Home ಬೆಂಗಳೂರು ನಗರ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿ ರಚನೆ

ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿ ರಚನೆ

50
0
ಚಿತ್ರ ಮೂಲ: https://samvada.org/

ಬೆಂಗಳೂರು:

ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಕರ್ನಾಟಕದ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿ ರಚನೆಯಾಗಿದೆ. ಚಾಮರಾಜನಗರ ಸೇವಾಭಾರತಿ ಶಾಲೆಯ ಅಧ್ಯಕ್ಷರಾದ ಶ್ರೀ ಮ. ವೆಂಕಟರಾಮು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರಾಗಿ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಶ್ರೀಮತಿ ಡಾ. ವಿಜಯಲಕ್ಷ್ಮಿ ದೇಶಮಾನೆ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಶ್ರೀಮತಿ ಮೀನಾ ಚಂದಾವರ್ಕರ್ ಇರುತ್ತಾರೆ. ವನವಾಸಿ ಕಲ್ಯಾಣ ಆಶ್ರಮ, ಕರ್ನಾಟಕದ ನಿರ್ವಾಹಕ ವಿಶ್ವಸ್ತರಾದ ಶ್ರೀ ನಾ. ತಿಪ್ಪೇಸ್ವಾಮಿಯವರು ಕಾರ್ಯದರ್ಶಿಗಳಾಗಿರುತ್ತಾರೆ.

ಶಿವಮೊಗ್ಗದ ಶ್ರೀ ಟಿ. ಪಟ್ಟಾಭಿರಾಮ, ನಿವೃತ್ತ ಬ್ಯಾಂಕ್ ಅಧಿಕಾರಿಗಳು, ಕಲಬುರಗಿಯ ರಾಷ್ಟ್ರೋತ್ಥಾನದ ಆಡಳಿತಾಧಿಕಾರಿಗಳಾದ ಶ್ರೀ ಕೃಷ್ಣ ಜೋಷಿ ಸಹ ಕಾರ್ಯದರ್ಶಿ ಜವಾಬ್ದಾರಿ ವಹಿಸಲಿದ್ದಾರೆ. ನಿವೃತ್ತ ಐಆರ್‌ಎಸ್ ಅಧಿಕಾರಿಗಳಾದ ಶ್ರೀ ಡಾ. ಪ್ರಕಾಶ್ ಜೆ. ಪಿ ಕೋಶಾಧ್ಯಕ್ಷರಾಗಿರುತ್ತಾರೆ.

