Home ರಾಜಕೀಯ ಮತಾಂತರ ನಿ಼ಷೇಧ ಕಾಯಿದೆ ಜಾರಿಗೆ ಆರ್ ಎಸ್ ಎಸ್ ಬಿಗಿಪಟ್ಟು

ಮತಾಂತರ ನಿ಼ಷೇಧ ಕಾಯಿದೆ ಜಾರಿಗೆ ಆರ್ ಎಸ್ ಎಸ್ ಬಿಗಿಪಟ್ಟು

34
0

ಧಾರವಾಡ:

ದೇಶದಲ್ಲಿ ಮತಾಂತರ ನಿ಼ಷೇಧ ಕಾಯಿದೆಯನ್ನು ಯಾರೇ ವಿರೋಧಿಸಿದರೂ ಲೆಕ್ಕಿಸದೇ ಸರ್ಕಾರ ಅದನ್ನು ಗಟ್ಟಿಯಾಗಿ ಜಾರಿಗೊಳಿಸಬೇಕೆಂದು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಇಲ್ಲಿನ ರಾಷ್ಟ್ರೊತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ವ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್‌ ನ ಕೊನೆಯ ದಿನದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರೋಮ್‌ನಲ್ಲಿ ಪೋಪ್ ಅವರನ್ನು ಭೇಟಿ ಮಾಡಿದ್ದು ತಪ್ಪಲ್ಲ. ವಸದೈವಕಂ ಕುಟುಂಬಕಂ ಎನ್ನುವ ತತ್ವ ನಮ್ಮದಾಗಿದೆ ಎಂದರು.

ಸಮಾಜದ , ಎಲ್ಲಾ ಧರ್ಮದ ಜನರನ್ನು ಭೇಟಿಯಾಗುವುದರಲ್ಲಿ ಯಾವ ತಪ್ಪಿಲ್ಲ. ಪ್ರಧಾನಿ ಜಗತ್ತಿನ ಪ್ರಮುಖ ನಾಯಕರನ್ನು ಭೇಟಿ ಮಾಡಿ ದೇಶದ ಘನತೆ, ಗೌರವ ಹೆಚ್ಚಿಸಿದ್ದಾರೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬರುವ 2025ನೇ ಸಾಲಿಗೆ ಶತಮಾನೋತ್ಸವ ಆಚರಿಸಿಕೊಳ್ಳಲಿದ್ದು ದೇಶದ ಪ್ರತಿ ಮಂಡಲಕ್ಕೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಹೊಂದಿದೆ ಎಂದರು .

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಲ್ಲೆ ನಿಯಂತ್ರಿಸುವುದು, ಅಸ್ಪಶೃತೆ, ಸ್ವದೇಶಿ ಜಾಗೃತಿ, ಉದ್ಯೋಗ ಸೃಷ್ಠಿ, ಸ್ಥಳೀಯ ಉದ್ಯೋಗಕ್ಕೆ ಒತ್ತು, ಹೊಸ ಶಿಕ್ಷಣ ನೀರಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲು ಆರ್‌ಎಸ್‌ಎಸ್ ಯೋಜಿಸಿದೆ.ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಆರ್‌ಎಸ್‌ಎಸ್ ಸಹ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here