Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಶಿರೂರು ಭೂಕುಸಿತ: ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಮಿಲಿಟರಿ ಹಾಗೂ ನೌಕಾಪಡೆ
  • ಉತ್ತರ ಕನ್ನಡ
  • ಕರ್ನಾಟಕ

ಶಿರೂರು ಭೂಕುಸಿತ: ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಮಿಲಿಟರಿ ಹಾಗೂ ನೌಕಾಪಡೆ

The Bengaluru Live July 21, 2024 6:30 PM
ಶಿರೂರು ಭೂಕುಸಿತ: ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಮಿಲಿಟರಿ ಹಾಗೂ ನೌಕಾಪಡೆ

ಶಿರೂರು ಭೂಕುಸಿತ: ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಮಿಲಿಟರಿ ಹಾಗೂ ನೌಕಾಪಡೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಶಿರೂರು/ಕಾರವಾರ, ಜುಲೈ 21: ಶಿರೂರು ಭೂಕುಸಿತದ ಮಣ್ಣು ತೆರವು ಮತ್ತು ಶೋಧ ಕಾರ್ಯಾಚರಣೆಗೆ ಎಸ್.ಡಿ.ಆರ್. ಎಫ್ ನಿಂದ 46 ಜನ ಎನ್.ಡಿ.ಆರ್.ಎಫ್ ನಿಂದ 24 ಜನ ಹಾಗೂ 44 ಜನ ಮಿಲಿಟರಿಯವರು ಹಾಗೂ ನೌಕಾಪಡೆ ಯವರೂ ಕೂಡ ಕೈಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಶಿರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಗೋವಾ ಮತ್ತು ಅಂಕೋಲಾ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜುಲೈ 16 ರಂದು ಭೂ ಕುಸಿತವಾಗಿದೆ. ಭೂ ಕುಸಿತದಿಂದ 10 ಜನ ಕಾಣೆಯಾಗಿದ್ದಾರೆ. ಅದರಲ್ಲಿ ಏಳು ಜನರ ಹೆಣಗಳು ಪತ್ತೆಯಾಗಿದ್ದು ಇನ್ನೂ ಮೂವರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಪರಿಹಾರ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ವಿವರಿಸಿದರು.

ಘಟನೆಯಲ್ಲಿ ಖಾಲಿ ಗ್ಯಾಸ್ ಟ್ಯಾಂಕರ್ ಹಾಗೂ ಭರ್ತಿಯಾಗಿರುವ ಗ್ಯಾಸ್ ಟ್ಯಾಂಕರ್ ಕೂಡ ಸಿಕ್ಕಿಹಾಕಿಕೊಂಡಿದ್ದು, ಅಲ್ಲಿಯೇ ವಾಸವಾಗಿರುವ ಒಂದೇ ಕುಟುಂಬದವರು ಟೀ ಅಂಗಡಿಯನ್ನು ಇಟ್ಟುಕೊಂಡಿದ್ದರು. ಅವರಲ್ಲಿ ಐವರು ಭೂ ಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ರಿಸ್ಕ್ ಆಪರೇಶನ ನ್ನು ತ್ವರಿತವಾಗಿ ಮಾಡಬೇಕೆಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದರು.

ನೌಕಾದಳ ಹಾಗೂ ರಕ್ಷಣಾ ತಂಡದವರಿಗೆ ಎಲ್ಲೆಡೆ ಹುಡುಕುವಂತೆ ಸೂಚನೆ ನೀಡಲಾಗಿದೆ ಎಂದರು. 10 ಜನರು ಕಾಣೆಯಾಗಿದ್ದಾರೆ. ಘಟನೆ ನಡೆದ ದಿನವೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರನ್ನೂ ಹಾಗೂ ಶಾಸಕರನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದರು.

