Home ಅಪರಾಧ Davanagere: ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿ ತಾನು ನೇಣಿಗೆ ಶರಣು

Davanagere: ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿ ತಾನು ನೇಣಿಗೆ ಶರಣು

59
0
Davangere: Man poisons wife, daughter and kills himself
bengaluru

ದಾವಣಗೆರೆ:

ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ಕು ಜನರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ದಾವಣಗೆರೆ ನಗರದ ಶೇಖರಪ್ಪ ನಗರದ ನಿವಾಸಿಗಳಾದ ಕೃಷ್ಣನಾಯ್ಕ್ (43ವರ್ಷ) ಪತ್ನಿ ಸರಸ್ವತಿಬಾಯಿ (35 ವರ್ಷ ) ಹಾಗೂ 8 ವರ್ಷದ ಮಗು ದ್ರುವ ಮೃತಪಟ್ಟಿರುತ್ತಾರೆ. ಕೃಷ್ಣನಾಯ್ಕ ನೇಣು ಬಿಗಿದ ಸ್ಥಿತಿಯಲ್ಲಿದ್ದು ಮಗು ಮತ್ತು ತಾಯಿಗೆ ವಿಷದ ಊಟ ಮಾಡಿ ಮೃತಪಟ್ಟಿರುತ್ತಾರೆ. ಕೃಷ್ಣನಾಯ್ಕ್ ತನ್ನ ಪತ್ನಿ ಹಾಗೂ ಮಗುವಿಗೆ ಊಟದಲ್ಲಿ ವಿಷವನ್ನ ಹಾಕಿ ನಂತರ ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಸರಸ್ವತಿಬಾಯಿ ಮೂಲವ್ಯಾದಿ ಕಾಯಿಲೆಯಿಂದ ಬಳಲುತ್ತಿದ್ದು, ಕೃಷ್ಣನಾಯ್ಕ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಕೃಷ್ಣನಾಯ್ಕ ಹಾಗೂ ಪತ್ನಿ ಲಾರಿ ಚಾಲಕರಾಗಿದ್ದು ಹಲವು ದಿನಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆರ್ ಎಂ ಸಿ ಠಾಣೆಯಲ್ಲಿ ಪ್ರಕರಣ ದಾಖಲು.

bengaluru

ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ನಿರಂತರ ಅಲೆದಾಡುತ್ತಿತ್ತು ಈ ಕುಟುಂಬ. ಆಸ್ಪತ್ರೆ ಖರ್ಚು ವೆಚ್ಚಕ್ಕೆ ಹೆದರಿದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿ ಕೃಷ್ಣನಾಯ್ಕ್ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಆರ್‌ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Also Read: Davanagere man poisons wife & daughter, then hangs himself

bengaluru

LEAVE A REPLY

Please enter your comment!
Please enter your name here