Home ಅಪರಾಧ BENGALURU: ಜಲಮಂಡಳಿ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಬಲಿ

BENGALURU: ಜಲಮಂಡಳಿ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಬಲಿ

104
0
BENGALURU: biker dies after falling into BWSSB trench
Advertisement
bengaluru

ಬೆಂಗಳೂರು:

ಜಲಮಂಡಳಿ ಇಲಾಖೆ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಹೆಸರುಘಟ್ಟ ಮುಖ್ಯ ರಸ್ತೆಯ ಮೀಡಿಯಾ ಶಾಲೆ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

ಮಲ್ಲಸಂದ್ರ ನಿವಾಸಿ ಬೈಕ್ ಸವಾರ ಆನಂದಪ್ಪ (47) ಮೃತ ದುರ್ದೈವಿ.

ಪೀಣ್ಯದಲ್ಲಿ ಕಾವೇರಿ 5ನೇ ಹಂತದ ಕಾಮಗಾರಿ ಇತ್ತೀಚೆಗಷ್ಟೆ ಮುಗಿದಿತ್ತು. ಜಲ ಮಂಡಳಿ ಸಿಬ್ಬಂದಿ ವಾಲ್ವ್ ಅಳವಡಿಸಲು ರಸ್ತೆ ಗುಂಡಿ ತೆಗೆದಿದ್ದು, ಕಾಟಾಚಾರಕ್ಕೆ ಬ್ಯಾರಿಕೇಡ್ ಅಳವಡಿಸಿದ್ದರು. ಪರಿಣಾಮ ವೇಗವಾಗಿ ಬಂದ ಬೈಕ್ ಸವಾರ ಏಕಾಏಕೀ ಗುಂಡಿ ಕಾಣದೇ ​ಮೃತಪಟ್ಟಿದ್ದಾರೆ.

bengaluru bengaluru

ಕಾಮಗಾರಿ ನಡೆಯುವ ಸ್ಥಳದಿಂದ ಕನಿಷ್ಠ 50 ಮೀಟರ್ ದೂರಕ್ಕೆ ರಿಫ್ಲೆಕ್ಟರ್‌ಗಳೊಂದಿಗೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಆದರೆ, ಯಾವುದೇ ರಿಫ್ಲೆಕ್ಟರ್‌ಗಳಿಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

BENGALURU: biker dies after falling into BWSSB trench

ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read: Bengaluru biker dies after falling into BWSSB trench


bengaluru

LEAVE A REPLY

Please enter your comment!
Please enter your name here