Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ
  • ಕರ್ನಾಟಕ

ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ

The Bengaluru Live November 9, 2026 6:00 PM 1 minute read
ಸಮಿತಿ ಸಭೆಯ ಕೊಠಡಿಯಲ್ಲಿ ಉದ್ದನೆಯ ಮೇಜಿನ ಸುತ್ತ ಕುಳಿತು ಚರ್ಚಿಸುತ್ತಿರುವ ಅಧಿಕಾರಿಗಳು

ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ. ಚಿತ್ರ: ಸಚಿವರ ಮಾಧ್ಯಮ ಗುಂಪು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರಿನ ಆಚೆಗೂ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ನೀಡಲು ಒಟ್ಟು ₹6,825 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ 147 ಕೈಗಾರಿಕಾ ಯೋಜನೆಗಳಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯು ಒಪ್ಪಿಗೆ ನೀಡಿದೆ.

“ಈ ಯೋಜನೆಗಳ ಮೂಲಕ ರಾಜ್ಯದಾದ್ಯಂತ 18,600 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಅನುಮೋದನೆ ಪಡೆದ ಯೋಜನೆಗಳ ಪೈಕಿ 131 ಯೋಜನೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೂಡಿಕೆ ಆಗಲಿದ್ದು, ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ನೀಡಲಿದೆ” ಎಂದು ಸಭೆ ಬಳಿಕ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಪ್ರಮುಖ ಹೂಡಿಕೆಗಳ ಪೈಕಿ ದೇವನಹಳ್ಳಿ ಬಳಿ ಅದ್ವೈತ್‌ ಟೆಕ್‌ನ ₹ 380 ಕೋಟಿ ವೆಚ್ಚದ ಐಟಿ ಹಾಗೂ ಐಟಿಇಎಸ್‌ ಪಾರ್ಕ್‌ ನಿರ್ಮಾಣ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಒಎಫ್‌ಬಿ ಟೆಕ್‌ ಲಿಮಿಟೆಡ್‌ನ ₹ 245 ಕೋಟಿ ವೆಚ್ಚದ ಕಂಟೇನರ್‌ ಗಾಜಿನ ಘಟಕ ನಿರ್ಮಾಣ, ಮೈಸೂರು ಜಿಲ್ಲೆಯ ಕೊಚನಹಳ್ಳಿಯಲ್ಲಿ ಎಫ್‌ಐಇಎಂ ಇಂಡಸ್ಟ್ರೀಸ್‌ನ ₹ 183 ಕೋಟಿ ಮೊತ್ತದ ಎಲೆಕ್ಟ್ರಾನಿಕ್‌ ಘಟಕಗಳ ತಯಾರಿಕೆ, ಬಳ್ಳಾರಿ ಜಿಲ್ಲೆಯ ಬೆಳಗಲ್ಲುವಿನಲ್ಲಿ ಅನಂತ್‌ ಸ್ಟೀಲ್ಸ್‌ನ ₹ 119.41 ಕೋಟಿ ಮೊತ್ತದ ಉಕ್ಕಿನ ಸರಳುಗಳ ತಯಾರಿಕೆ ಘಟಕಗಳು ಸೇರಿವೆ.

ವಿವಿಧ ವಲಯಗಳಲ್ಲಿ ಹೂಡಿಕೆಗೆ ಉತ್ತೇಜನ

“ಅನುಮೋದನೆ ಪಡೆದ ಯೋಜನೆಗಳು ಆಹಾರ ಸಂಸ್ಕರಣೆ, ಜವಳಿ, ಡೇಟಾ ಸೆಂಟರ್, ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ), ಐಟಿ ಪಾರ್ಕ್, ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳ ಜೋಡಣೆ, ವೈಮಾಂತರಿಕ್ಷ, ಸಕ್ಕರೆ, ಜನರಲ್‌ ಎಂಜಿನಿಯರಿಂಗ್ ಸೇರಿದಂತೆ ವಿವಿಧ ತಯಾರಿಕಾ ವಲಯಗಳಿಗೆ ಸಂಬಂಧಿಸಿವೆ. ಇದರಿಂದ ರಾಜ್ಯದ ಕೈಗಾರಿಕಾ ವಲಯದಲ್ಲಿ ವೈವಿಧ್ಯಮಯ ಹೂಡಿಕೆಗಳಿಗೆ ಗಮನಾರ್ಹ ಉತ್ತೇಜನ ದೊರೆಯಲಿದೆ” ಎಂದು ಪಾಟೀಲ ಅವರು ತಿಳಿಸಿದ್ದಾರೆ.

ಬೆಂಗಳೂರು ಆಚೆಗಿನ ಕೈಗಾರಿಕಾ ಬೆಳವಣಿಗೆಗೆ ಆದ್ಯತೆ

“ಬಹುತೇಕ ಯೋಜನೆಗಳು ರಾಜ್ಯದ ಇತರ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿವೆ. ಇದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳ ವಿಸ್ತರಣೆ, ಸ್ಥಳೀಯ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ” ಎಂದು ಸಚಿವರು ತಿಳಿಸಿದ್ದಾರೆ.

ಸಭೆಯಲ್ಲಿ ₹50 ಕೋಟಿಗೂ ಅಧಿಕ ಬಂಡವಾಳ ಹೂಡಿಕೆಯ 36 ಪ್ರಮುಖ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ₹4,507.71 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 12,074 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ ಎಂದು ಅವರು ವಿವರಿಸಿದ್ದಾರೆ.

₹15 ಕೋಟಿಯಿಂದ ