Home ಬೆಂಗಳೂರು ನಗರ ಎಂದಿಗೂ ಮಣಿಯದ ಮಾನವನ ವೈತನ್ಯ ಶಕ್ತಿಗೆ ಗಣರಾಜ್ಯೋತ್ಸವ ಅರ್ಪಣೆ : ರಾಜ್ಯಪಾಲ ವಜೂಬಾಯಿ ವಾಲಾ

ಎಂದಿಗೂ ಮಣಿಯದ ಮಾನವನ ವೈತನ್ಯ ಶಕ್ತಿಗೆ ಗಣರಾಜ್ಯೋತ್ಸವ ಅರ್ಪಣೆ : ರಾಜ್ಯಪಾಲ ವಜೂಬಾಯಿ ವಾಲಾ

57
0

ಬೆಂಗಳೂರು:

ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಗಣರಾಜ್ಯೋತ್ಸವದ ಸಮಾ ರಂಭವನ್ನು ಅರ್ಪಿಸುತ್ತೇನೆ. ಇದೊಂದು ಶತ್ರುವಿನ ವಿರುದ್ದ ಪಡೆದ ಜಯವಾಗಿದೆ.2020ರಲ್ಲಿ ಹಿಂದೆಂದೂ ಕಂ ಡರಿಯದ ಕೊವಿಡ್-19ರ ಸವಾಲನ್ನು ಜಗತ್ತು ಎದುರಿಸುತ್ತಿರುವಾಗ,ನಾವು ನವ ಚೈತನ್ಯ ಮತ್ತು ಆಶೋತ್ತರ ದೊಂದಿಗೆ ಹೊಸ ವರ್ಷ 2021ಕ್ಕೆ ಹೆಜ್ಜೆ ಇರಿಸಿದ್ದೇವೆ ಎಂದು ರಾಜ್ಯಪಾಲ ವಜುಬಾಯಿ ವಾಲಾ ಹೇಳಿದ್ದಾರೆ.

ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಇಂದು ನಡೆದ 72 ನೇ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಬಳಿಕ ಮಾತನಾಡಿದ ಅವರು,ಕರ್ನಾಟಕ ಸರ್ಕಾರ ವು,ಜನತೆಯ ಸಹಕಾರದೊಂದಿಗೆ ಹಗಲಿರುಳು ಶ್ರಮಿಸಿ ಕೊವಿಡ್-19ರ ಅಲೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾ ಗಿದೆ.ಈ ಬಿಕ್ಕಟ್ಟಿನ ಅವಕಾಶವನ್ನು ನಮ್ಮ ಸಾಮರ್ಥ್ಯ ವೃದ್ಧಿಸಲು ಮತ್ತು ಆರೋಗ್ಯ ಮೂಲಸೌಕರ್ಯ ಹಾಗೂ ಪಿಪಿಇ.ಕಿಟ್,ವೆಂಟಿಲೇಟರ್ ಉತ್ಪಾದನೆಯನ್ನು ಹೆಚ್ಚಿಸಲು ಬಳಸಿಕೊಂಡಿದ್ದೇವೆ.ಇದು ಪ್ರಧಾನಿ ನರೇಂದ್ರ ಮೋ ದಿಯವರು ದೂರದರ್ಶಿತ್ವ,ಆತ್ಮ ನಿರ್ಭರ್ ಭಾರತ್’ ಕಾರ್ಯಕ್ರಮದ ದಿಶೆಯಲ್ಲಿ ಒಂದು ಉತ್ತಮ ಹೆಜ್ಜೆಯಾ ಗಿರುತ್ತದೆ ಎಂದರು.

