Home ಕರ್ನಾಟಕ ಸಿಎಂ ಬದಲಾವಣೆ ವಿಚಾರಕ್ಕೆ ನೀವು ಸಿಎಂ ಅವರನ್ನ ಕೇಳಬೇಕು ಎಂದ ಸತೀಶ್ ಜಾರಕಿಹೊಳಿ

ಸಿಎಂ ಬದಲಾವಣೆ ವಿಚಾರಕ್ಕೆ ನೀವು ಸಿಎಂ ಅವರನ್ನ ಕೇಳಬೇಕು ಎಂದ ಸತೀಶ್ ಜಾರಕಿಹೊಳಿ

14
0

ಕೋಲಾರ: ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಬದಲಾವಣೆ ಕೂಗು ಕೇಳಿ ಬಂದಿದ್ದು, ಈ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ನಾನು ಅದಕ್ಕೆ ಸಮರ್ಥನಾ, ಕಾಂಪಿಟೇಟ್ ಅಥಾರ್ಟಿನಾ, ನನ್ನ ಯಾಕೆ ಇದನ್ನ ಕೇಳಿದ್ರಿ. ನೀವು ಸಿಎಂ ಅವರನ್ನ ಕೇಳಬೇಕು, ನನ್ನ ಕೇಳಿದ್ರೆ ನಾನು ಏನು ಹೇಳಲಿ ಎಂದರು.

ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಈಗಾಗಲೇ ಎಸ್.ಐ.ಟಿ, ಸಿಬಿಐ, ಈಡಿ ತನಿಖೆ ಮಾಡ್ತಿದೆ. ಅವರೇನು ನ್ಯಾಯಾಲಯಕ್ಕೆ ಒದಗಿಸ್ತಾರೋ ಅದು ಅಂತಿಮ. ಎಲ್ಲಾ ಜವಾಬ್ದಾರಿ ಸಿಎಂ ಆಗೋದಿಲ್ಲ. ಅವರು ದುಡ್ಡು ಕೊಡೊದು ಇಲಾಖೆಗೆ. ನಮ್ಮಿಂದ ಬೇರೆ ಕಡೆ ಹೋದಾಗ ಆ ಇಲಾಖೆ ಸಚಿವರು ಜವಾಬ್ದಾರರು ಎಂದರು.

LEAVE A REPLY

Please enter your comment!
Please enter your name here