ಅವೈಜ್ಞಾನಿಕ ಕಾಮಗಾರಿ: ತಪ್ಪಿತಸ್ಥರ ವಿರುದ್ಧ ಕ್ರಮ ಭೂ ಕುಸಿತವು ಪ್ರಕೃತಿ ವಿಕೋಪವಲ್ಲ ಐ.ಆರ್.ಬಿ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಗಿದೆ. ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಯಾರೇ ತಪ್ಪು ಮಾಡಿದರೂ ಕೂಡ ಅವರ ಮೇಲೆ ಕ್ರಮ ವಹಿಸಲಾಗುವುದು, ರಸ್ತೆ ನಿರ್ಮಾಣ ಮಾಡಿರುವವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು. ಪರಿಹಾರ ಕಾಮಗಾರಿ ಮುಗಿದ ಮೇಲೆ ಪ್ರಕರಣದ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಾಯ ಕೇಂದ್ರ ಸರ್ಕಾರ ರಸ್ತೆ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಕೇಂದ್ರ ರಸ್ತೆ ಸಾರಿಗೆ ಸಚಿವರೊಂದಿಗೆ ನಾನು ಮಾತನಾಡುತ್ತೇನೆ. ಕಳಪೆ ಕೆಲಸ ವಾಗಿದ್ದಾರೆ ಅದನ್ನು ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಲಾಗುವುದು ಎಂದರು.

ರಾಜ್ಯ ಸರ್ಕಾರ ವಿಳಂಬ ಮಾಡಿಲ್ಲ ಕೇರಳದ ಲಾರಿ ಇಲ್ಲಿ ಸಿಕ್ಕಿಹಾಕಿಕೊಡಿರುವುದರಿಂದ ಕೇರಳ ಪೊಲೀಸರು ಹಾಗೂ ಮಾಧ್ಯಮದವರು ರಾಜ್ಯ ಸರ್ಕಾರ ವಿಳಂಬ ಕಾರ್ಯಾಚರಣೆ ಮಾಡುತ್ತಿದೆ ಎಂದು ಆರೋಪಿಸಿರುವ ಬಗ್ಗೆ ಮಾತನಾಡಿ ರಾಜ್ಯ ಸರ್ಕಾರ ಯಾವುದನ್ನೂ ವಿಳಂಬ ಮಾಡಿಲ್ಲ. ಎಲ್ಲವನ್ನೂ ತ್ವರಿತವಾಗಿ ಮಾಡುತ್ತಿದ್ದೇವೆ. ಕೇರಳದ ಅರ್ಜುನ್ ಎಂಬುವರು ಕಾಣೆಯಾಗಿದ್ದು, ತಮ್ಮ ರಾಜ್ಯದವರೆಂದು ಅವರೆಲ್ಲಾ ಬಂದಿರಬಹುದು. ಆದರೆ ನಾವು ವಿಳಂಬ ಮಾಡದೇ, ನಿರ್ಲಕ್ಷ್ಯ ತೋರದೆ ಕೆಲಸ ಮಾಡುತ್ತಿದ್ದೇವೆ ಎಂದರು.

ಭೂ ಕುಸಿತ ತಡೆಗಟ್ಟಲು ಪ್ರಯತ್ನ 34 ಸ್ಥಳಗಳಲ್ಲಿ ಭೂ ಕುಸಿತವಾಗುತ್ತದೆ ಎಂದು ಒಂದು ವರ್ಷದ ಹಿಂದೆಯೇ ವರದಿಯಾಗಿದೆ, ಸತ್ತ ಮೇಲೆಯೇ ಕ್ರಮವೇಕೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಕಳೆದ ಬಾರಿ ಬರವಿದ್ದು, ಈ ಬಾರಿ ಮಳೆಯಾಗುತ್ತಿದೆ. ಬಹಳ ವರ್ಷ ಗಳಿಂದ ಇಲ್ಲಿ ಭೂ ಕುಸಿತವಾಗಿರಲಿಲ್ಲ. ಎಲ್ಲೆಲ್ಲಿ ಭೂ ಕುಸಿತವಾಗುತ್ತದೆಯೋ ಅದನ್ನು ತಡೆಗಟ್ಟಲು ಪ್ರಯತ್ನಿಸಲಾಗುವುದು ಎಂದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ ರಾತ್ರಿ ವೇಳೆ ಕಾರ್ಯಾಚರಣೆ ನಡೆಯುವುದಿಲ್ಲ ಎಂದು ತಿಳಿಸಿದ ಮುಖ್ಯಮಂತ್ರಿಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಾಜಕಾರಣ ಮಾಡುವುದಿಲ್ಲ. ಕೇಂದ್ರ ಸರ್ಕಾರದ ತಂಡ ಎನ್.ಡಿ.ಆರ್. ಎಫ್ ಕೂಡ ಇಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ನೌಕಾ ತಂಡವೂ ಇದೆ. ಇಲ್ಲಿ ಇನ್ಯಾರ ಮೇಲೆಯೂ ದೋಷ ಹೊರೆಸಲು ನಾನು ಹೋಗುವುದಿಲ್ಲ.