WhatsApp Image 2021 01 26 at 11.28.53

ಸಾಂಪ್ರದಾಯಿಕ ಗುಜರಾತಿ ಪೇಟ ಧರಿಸಿ, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯಪಾಲ ವಜು ಭಾಯಿ ವಾಲಾ ರಾಜ್ಯದ ಜನರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.ಸುಮಾರು 40ನಿಮಿಷಗಳಲ್ಲಿ ಮುಕ್ತಾಯವಾದ ಕಾರ್ಯಕ್ರಮದಲ್ಲಿ 12ಪುಟಗಳ ಭಾಷಣವನ್ನು ರಾಜ್ಯಪಾಲರು ಓದಿದರು.ತಮ್ಮ ಭಾಷಣದ ಲ್ಲಿ ಸರ್ಕಾರದ ಕಾರ್ಯಕ್ರಮಗಳು,ಯೋಜನೆಗಳನ್ನು ಹೊಗಳುವ ಮೂಲಕ ಸರ್ಕಾರದ ಬೆನ್ನು ತಟ್ಡಿದರು.

ಕೋವಿಡ್ ಕೊನೆಯ ಹಂತಕ್ಕೆ ತಲುಪಿದ್ದೇವೆ.ಹಾಗಂತಾ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.ದೈಹಿಕ ಅಂತರ, ಮಾಸ್ಕ್ ಧರಿಸುವುದು,ಸ್ಯಾನಿಟೈಸ್ ಬಳಕೆ ಕಡ್ಡಾಯ ಎಂದು ಸಲಹೆ ಮಾಡಿದರು.ಭಾರತ ಲಸಿಕೆ ಉತ್ಪಾದಿಸುತ್ತ ದೆ.ಈ ಲಸಿಕೆಗಳನ್ನು ವಿದೇಶಗಳಿಗೂ ಸಹ ರಪ್ತು ಮಾಡುತ್ತಿರುವುದು ಗಮನಾರ್ಹ.ಸಮರ್ಥ ನಾಯಕರಾದ ಪ್ರ ಧಾನಿ ನರೇಂದ್ರ ಮೋದಿ ಜನವರಿ 16ರಂದು ಲಸಿಕಾ ಅಭಿಯಾನ ಆರಂಭಿಸಿದರು.ನಾವು ಕೇಂದ್ರ ಸರ್ಕಾರದ ಸಹ ಕಾರದೊಂದಿಗೆ ಪ್ರತಿಯೊಬ್ಬರಿಗೂ ಲಸಿಕೆ ತಲುಪಲು ಕ್ರಮ ವಹಿಸಲಾಗಿದೆ.ಕೊರೋನಾ ನಿರ್ವಹಣೆಗೆ ಶ್ರಮಿಸಿದ ವರು ಹೀರೋಗಳಾಗಿರುತ್ತಾರೆ.ಅವರಿಗೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಪ್ರವಾಹ ನಿರ್ವಹಣೆ ಶ್ರಮಿಸಿದ ವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಕೃಷಿ ವಲಯದಲ್ಲಿ ಬದಲಾವಣೆ ತರಲು,ಜಲಾನಯನದ ಕಡೆ ಗಮನ ಹರಿಸಿ ದ್ದೇವೆ ಎಂದು ತಮ್ಮ ಭಾಷಣದಲ್ಲಿ ರಾಜ್ಯಪಾಲರು ಹೇಳಿದರು.

