ತಿದ್ದರು. ಅಂತಾರಾಷ್ಟ್ರೀಯ ಗಡಿಯಲ್ಲಿ ಸೇನಾ ಪೋಸ್ಟ್‌ಗಳ ಬಳಿ ಸ್ಥಳ ಪರೀಶೀಲನೆ ಮಾಡಿ ಅದನ್ನ ವಾಟ್ಸಪ್ ಮೂಲಕ ಐಎಸ್‌ಐ ಮುಖ್ಯಸ್ಥರನ್ನು ರವಾನಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ

bengaluru

LEAVE A REPLY

Please enter your comment!
Please enter your name here