ರಾಮೋಜಿ ಫಿಲ್ಮ್ ಸಿಟಿ ನಿರ್ಮಿಸಿದ್ದ ರಾಮೋಜಿ ರಾವ್ ವಿಧಿವಶ
ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ (97) ನಿಧನ ಹೊಂದಿದ್ದಾರೆ.
ಹಲವು ವರ್ಷಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅವರ ನಿಧನ ವಾರ್ತೆ ಅನೇಕರಿಗೆ ದುಃಖ ತಂದಿದೆ. ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಬಾಹುಬಲಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ಆಗಿದೆ. 1996ರಲ್ಲಿ ಇದನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್ನಲ್ಲಿರುವ ಈ ಪ್ರದೇಶ 1,666 ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿ ಇದೆ. ಇದು ವಿಶ್ವ ದಾಖಲೆ ಪಟ್ಟಿಯಲ್ಲೂ ಇದೆ.
