ಬೆಂಗಳೂರು:
ಲಾಕ್ ಡೌನ್ ತೆರವಿನ ಬಳಿಕ ಚಿತ್ರಮಂದಿರಗಳು ತೆರೆಯುಲು ಅನುಮತಿ ಸಿಕ್ಕರು, ಯಾವುದೇ ನೂತನ ಚಿತ್ರಗಳು ಬಿಡುಗಡಯಾಗಿರಲಿಲ್ಲ.
ನವೆಂಬರ್ 20ರಂದು ‘ಆಕ್ಟ್ 1978’ ಬಿಡುಗಡೆಯಾದ ಮೊದಲ ನೂತನ ಕನ್ನಡ ಚಿತ್ರವಾಗಿದ್ದು, ಈ ಚಿತ್ರದ ಬಿಡುಗಡೆ ನಂತರ ಒಂದರ ಹಿಂದೊಂದು ಕನ್ನಡ ಚಿತ್ರಗಳನ್ನು ತೆರೆಗೆ ತರಲು ನಿರ್ಮಾಪಕರು ಮುಂದಾಗುತ್ತಿದ್ದಾರೆ.
ಈ ಪೈಕಿ ‘R H 100’ ಚಿತ್ರ ಡಿಸೆಂಬರ್ 18ರಂದು ಬಿಡುಗಡೆಯಾಗಲಿದೆ.
ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ.
ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಕಿದೆ.
ಎಸ್ ಎಲ್ ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹರೀಶ್ ಕುಮಾರ್ ಎಲ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೋಮಶೇಖರ್ ಪಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮಹೇಶ್ ಎಂ ಸಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಜ್, ಸಿದ್ದು ಕೋಡಿಪುರ್ ಹಾಡುಗಳನ್ನು ಬರೆದಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ.
ಸಂಜಿತ್ ಹೆಗ್ಡೆ, ಅನುರಾಧ ಭಟ್, ಸಿದ್ದಾರ್ಥ್ ಬೆಲ್ ಮನು ಅವರ ಕಂಠಸಿರಿಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿದೆ.
ಕೃಷ್ಣ ಛಾಯಾಗ್ರಹಣ, ಸಿ.ರವಿಚಂದ್ರನ್ ಸಂಕಲನ ಹಾಗೂ ಕುಂಫ್ಫು ಚಂದ್ರು ಸಾಹಸ ನಿರ್ದೇಶನವಿದೆ. ಗಣೇಶ್, ಹರ್ಷ್, ಚಿತ್ರ, ಕಾವ್ಯ, ಸೋಮ್, ಸುಹಿತ್ ಮುಂತಾದವರು ತಾರಾಬಳಗದಲ್ಲಿದ್ದಾರೆ.