WhatsApp Image 2021 01 26 at 11.28.54

ಈ ಬಾರಿ ಮಹಿಳಾ‌ ಕೇಂದ್ರಿತ ಬಜೆಟ್​ಗೆ ಆದ್ಯತೆ ನೀಡಲಾಗುವುದು.ಅಂಗನವಾಡಿಗಳು,ಸಂತಾನೋತ್ಪತ್ತಿ ಮತ್ತು ಮಹಿಳಾ ಆರೋಗ್ಯ ಕಾರ್ಯಕರ್ತಯರ ಮೂಲಕ ಗರ್ಭಿಣಿ ಮಹಿಳೆಯರಿಗೆ ಸೇವೆ ನೀಡಲು ಪ್ರಯತ್ನ ಮಾಡಲಾ ಗುತ್ತಿದೆ.ಬೆಂಗಳೂರಿನಲ್ಲಿ 8015 ಕೋಟಿ ಅನುಮೋದಿತ ಮೊತ್ತದಲ್ಲಿ ಕೆರಗಳ ಸಂರಕ್ಷಣೆ ಮಾಡಿದ್ದೇವೆ.ಸ್ಮಾರ್ಟ್​ ಸಿಟಿ ಯೋಜನೆಯಲ್ಲಿ ನಗರದ ರೂಪವನ್ನೇ ಬದಲಾಯಿಸಲಾಗುತ್ತಿದೆ.ಬಿಡದಿಯಲ್ಲಿ 210 ಕೋಟಿ ರೂ.ವೆಚ್ಚದ ಲ್ಲಿ ತ್ಯಾಜ್ಯದಿಂದ ಇಂಧನ ಎಂಬ ಯೋಜನೆ ಮಾಡಿದ್ದೇವೆ.ಪೋಲಿಸ್ ಪಡೆಯಲ್ಲಿ ಮಹಿಳಾ ಮೀಸಲಾತಿ ಶೇಕಡಾ 25ಕ್ಕೆ ಹೆಚ್ಚಳ ಮಾಡಿದ್ದೇವೆ.ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ವಯೋಮಿತಿ ಎರಡು ವರ್ಷ ಹೆಚ್ಚಳ ಮಾಡಲಾಗಿ ದೆ.ಪೊಲೀಸ್ ಗೃಹ 2025 ಯೋಜನೆಗೆ ಚಾಲನೆ ನೀಡಲಾಗಿದೆ.

WhatsApp Image 2021 01 26 at 11.28.55

ಅಗ್ನಿಶಾಮಕ ತುರ್ತು ಸೇವೆ ಇಲಾಖೆಯಲ್ಲಿ 1568 ಹುದ್ದೆ ನೇಮಕಕ್ಕೆ ಪ್ರಾರಂಭ ಮಾಡಲಾಗಿದೆ.ರಾಜ್ಯದಲ್ಲಿ ನಾ ವೀನ್ಯತಾ ಉತ್ತೇಜನೆಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಪ್ರಾರಂಭ ಮಾಡಲಾಗಿದೆ.ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25 ಅನುಷ್ಠಾನ ಮಾಡಲಾಗಿದೆ.ಕೊರೊ‌ನಾ ಸಮಯಲ್ಲಿ ಪಿಯುಸಿ,ಎಸ್ಎಸ್ ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.ಅಭಿವೃದ್ಧಿಗಾಗಿ 170ಕೋಟಿ ರೂ.ಬಜೆಟ್​ನಲ್ಲಿ ಮೀಸಲಿರಿಸ ಲಾಗಿದೆ.ಇದರಿಂದ ಭೂ ರಹಿತ ಕಾರ್ಮಿಕರಿಗೆ ಮತ್ತು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಉದ್ಯೋಗವಕಾಶ ದೊರೆ ಯಲಿದೆ.ಮೊಬೈಲ್ ಮತ್ತು ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆ ಅಳವಡಿಕೆ ಮಾಡಲಾಗಿದೆ.ಇದರಿಂದ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಸಹಾಯಧನ ಸುಗಮವಾಗಿ ದೊರೆಯಲಿದೆ.ಕೋವಿಡ್ ವಿರು ದ್ದದ ಹೋರಾಟದಲ್ಲಿ ದೇಶದಲ್ಲಿಯೇ ಮಾದರಿ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ಶ್ಲಾಘಿಸಿದರು.