ಸಾಧ್ಯವಾದಷ್ಟು ಜೀವ ಉಳಿಸುವ ಪ್ರಯತ್ನ
ಭೂ ಕುಸಿತದಿಂದ ಮರಣ ಹೊಂದಿದವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ನಾವು ಕೊಡುವ ಪರಿಹಾರದಿಂದ ಅವರ ಜೀವ ಮರಳಿ ಬರುವುದಿಲ್ಲ. ಪ್ರಕೃತಿ ವಿಕೋಪದಿಂದಾಗಿರುವ ಘಟನೆ ಇದು. ಸಾಧ್ಯವಾದಷ್ಟು ಅವರನ್ನು ಉಳಿಸುವ ಪ್ರಯತ್ನ ಮಾಡಲಾಗುವುದು. ಇಲ್ಲದಿದ್ದರೆ ಅವರ ಮೃತ ದೇಹವನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುವುದು ಎಂದರು.

ಉಳುವರೆ ಗ್ರಾಮದಲ್ಲಿ ಮನೆಗಳ ಹಾನಿ: ಕೂಡಲೆ ಪರಿಹಾರ
ಉಳುವರೆ ಎಂಬ ಗ್ರಾಮದಲ್ಲಿ ಮಳೆಯಿಂದಾಗಿ ಏಳು ಮನೆಗಳು ಹಾನಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೂಡಲೇ ಪರಿಹಾರ ನೀಡಲಾಗುವುದು ಹಾಗೂ ಪರ್ಯಾಯ ಸ್ಥಳವನ್ನೂ ನೀಡಲಾಗುವುದು ಎಂದರು.

About the Author

The Bengaluru Live

Administrator

Visit Website View All Posts

Post navigation

Previous: ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯಲ್ಲಿ ದೊಡ್ಡ ಹಗರಣ: ಬಿಜೆಪಿ ನಾಯಕ, ಮಾಜಿ ಉಪ ಮಹಾಪೌರ ಎಸ್.ಹರೀಶ್
Next: ಮುಂದಿನ 3 ವರ್ಷದಲ್ಲಿ ಎಲ್ಲಾ ಹೊಸ ತಾಲೂಕುಗಳಿಗೂ ಸ್ವಂತ ಆಡಳಿತ ಕಚೇರಿ ನಿರ್ಮಾಣಕ್ಕೆ ಸರ್ಕಾರ ಬದ್ಧ: ಕೃಷ್ಣ ಬೈರೇಗೌಡ

Related Stories

‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

Atul Chaturvedi November 29, 2026 9:07 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

The Bengaluru Live November 29, 2026 8:56 PM
ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

Atul Chaturvedi November 29, 2026 7:46 PM

Latest Post

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ ‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

November 29, 2026 9:07 PM
ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

November 29, 2026 8:56 PM
ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

November 29, 2026 7:53 PM
850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್ ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

November 29, 2026 7:46 PM
‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ ಲಾಲ್‌ಬಾಗ್ ಫಲಕದ ಮುಂದೆ ನಿಂತು ಕುಳಿತಿರುವ ಜನರ ದೊಡ್ಡ ಗುಂಪು
  • ಬೆಂಗಳೂರು ನಗರ

‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ

November 29, 2026 7:27 PM
₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ವೇದಿಕೆಯಲ್ಲಿ ಕೈ ಎತ್ತಿ ಹೆಬ್ಬೆರಳು ತೋರುತ್ತಿರುವ ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರು ಮತ್ತು ಮುಖಂಡರು
  • ಬೆಂಗಳೂರು ನಗರ

₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು

November 29, 2026 7:11 PM

ನೀವು ತಪ್ಪಿಸಿಕೊಂಡಿರಬಹುದು

‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

Atul Chaturvedi November 29, 2026 9:07 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

The Bengaluru Live November 29, 2026 8:56 PM
ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM
ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

Atul Chaturvedi November 29, 2026 7:46 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ
  • ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ
  • ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ
  • 850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್
©Copyright 2025 The Bengaluru Live All rights reserved. | MoreNews by AF themes.