ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
ಶಿವಮೊಗ್ಗ: ಸಾಗರ ಉಪವಿಭಾಗದ ಸಹಾಯಕ ಆಯುಕ್ತರ (ಕಂದಾಯ) ಆಪ್ತ ಸಹಾಯಕ ಗುರುರಾಯಾಚಾರ್ಯ ಡಿ.ವಿ. ಅವರು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, ಅದರಲ್ಲಿ 2,000 ರೂ.ಗಳನ್ನು ಫೋನ್ಪೇ ಮೂಲಕ ಸ್ವೀಕರಿಸಿದ ಆರೋಪದ ಮೇಲೆ ಶಿವಮೊಗ್ಗ ಲೋಕಾಯುಕ್ತ ಘಟಕ ನವೆಂಬರ್ 26ರಂದು ಬಲೆಗೆ ಬೀಳಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ, 1988ರ (2018ರಲ್ಲಿ ತಿದ್ದುಪಡಿಯಾದ) ಸೆಕ್ಷನ್ 7(ಎ) ಮತ್ತು 7(ಬಿ) ಅಡಿ ಅಪರಾಧ ಸಂಖ್ಯೆ 08/2026 ರಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲೋಕಾಯುಕ್ತದ ಪ್ರಕಾರ, ಸಾಗರ ತಾಲ್ಲೂಕಿನ ಬಿಳಿಗಲ್ಲೂರು ಗ್ರಾಮದ ಖಾಲಿ ನಿವೇಶನಕ್ಕೆ ಸಂಬಂಧಿಸಿದ ದೂರಿನ ಕುರಿತು ಸಹಾಯಕ ಆಯುಕ್ತರ ನ್ಯಾಯಾಲಯದ ಆದೇಶದ ಪ್ರತಿ ನೀಡಲು ಈ ಅಧಿಕಾರಿ ಲಂಚ ಕೇಳುತ್ತಿದ್ದರು ಎಂದು ಮೈಸೂರು ನಗರದ ಇಲವಾಲದ ಮಹಿಳೆಯೊಬ್ಬರು ದೂರು ನೀಡಿದ್ದರು.
ಅಧಿಕಾರಿ 5,00,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಅದರಲ್ಲಿ 2,000 ರೂ.ಗಳನ್ನು ಫೋನ್ಪೇ ಮೂಲಕ ಸ್ವೀಕರಿಸಿದ್ದಾರೆ. ಅವರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ರುದ್ರೇಶ್ (ಪಿಐ-1), ವೀರಬಸಪ್ಪ (ಪಿಐ-3) ಮತ್ತು ಸಿಬ್ಬಂದಿ ಬಲೆ ಬೀಸಿದರು.
ಇದನ್ನೂ ಓದಿ:
