Home ಗದಗ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ

116
0

ಗದಗ:

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ 2018-19 ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸ್ನಾತಕೋತ್ತರ 5 ಕೋರ್ಸುಗಳಿಗೆ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ನೀಡಲಾಯಿತು. ದ್ವಿತೀಯ ಹಾಗೂ ತೃತೀಯ ರ‍್ಯಾಂಕ್ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿವರ ಇಂತಿದೆ; ಐದು ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ , ದ್ವಿತೀಯ ಹಾಗೂ ತೃತೀಯ ರ‍್ಯಾಂಕ್ ವಿಜೇತರ ವಿವರ ಕ್ರಮವಾಗಿ ಈ ಕೆಳಗಿನಂತಿದೆ.

ಎಂಬಿಎ ಕೋರ್ಸನಲ್ಲಿ ಸುಧೀಶ ರಾವ್ -ಪ್ರಥಮ, ಪೂರ್ಣಿಮಾ- ದ್ವಿತೀಯ, ವಿರುಪಾಕ್ಷಯ್ಯ ಕುಲಕರ್ಣಿ- ತೃತೀಯ ಸ್ಥಾನ ಪಡೆದಿರುತ್ತಾರೆ. ಎಂಎ ( ಆರ್.ಡಿ.ಪಿ.ಆರ್) ನಾಗರಾಜ ಎಸ್, ಸಿದ್ದೇಶ ಎಸ್, ಫಾತಿಮಾ ನರಗುಂದ. ಎಂ.ಎಸ್‌ಸಿ( ಜಿ.ಐ.ಎಸ್.) , ಬಸಂತಿ ಶರಣಬಸಪ್ಪ ಪಾಟೀಲ , ಸುಮಲತಾ ಯಲಬಾನವಿ- ದೀಪಾ ಹಂಚಿನಾಳ , ಎಂ.ಎಸ್. ಡಬ್ಲು ಕೋರ್ಸನಲ್ಲಿ ಪ್ರತಿಭಾ ಸಾಸ್ವಿಹಾಳಿ, ಸುಮಾ ಪೂಜಾರ, ಶಿವಯೋಗಪ್ಪ ರಿತ್ತಿ : ಎಂ.ಕಾಮ ಕೋರ್ಸನಲ್ಲಿ ಪರಮೇಶ್ವರ , ಮಂಜು ನಾಥ ಜಿ , ಅಶ್ವಿನಿ ಓದುಗೌಡ್ರ, .

2019-20 ನೇ ಸಾಲಿನ ರ‍್ಯಾಂಕ್ ವಿಜೇತರ ವಿವರ: ಎಂ.ಬಿ.ಎ ಕೋರ್ಸನಲ್ಲಿ ಗಿರೀಶ ಮೇವುಂಡಿ, ಭಾಗ್ಯಶ್ರೀ ಪಾಟೀಲ, ಓಂಕಾರ ರೆಡ್ಡಿ ಕುರಹಟ್ಟಿ , ಎಂ.ಎ. (ಆರ್.ಡಿ.ಪಿ.ಆರ್.) ಕೋರ್ಸನಲ್ಲಿ ಸೀಮಾ ಕೌಸರ್ ಕುಕನೂರ, ಹಂಸವತಿ ಡಿ, ಶ್ರೀಶೈಲ ಪೊಲೀಶಿ; ಎಂ.ಎಸ್.ಸಿ ( ಜಿ.ಐ.ಎಸ್.) ಕೋರ್ಸನಲ್ಲಿ ಶಿವಕುಮಾರ ರಕ್ಕಸಗಿ, ಅರ್ಚನಾ ಹಾನಗಲ್ , ಡಿ ಪ್ರತಿಭಾ; ಎಂ.ಎಸ್.ಸಿ. ( ಎಫ್.ಎಸ್.ಟಿ) ಕೋರ್ಸನಲ್ಲಿ ಮನುಶಾ ಸಿ, ಗುತ್ತವಾಣಿ ಪ್ರಸನ್ನ , ಶ್ರೇಯಸ್ ಗೌಡ ಬಿ.ಎಚ್; ಎಂ.ಪಿ.ಎಚ್ ಕೋರ್ಸನಲ್ಲಿ ಡಾ. ಮಹಿಮಾ ಬೆಳವಡಿ, ಕಲ್ಲನಗೌಡ ಪಾಟೀಲ, ಡಾ. ಪ್ರೀತಿ ಪಟ್ಟಣಶೆಟ್ಟಿ; ಎಂ.ಎಸ್. ಡಬ್ಲುö್ಯ ಕೋರ್ಸನಲ್ಲಿ ನಿಶಾ, ನಾಗರತ್ನ ಮುನೆನ್ನವರ, ದೇವರಾಜ ದೊಡ್ಡಮನಿ, ಎಂ.ಕಾಮ ಕೋರ್ಸನಲ್ಲಿ ಐಶ್ವರ್ಯ ಶ್ರೀಶೈಲ ಜೋಳದ, ಸುಜಾತಾ ಗೊರವನಕೊಳ್ಳ, ಸೋನಿಯಾ ದತ್ತುಸಾ ಬಾಕಳೆ.

2018-19 ರ ಸಾಲಿನ 5 ಸ್ನಾತಕೋತ್ತ ರ ಕೋರ್ಸುಗಳ ಪೈಕಿ ಬಸಂತಿ ಶರಣಬಸಪ್ಪ ಪಾಟೀಲ ಅವರು ( ಎಂ.ಎಸ್ ಸಿ ( ಜಿ.ಐ.ಎಸ್) 85.6% ) ಅತಿ ಹಚ್ಚು ಅಂಕ ಪಡೆದಿದ್ದಾರೆ. ಅದೇ ರೀತಿ 2019-20 ನೇ ಸಾಲಿನ 7 ಸ್ನಾತಕೋತ್ತ ರ ಕೋರ್ಸುಗಳಲ್ಲಿ ಮನುಶಾ ಸಿ ಅವರು (ಎಂ.ಎಸ್.ಸಿ) ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ) 90.1 % ಅತಿ ಹೆಚ್ಚು ಅಂಕ ಪಡೆಯುವ ಮೂಲಕ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದು ಅವರಿಗೆ ಸಹ ಕುಲಾಧಿಪತಿ ಕೆ.ಎಸ್. ಈಶ್ವರಪ್ಪ ಅವರು ಸ್ವರ್ಣ ಪದಕ ನೀಡುವ ಮೂಲಕ ಪ್ರಶಸ್ತಿ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ವಿ಼ಷ್ಣುಕಾಂತ ಚಟಪಲ್ಲಿ ಸೇರಿದಂತೆ ಗಣ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here