Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ರಾಜಕೀಯ
  • Congress won two constituencies in Kodagu district: Chief Minister Siddaramaiah congratulated people of entire Kodagu district on behalf of government| ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
  • ರಾಜಕೀಯ
  • ಕೊಡಗು

Congress won two constituencies in Kodagu district: Chief Minister Siddaramaiah congratulated people of entire Kodagu district on behalf of government| ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

The Bengaluru Live January 25, 2024 5:20 PM 1 minute read
Congress won two constituencies in Kodagu district: Chief Minister Siddaramaiah congratulated people of entire Kodagu district on behalf of government

Congress won two constituencies in Kodagu district: Chief Minister Siddaramaiah congratulated people of entire Kodagu district on behalf of government| ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು: ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ದೇಶದಲ್ಲಿ BJP ಯವರು ಒಂದೇ ಒಂದು ಅಣೆಕಟ್ಟು ಕಟ್ಟಿದ-ನೀರಾವರಿಗೆ ನೆರವು ಮಾಡಿದ ಉದಾಹರಣೆ ಇದ್ದರೆ ನಾನು ಅವರ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ: ಸಿ.ಎಂ.ಸಿದ್ದರಾಮಯ್ಯ ನೇರ ಸವಾಲು

ಮಿಸ್ಟರ್ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಿಲಿಲ್ಲ ಏಕೆ: ಸಿ.ಎಂ.ಪ್ರಶ್ನೆ

ಕೊಡಗು (ವಿರಾಜಪೇಟೆ):

ಬಿಜೆಪಿ ಭಾರತದಲ್ಲಿ, ಯಾವುದಾದರೂ ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ಕಟ್ಟಿಸಿ ರೈತರಿಗೆ, ಕೃಷಿಗೆ ನೆರವಾದ ಒಂದೇ ಒಂದು ಉದಾಹರಣೆ ಇದ್ದರೆ ನಾನು ಬಿಜೆಪಿ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರ ಸವಾಲು ಹಾಕಿದರು.

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತದೆ. ಇಡೀ ದೇಶದಲ್ಲಿರುವ ಅಣೆಕಟ್ಟುಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ನೆಪಕ್ಕಾದರೂ ಒಂದೂ ಅಣೆಕಟ್ಟು ಕಟ್ಟಿಸಲಿಲ್ಲ. ಕಟ್ಟಿಸಿದ ಉದಾಹರಣೆ ಇದ್ದರೆ ಹೇಳಿ ಎಂದು ಸವಾಲು ಹಾಕಿದರು.

1925 ರಲ್ಲೇ RSS ಹುಟ್ಟಿದರೂ ಅಪ್ಪಿ ತಪ್ಪಿಯೂ ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ.‌ ಭಾರತೀಯರನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಿದ್ದು , ಇದಕ್ಕಾಗಿ ಹೋರಟ ಮಾಡಿ ಪ್ರಾಣ ತ್ಯಾಗ ಮಾಡಿದ, ಜೈಲು ಸೇರಿದ ಇತಿಹಾಸ, ಚರಿತ್ರೆ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಈಗ ಭಾರತದ ಜೀವಾಳವಾದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಹೋರಾಟ ಆರಂಭಿಸಿದೆ ಎಂದರು.

ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿಯ ಸಂಸದ ಅನಂತಕುಮಾರ ಹೆಗ್ಡೆ ನೇರವಾಗಿ ಹೇಳುತ್ತಾರೆ. ಇದನ್ನು ಬಿಜೆಪಿಯ ಯಾರೊಬ್ಬರೂ ವಿರೋಧಿಸಲಿಲ್ಲ. ಇದರಿಂದ ಅವರ ಸಂವಿಧಾನ ವಿರೋಧಿ ನಿಲುವು ಸ್ಪಷ್ಟವಾಗುತ್ತದೆ ಎಂದರು.