ಉಳಿದಂತೆ, ಸಮಿತಿಯ ಸದಸ್ಯರುಗಳ ಪಟ್ಟಿ ಇಂತಿದೆ

ಶ್ರೀಮತಿ ಕೆ. ರತ್ನ ಪ್ರಭಾ, ನಿವೃತ್ತ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು
ಶ್ರೀ ವಿ. ಆರ್. ಗೌರಿಶಂಕರ, ಆಡಳಿತಾಧಿಕಾರಿಗಳು, ಶ್ರೀ ಶಾರದಾ ಪೀಠ, ಶೃಂಗೇರಿ
ಶ್ರೀ ಮೂಲಚಂದ್ ನಹಾರ್, ಅಧ್ಯಕ್ಷರು, ತೇರಾಪಂಥ್ ಸಭಾ, ಬೆಂಗಳೂರು
ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ಛೇರ್ಮನ್, ವಿ ಆರ್ ಎಲ್ ಸಮೂಹ ಸಂಸ್ಥೆಗಳು, ಹುಬ್ಬಳ್ಳಿ
ಶ್ರೀ ಎಂ. ಆರ್. ಜಯರಾಮ್, ಧರ್ಮಾಧಿಕಾರಿಗಳು, ಶ್ರೀ ಯೋಗಿ ನಾರೇಯಣ ಮಠ, ಕೈವಾರ, ಬೆಂಗಳೂರು
ಶ್ರೀ ದೇವೇಂದ್ರಪ್ಪ ಮಾಳಗಿ, ನಿವೃತ್ತ ಡಿವೈಎಸ್ಪಿ ಹಾಗೂ ಛೇರ್ಮನ್, ಶ್ರೀ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ, ಹುಬ್ಬಳ್ಳಿ
ಶ್ರೀ ಡಾ. ಸರ್ದಾರ್ ಬಲಬೀರ್ ಸಿಂಗ್, ಅಧ್ಯಕ್ಷರು, ಗುರುದ್ವಾರ ಪ್ರಬಂಧಕ ಕಮಿಟಿ, ಶ್ರೀ ನಾನಕ್‌ ಝೀರಾ ಸಾಹೇಬ್, ಬೀದರ್
ಶ್ರೀ ಮಾನಂದಿ ಸುರೇಶ್, ಕಾರ್ಯದರ್ಶಿಗಳು, ಭಾರತೀಯ ವಿದ್ಯಾಭವನ, ಬೆಂಗಳೂರು
ಶ್ರೀ ಕಿಮ್ಮನೆ ಜಯರಾಮ್, ಖ್ಯಾತ ಅಡಿಕೆ ವ್ಯಾಪಾರಿಗಳು, ಶಿವಮೊಗ್ಗ
ಶ್ರೀ ವಿವೇಕ್ ಆಳ್ವ, ನಿರ್ವಾಹಕ ವಿಶ್ವಸ್ತರು, ಆಳ್ವಾಸ್ ಎಜುಕೇಶನ್ ಫೌಂಡೇಶನ್, ಮೂಡಬಿದಿರೆ
ಶ್ರೀ ಲಿಂಗರಾಜ್, ಛೇರ್ಮನ್, ಜಿ ಎಂ ಕಂಪೆನಿಗಳ ಸಮೂಹ, ದಾವಣಗೆರೆ
ಶ್ರೀ ಡಾ. ಗಿರೀಶ್ ಮಾಸೂರಕರ್, ನೇತ್ರತಜ್ಞರು, ಬಾಗಲಕೋಟೆ
ಶ್ರೀಮತಿ ಡಾ. ಟಿ. ಎಸ್. ಸತ್ಯವತಿ, ಸಂಗೀತ ವಿದುಷಿ, ಬೆಂಗಳೂರು
ಶ್ರೀ ಡಾ. ಮಲ್ಲಿಕಾರ್ಜುನ ಮುಕ್ಕಾ, ನಿವೃತ್ತ ಉಪ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ
ಶ್ರೀ ಡಾ. ಜೀವರಾಜ್ ಸೊರಕೆ, ಛೇರ್ಮನ್, ಎಸ್ ಸಿ ಎಸ್ ಆಸ್ಪತ್ರೆ, ಮಂಗಳೂರು
ಶ್ರೀ ಸತೀಶ ಯಚ್ಚರೆಡ್ಡಿ, ಖ್ಯಾತ ಉದ್ಯಮಿಗಳು, ಬಳ್ಳಾರಿ
ಶ್ರೀ ಡಿ. ಎನ್. ಪ್ರಹ್ಲಾದ್, ಸ್ವತಂತ್ರ ನಿರ್ದೇಶಕರು, ಇನ್ಫೋಸಿಸ್ ಹಾಗೂ ಸ್ಥಾಪಕರು, ಸೂರ್ಯ ಸಾಫ್ಟ್ ವೇರ್ ಸಿಸ್ಟಮ್ಸ್, ಬೆಂಗಳೂರು
ಶ್ರೀ ಜಯಂತ ಹುಂಬರವಾಡಿ, ಸಹ ವ್ಯವಸ್ಥಾಪಕ ನಿರ್ದೇಶಕರು, ಅಶೋಕ್ ಐರನ್ ಗ್ರೂಪ್, ಬೆಳಗಾವಿ
ಶ್ರೀಮತಿ ಅರುಣಾ ಠಕಾರೆ, ಸಂಚಾಲಿಕಾ, ರಾಷ್ಟ್ರ ಸೇವಿಕಾ ಸಮಿತಿ, ಕರ್ನಾಟಕ, ಬೆಂಗಳೂರು
ಶ್ರೀ ಡಾ. ಎಸ್. ಆರ್. ರಾಮನಗೌಡರ, ವೈದ್ಯರು, ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು, ಧಾರವಾಡ

LEAVE A REPLY

Please enter your comment!
Please enter your name here