Home Uncategorized #savesankey: ‘ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ಬೇಡ': ಕಪ್ಪು ಬಟ್ಟೆ ಧರಿಸಿ ನಿವಾಸಿಗಳ ಪ್ರತಿಭಟನೆ

#savesankey: ‘ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ಬೇಡ': ಕಪ್ಪು ಬಟ್ಟೆ ಧರಿಸಿ ನಿವಾಸಿಗಳ ಪ್ರತಿಭಟನೆ

17
0
Advertisement
bengaluru

ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ವಿಚಾರ ಸ್ಥಳೀಯರ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಕೆರೆಯ ಸುತ್ತಲಿನ ಮಲ್ಲೇಶ್ವರ, ವೈಯಾಲಿಕಾವಲ್‌, ಸದಾಶಿವನಗರದ ನಿವಾಸಿಗಳು ಸೋಮವಾರ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ವಿಚಾರ ಸ್ಥಳೀಯರ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಕೆರೆಯ ಸುತ್ತಲಿನ ಮಲ್ಲೇಶ್ವರ, ವೈಯಾಲಿಕಾವಲ್‌, ಸದಾಶಿವನಗರದ ನಿವಾಸಿಗಳು ಸೋಮವಾರ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

ಸ್ಯಾಂಕಿ ಮೇಲ್ಸೇತುವೆ ಹಾಗೂ ರಸ್ತೆ ವಿಸ್ತರಣೆ ಯೋಜನೆಯನ್ನು ಸ್ಥಗಿತಗೊಳಿಸಿ, ‘ಸ್ಯಾಂಕಿ ಉಳಿಸಿ’ ಎಂದು ಮಲ್ಲೇಶ್ವರ, ವೈಯಾಲಿಕಾವಲ್‌, ಸದಾಶಿವನಗರದ ನಿವಾಸಿಗಳು ಭಾನುವಾರ ಕಪ್ಪು ಬಟ್ಟೆಯನ್ನು ಧರಿಸಿ ‘ನಾಗರಿಕರ ಒಗ್ಗಟ್ಟು ನಡಿಗೆ’ ಮೂಲಕ ಪ್ರತಿಭಟಿಸಿದರು. ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ಬೇಡ ಎಂದು ಸ್ಥಳೀಯ ನಿವಾಸಿಗಳು ಹಲವು ವಾರಗಳಿಂದ ಆಗ್ರಹಪಡಿಸುತ್ತಿದ್ದಾರೆ. ಮುಂದುವರಿದ ಭಾಗವಾಗಿ ಭಾನುವಾರ ಸ್ಯಾಂಕಿ ಕೆರೆಯ ಸುತ್ತಲಿನ ರಸ್ತೆಯಲ್ಲಿ ‘ಸ್ಯಾಂಕಿ ಕೆರೆ ತಂಡ’ದ ಸದಸ್ಯರು ಕಪ್ಪು ಬಟ್ಟೆ ಧರಿಸಿ ನಡೆದರು. ಸ್ಯಾಂಕಿ ಕೆರೆಯ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸೇವ್ ಸ್ಯಾಂಕ್ ಹ್ಯಾಶ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ವಿರೋಧ ವ್ಯಕ್ತಪಡಿಸಿದರು.

Let’s save the centennial trees on Sankey Road! #savesankey pic.twitter.com/ayAB7d0p6l
— Vasundhara Das (@Thevasundhara) February 19, 2023

‘ಪಾರಂಪರಿಕ ಮರಗಳನ್ನು ಮೇಲ್ಸೇತುವೆಗಾಗಿ ಕಡಿಯಲಾಗುತ್ತಿದೆ. ಹಸಿರುಮಯವಾಗಿರುವ ಈ ಪ್ರದೇಶ ಇದರಿಂದ ಬರಿದಾಗುತ್ತದೆ. ಫ್ಲೈಓವರ್ ಟ್ರಾಫಿಕ್ ತೊಂದರೆಗಳನ್ನು ಪರಿಹರಿಸುವುದಿಲ್ಲ ಮತ್ತು ಸ್ಯಾಂಕಿ ಕೆರೆಯ ಉದ್ದಕ್ಕೂ ಇರುವ ಮರಗಳ ಸರಣಿಯನ್ನು ಮಾತ್ರ ನಾಶಪಡಿಸುತ್ತದೆ ಎಂದು ಮಲ್ಲೇಶ್ವರದ ನಿವಾಸಿ ಗಾಯಕಿ -ನಟಿ ವಸುಂದರ ದಾಸ್‌ ಆತಂಕ ವ್ಯಕ್ತಪಡಿಸಿದರು. ನಗರವು ತನ್ನ ಹಸಿರು ಹೊದಿಕೆಯನ್ನು ತೀವ್ರವಾಗಿ ಕಳೆದುಕೊಂಡಿರುವುದರ ಕುರಿತು ಒತ್ತಿ ಹೇಳಿದ ಅವರು, ‘ಮೇಲ್ಸೇತುವೆ ನಿರ್ಮಾಣಕ್ಕಾಗಿ ಅನೇಕ ಮರಗಳಿಗೆ ಕೊಡಲಿಯೇಟು ಹಾಕಬೇಕಾಗಿದೆ ಮತ್ತು ನಿವಾಸಿಗಳು ಈ ಕ್ರಮಕ್ಕೆ ವಿರುದ್ಧವಾಗಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರ ನಿರ್ಧಾರ ತೆಗೆದುಕೊಳ್ಳುವವರು ಸಾರ್ವಜನಿಕ ಸಮಾಲೋಚನೆಗಳ ಸರಣಿಯನ್ನು ನಡೆಸಲು ಮತ್ತು ಜನರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಪರಿಸರಕ್ಕೆ ಹಾನಿಯಾಗದ ಮೇಲ್ಸೇತುವೆಗೆ ಪರ್ಯಾಯ ಪರಿಹಾರಗಳನ್ನು ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