ಅಚ್ಛೆ ದಿನ್ ಆಯೇಗಾ ಎಂದ ನರೇಂದ್ರ ಮೋದಿಯವರೇ ಎಲ್ಲಿದೆ ನಿಮ್ಮ ಅಚ್ಛೆ ದಿನ್ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಪೆಟ್ರೋಲ್, ಡೀಸೆಲ್ , ಅಡುಗೆ ಗ್ಯಾಸ್ ಬೆಲೆ ಇಳಿಕೆ ಮಾಡಿದಿರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭಾಷಣ ಮಾಡಿದ ಮೋದಿಯವರೇ ಈ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎಲ್ಲಿವೆ 20 ಕೋಟಿ ಉದ್ಯೋಗ ತೋರಿಸಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಬರಗಾಲ ಬಂದಿದೆ. ಬಿಜೆಪಿ ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಒಂದು ರುಪಾಯಿ ಬರ ಪರಿಹಾರವನ್ನೂ ತರಲಿಲ್ಲ. ರೈಲು ಬಿಡುವುದರಲ್ಲಿ ಮಾತ್ರ ಪ್ರತಾಪ ತೋರಿಸುವ ಮಿಸ್ಟರ್ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಸಿಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ನಾವು 2013 ರಿಂದ 2018 ರವರೆಗೂ ನುಡಿದಂತೆ ನಡೆದಿದ್ದೇವೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ಭಾಗ್ಯಗಳನ್ನು ಜಾರಿಗೆ ತಂದಿದ್ದೇವೆ. ಈಗ ಸರ್ಕಾರ ಬಂದ 7 ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೆ ತಂದಿದ್ದೇವೆ. ಇದರಿಂದ ಕರ್ನಾಟಕದ ಬಡವರು ಮತ್ತು ಮಧ್ಯಮ ವರ್ಗದ ಜನರ ಸಂಕಷ್ಟ ಕಡಿಮೆ ಆಗಿದೆ ಎಂದ ಮುಖ್ಯಮಂತ್ರಿಗಳು ಹೌದೋ, ಇಲ್ಲವೋ ಎಂದು ಜನಸ್ತೋಮಕ್ಕೆ ಕೇಳಿದರು. ಜನಸ್ತೋಮ ಹೌದು ಎಂದು ಕೂಗಿ ಚಪ್ಪಾಳೆ ತಟ್ಟಿದರು.

ಕಾಂಗ್ರೆಸ್ ವಿರುದ್ದ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಕ್ಕೆ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಹಾಗೂ ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು.

ಶಾಸಕರಾದ ಪೊನ್ನಣ್ಣ ಮತ್ತು ಮಂಥರಗೌಡ ಅವರ ಅಭಿವೃದ್ಧಿ ಪರ ಕಾಳಜಿ ಮತ್ತು ಎಲ್ಲಾ ಜಾತಿ-ಧರ್ಮದವರನ್ನು , ಎಲ್ಲಾ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ ವಿಶಾಲ ಮನೋಭಾವಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವರನ್ನು ಆರಿಸಿದ್ದಕ್ಕೆ ಕೊಡಗಿನ ಜನತೆಗೂ ಅಭಿನಂದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಗೃಹ ಸಚಿವರಾದ ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಡಿಕೇರಿ ಶಾಸಕರಾದ ಮಂಥರ್ ಗೌಡ, ಕೆಪಿಸಿಸಿ ಸಾಮಾಜಿಕ ಸಂವಹನ ವಿಭಾಗದ ಅಧ್ಯಕ್ಷರಾದ ಮೆಹರೂಸ್ ಖಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: Shettar had said he would not join BJP, Don’t know why he joined, it is a matter of his conscience: Karnataka Dy CM Shivakumar| ಬಿಜೆಪಿಗೆ ಹೋಗಲ್ಲ ಅಂದಿದ್ದ ಶೆಟ್ಟರ್ ಅವರು ಯಾಕೆ ಹೋಗಿದ್ದಾರೋ ಗೊತ್ತಿಲ್ಲ, ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ: ಡಿಸಿಎಂ ಡಿ.ಕೆ. ಶಿವಕುಮಾರ್
Next: Yathindra will not contest Lok Sabha elections from Kodagu: Chief Minister Siddaramaiah| ಲೋಕಸಭಾ ಚುನಾವಣೆಯಲ್ಲಿ ಕೊಡಗಿನಿಂದ ಯತೀಂದ್ರ ಸ್ಪರ್ಧಿಸುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Related Stories

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಳಿತಿರುವ ಶಾಸಕರು
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

The Bengaluru Live November 24, 2026 8:23 PM
ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ
  • ರಾಜಕೀಯ

ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ ದಿನವೇ ಸಿಎಂ ಕ್ಲೀನ್ ಚಿಟ್ ಕೊಟ್ಟರು, ಇನ್ನು ತನಿಖೆ ಯಾವ ಪುರುಷಾರ್ಥಕ್ಕೆ?: ಹಾಸನ ಸೈಬರ್ ಪೊಲೀಸ್ ನೋಟಿಸ್ ಬಗ್ಗೆ ಕುಮಾರಸ್ವಾಮಿ ಪ್ರಶ್ನೆ

The Bengaluru Live November 24, 2026 7:39 PM
ಜಪಾನ್ ಪ್ರವಾಸದ ವೇಳೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಜಪಾನ್‌ನಿಂದಲೇ ವಿಡಿಯೋ ಕರೆ: ಪ್ರತಿಭಟನೆ ಕೈಬಿಡಿ, ಅಧಿವೇಶನದವರೆಗೆ ಸಮಯ ಕೊಡಿ ಎಂದು ಆಶಾ ಕಾರ್ಯಕರ್ತೆಯರಿಗೆ ಸಿಎಂ ಶಿವಕುಮಾರ್ ಮನವಿ

The Bengaluru Live November 24, 2026 1:19 PM

Latest Post

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

November 24, 2026 10:00 PM
ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

November 24, 2026 9:49 PM
ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್ ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

November 24, 2026 9:28 PM
ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ ಜಪಾನ್ ಪ್ರವಾಸದ ವೇಳೆ ರೈಲಿನಲ್ಲಿ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ

