ಬೆಂಗಳೂರು:
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನ ನಿರ್ಜನ ಪ್ರದೇಶದಲ್ಲಿ ತಡ ರಾತ್ರಿ ರೇವ್ ಪಾರ್ಟಿ ನಡೆದಿದ್ದು, ಪೊಲೀಸರು ದಾಳಿ ನಡೆಸಿ 35ಕ್ಕೂ ಜನರನ್ನು ವಶಕ್ಕೆ
ರೇವ್ ಪಾರ್ಟಿ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ ನಡೆಸಿದ್ದಾರೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಡ್ರಗ್ಸ್ ನಶೆಯಲ್ಲಿದ್ದ ಕೆಲ ಯುವಕ, ಯುವತಿಯರು ಪರಾರಿಯಾಗಿದ್ದಾರೆ. ಈ ಪೈಕಿ ಸದ್ಯ ಡ್ರಗ್ಸ್ ನಶೆಯಲ್ಲಿದ್ದ 35ಕ್ಕೂ ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇವ್ ಪಾರ್ಟಿಯಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದು, ಮ್ಯೂಸಿಕ್ ಕಂಪನಿಯೊಂದು ಈ ಪಾರ್ಟಿ ಆಯೋಜಿಸಿತ್ತು ಎನ್ನಲಾಗಿದೆ.
ಪಾರ್ಟಿಯಲ್ಲಿ ಕೇರಳ, ಉತ್ತರ ಪ್ರದೇಶ ಮೂಲದವರು ಸೇರಿ ರಾಜ್ಯದ ಕೆಲ ವಿದ್ಯಾರ್ಥಿಗಳು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಡ್ರಗ್ಸ್ ಪೆಡ್ಲರ್‌ಗಳು, ರಷ್ಯಾದ ಮಾಡೆಲ್, ಡಿಜೆ ಕರೆಸಿ ಜಂಗಲ್ ಸಫಾರಿ ಹೆಸರಿನಲ್ಲಿ ಈ ರೇವ್ ಪಾರ್ಟಿ ನಡೆಸುತ್ತಿದ್ದರು ಎನ್ನಲಾಗಿದೆ.
ಮೊದಲಿಗೆ ಇನ್‌ಸ್ಟಾ ಗ್ರಾಂನಲ್ಲಿ ಪಾರ್ಟಿಗೆ ಸದಸ್ಯರ ಆಯ್ಕೆ ಮಾಡಲಾಗುತ್ತಿತ್ತು. ನಂತರ ಎಲ್ಲರೂ ಗೌಪ್ಯವಾಗಿ ಒಂದೆಡೆ ಸೇರಲು ಸ್ಕ್ಯಾನರ್ ಬಳಕೆ ಮಾಡಿ, ಹೆಸರು ನೋಂದಣಿಗೆ 1000, 2000, 5000 ರೂ. ನಿಗದಿ ಮಾಡುತ್ತಿದ್ದರು. ಸ್ಕ್ಯಾನ್ ಆದರೆ ಮಾತ್ರ ರೇವ್ ಪಾರ್ಟಿ ಒಳಗಡೆ ಪ್ರವೇಶ ನೀಡಲಾಗುತ್ತಿತ್ತು. ನಂತರ ಒಳಗೆ ಪ್ರವೇಶದ ವೇಳೆ ಬಲಗೈಗೆ ಮ್ಯೂಸಿಕ್ ಕಂಪನಿಯ ಗುರುತಿನ ಸೀಲ್ ಒತ್ತುವ ಮೂಲಕ ಪ್ರವೇಶ ನೀಡಲಾಗುತ್ತಿತ್ತು ಎನ್ನಲಾಗಿದೆ.
Also Read: Bengaluru police raid rave party, arrest 35