bengaluru bengaluru

Walk to #Save_Sankey
The trees of Bengaluru are our heritage. Sankey Tank has seen walkers like you since 1882. Come join us, in solidarity. Let’s walk for a better Bengaluru…@CMofKarnataka @LavanyaBallal @Bkrs_Rakshith pic.twitter.com/WFk9UZE04c
— Vijay Nishant (@vijayvruksha) February 19, 2023

ಸದಾಶಿವನಗರದ ಮತ್ತೋರ್ವ ನಿವಾಸಿ ಮಧುಸೂಧನ್‌ ಅವರು ಮಾತನಾಡಿ ‘ಸ್ಯಾಂಕಿ ಕೆರೆ ನಮಗೆ ಪ್ರಾಕೃತಿಕ ತಾಣ. ಇದರಿಂದ ನಮಗೆ ಆರೋಗ್ಯಕರ ವಾತಾವರಣವಿದೆ. ಇದನ್ನು ರಕ್ಷಿಸಲು ನಾವೆಲ್ಲ ಹೋರಾಟ ಮಾಡುತ್ತಿದ್ದೇವೆ’ ಎಂದು ಹೇಳಿದರು. ಸದಾಶಿವನಗರದ ಶ್ವೇತಾ ಮಾತನಾಡಿ, ‘ಸರ್ಕಾರ ವಾಹನ ದಟ್ಟಣೆಗೆ ಸಂಬಂಧಿಸಿದಂತೆ ಅಲ್ಪಕಾಲದ ಪರಿಹಾರಗಳತ್ತ ಮಾತ್ರ ನೋಡಬಾರದು. ಮಲ್ಲೇಶ್ವರ 18ನೇ ಅಡ್ಡರಸ್ತೆಯಿಂದ ಬಾಷ್ಯಂ ವೃತ್ತದವರೆಗಿನ ಮೇಲ್ಸೇತುವೆಯಿಂದ ಯಾವ ದಟ್ಟಣೆಯೂ ಕಡಿಮೆಯಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

#SaveSankey concerned residents send a message loud and clear – SAVE SANKEY – we are the worst affected by traffic but DON’T WANT poor ideas which are made worse by chopping of trees & endangering the lake. LISTEN to #citizenvoices @BSBommai @drashwathcn pic.twitter.com/lWvf3HoZHG
— Suki Iyer (@sukiyer18) February 19, 2023

‘ಸ್ಯಾಂಕಿ ರಸ್ತೆ ವಿಸ್ತರಣೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಗರಿಕರ ಸಭೆಯನ್ನು ನಡೆಸಬೇಕು ಎಂದು ಬಿಬಿಎಂಪಿಯವರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇವೆ. ಇದೀಗ, ಬಿಎಂಎಲ್‌ಟಿಎ ಯೋಜನೆಯನ್ನು ಪರಿಶೀಲಿಸುತ್ತಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ ಈ ಮೊದಲೇ ಬಿಬಿಎಂಪಿಯ ಅರಣ್ಯ ಇಲಾಖೆ ಮರಗಳನ್ನು ಕಡಿಯಲು ಅನುಮತಿ ನೀಡಿದೆ. ಇದರ ಅರ್ಥ ಯೋಜನೆ ಅನುಷ್ಠಾನವಾಗುತ್ತದೆ ಎಂದಲ್ಲವೇ’ ಎಂದು ಸಿಟಿಜನ್ಸ್‌ ಫಾರ್‌ ಸ್ಯಾಂಕಿಯ ಕಿಂಸುಕಾ ಪ್ರಶ್ನಿಸಿದರು.
 


bengaluru

LEAVE A REPLY

Please enter your comment!
Please enter your name here