November 24, 2026 9:09 PM
ಆರ್‌ಎಂವಿ 2ನೇ ಹಂತದಲ್ಲಿ ವಸತಿ ಕಟ್ಟಡಗಳಲ್ಲಿ ನಡೆಯುತ್ತಿದ್ದ 15 ವಾಣಿಜ್ಯ ಸಂಸ್ಥೆಗಳಿಗೆ ಉತ್ತರ ನಗರ ಪಾಲಿಕೆಯಿಂದ ಸೀಲ್ ಆರ್‌ಎಂವಿ 2ನೇ ಹಂತದಲ್ಲಿ ಸೀಲ್ ಮಾಡಿದ ವಾಣಿಜ್ಯ ಸಂಸ್ಥೆಯ ಗೇಟ್ ಮೇಲೆ ಜಾರಿ ನೋಟಿಸ್
  • ಬೆಂಗಳೂರು ನಗರ

ಆರ್‌ಎಂವಿ 2ನೇ ಹಂತದಲ್ಲಿ ವಸತಿ ಕಟ್ಟಡಗಳಲ್ಲಿ ನಡೆಯುತ್ತಿದ್ದ 15 ವಾಣಿಜ್ಯ ಸಂಸ್ಥೆಗಳಿಗೆ ಉತ್ತರ ನಗರ ಪಾಲಿಕೆಯಿಂದ ಸೀಲ್

November 24, 2026 9:08 PM
11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕುಳಿತಿರುವ ಶಾಸಕರು
  • ಕರ್ನಾಟಕ
  • ರಾಜಕೀಯ

11 ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ, ಮಂಡಳಿ, ಆಯೋಗಗಳ ಅಧ್ಯಕ್ಷ ಸ್ಥಾನ: ಸರ್ಕಾರ ಅಧಿಸೂಚನೆ

November 24, 2026 8:23 PM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಲ್ಲಿ ನೀರು ನಿಂತ ರಸ್ತೆ ಮತ್ತು ನಿಧಾನವಾಗಿ ಸಾಗುತ್ತಿರುವ ವಾಹನಗಳು
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ

The Bengaluru Live November 24, 2026 10:00 PM
ಜಿಬಿಎ ಕೇಂದ್ರ ಕಚೇರಿಯಲ್ಲಿ ಓಎಫ್‌ಸಿ ಕೇಬಲ್ ಕುರಿತ ಸಭೆಯಲ್ಲಿ ಮಾತನಾಡುತ್ತಿರುವ ಸಚಿವ ಕೃಷ್ಣ ಬೈರೇಗೌಡ
  • ಬೆಂಗಳೂರು ನಗರ

ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ

The Bengaluru Live November 24, 2026 9:49 PM
ಅಜಿನೊಮೊಟೊ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್
  • ಕರ್ನಾಟಕ

ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್

The Bengaluru Live November 24, 2026 9:28 PM
ಜಪಾನ್ ಪ್ರವಾಸದ ವೇಳೆ ರೈಲಿನಲ್ಲಿ ಕುಳಿತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ

The Bengaluru Live November 24, 2026 9:09 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರಿನಲ್ಲಿ ನವೆಂಬರ್ 24ರ ಮಳೆ: ಡೊಮ್ಲೂರು, ಜೀವನಭೀಮಾ ನಗರದಲ್ಲಿ ಅತ್ಯಧಿಕ 24 ಮಿ.ಮೀ; ಜಿಬಿಎ ಐಸಿಸಿಸಿ ವರದಿ
  • ಬೆಂಗಳೂರಿನಲ್ಲಿ ಅಕ್ರಮ ಓಎಫ್‌ಸಿ ಕೇಬಲ್ ತೆರವಿಗೆ ಕೃಷ್ಣ ಬೈರೇಗೌಡ ಸೂಚನೆ; ಇರುವ ಕೇಬಲ್ ಸಕ್ರಮಕ್ಕೆ ಒಂದು ಬಾರಿ ಅವಕಾಶ ಪರಿಗಣನೆ
  • ಕರ್ನಾಟಕದ ಬಯೋಫಾರ್ಮಾ ವಲಯದಲ್ಲಿ ಹೂಡಿಕೆಗೆ ಅಜಿನೊಮೊಟೊ ಆಸಕ್ತಿ: ಎಂ ಬಿ ಪಾಟೀಲ್
  • ಕರ್ನಾಟಕದಲ್ಲೂ ಜಪಾನ್ ಮಾದರಿಯ ರೈಲ್ವೆ ನಿಲ್ದಾಣ ನಿರ್ಮಿಸುವ ಆಸೆ: ಜಪಾನ್ ರೈಲುಗಳ ಸ್ವಚ್ಛತೆ, ವೇಗ, ಸಮಯಪಾಲನೆಗೆ ಸಿಎಂ ಶಿವಕುಮಾರ್ ಮೆಚ್ಚುಗೆ
©Copyright 2025 The Bengaluru Live All rights reserved. | MoreNews by AF themes.