WhatsApp Image 2021 01 26 at 11.28.54 1

ಅರಣ್ಯ ಮತ್ತು ಜೀವ ಪರಿಸರ ಇಲಾಖೆಯಿಂದ ದೇಶದಲ್ಲಿ ಮೊದಲ ಬಾರಿಗೆ ಹಸಿರು ಸೂಚ್ಯಾಂಕ ಸಾಧನ ಕಿಟ್ ಅಭಿಪ್ರಾಯ ಪಡಿಸುತ್ತಿದೆ.ಗ್ರಾಮ ಪಂಚಾಯ್ತಿಗಳಲ್ಲಿ 6544 ಜೀವ ವೈವಿಧ್ಯ ನಿರ್ವಹಣ ಸಮಿತಿ ರಚನೆ ಮಾಡ ಲಾಗಿದೆ.ಬೆಂಗಳೂರು ನೀರಿನ ಪೂರೈಸಲು ಎತ್ತಿನಹೊಳೆ ಯೋಜನೆಯಿಂದ 2.5 ಟಿಎಂಸಿ ನೀರು ಹಂಚಿಕೆ ಮಾಡಿ ದೆ.ಟಿಜಿ ಹಳ್ಳಿ ಕುಡಿಯುವ ನೀರಿನ ಸರಬರಾಜು ಯೋಜನೆ ಹಂತ 1 ಕ್ಕೆ ಚಾಲನೆ ನೀಡಲಾ ಗಿದೆ.ಪರಿಶಿಷ್ಟ ಜಾತಿ, ಪಂಗಡಗಳ ಜನರ ಅಭಿವೃದ್ಧಿಗೆ 30 ಸಾವಿರ ಕೋಟಿ ರೂ.ನೀಡಲಾಗಿದೆ.ತೋಟಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.ಸರ್ಕಾರ ಅದನ್ನು ಮತ್ತಷ್ಟು ಸುಧಾರಿಸುತ್ತಿದೆ.ಅದಕ್ಕಾಗಿ ‌701ಕೋಟಿ ರೂ.ಬಿಡುಗಡೆ ಮಾ ಡಲಾಗಿದೆ.ಅಲ್ಲದೆ,15,905 ಹೆಕ್ಟೇರ್ ಪ್ರದೇಶವನ್ನು ಆಧುನಿಕ ನೀರಾವರಿ ವ್ಯವ ಸ್ಥೆಯಡಿ ತರಲಾಗಿದೆ.ಕೋವಿಡ್ ಸಂದರ್ಭದಲ್ಲಿ ತೋಟಗಾರಿಕೆ ಬೆಳೆಗಾರರಿಗೆ ನೆರವಾಗುವ ಸಲುವಾಗಿ 92,0 70 ಫಲಾನುಭವಿಗಳಿಗೆ 107 ಕೋಟಿ ರೂ.ನೀಡಲಾಗಿದೆ.ಅದೇ ರೀತಿ ಹೂವು,ತರಕಾರಿ ಹಣ್ಣು ಬೆಳೆಗಾರರಿಗೆ ಹಣಕಾಸಿನ ನೆರವು ನೀಡಲಾಗಿದೆ.ಕೋವಿ ಡ್-19 ಬಿಕ್ಕಟ್ಟಿನ ಅವಧಿಯಲ್ಲಿ ರೈತರು,ಅಸಂಘಟಿತವಲಯದ ಕಾರ್ಮಿಕರು,ಆಟೋ ಚಾಲಕರು,63,59,000 ಫಲಾನುಭವಿಗಳಿಗೆ ರೂ.5372 ಕೋಟಿ ಮೌಲ್ಯದ ಹಣಕಾಸು ನೆರವನ್ನು ಒದಗಿಸಿದೆ.ಅಲ್ಲದೇ,ಕರ್ನಾಟಕದ ಎ ಲ್ಲಾ ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರಧಾನಮಂತ್ರಿ ಯವರ ಗರೀಬ್ ಕಲ್ಯಾಣ ಯೋಜನೆ ಪ್ರಯೋಜನವ ನ್ನು ನೀಡಲಾಗಿದೆ ಎಂದು ಅವರು ಹೇಳಿದರು.

WhatsApp Image 2021 01 26 at 11.28.57

ಇದಕ್ಕೂ ಮುನ್ನ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಆಗಮಿಸಿದ ರಾಜ್ಯಪಾಲರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದರು.ನಂತರ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸಿದರು. UNI

LEAVE A REPLY

Please enter your comment!
Please enter your name here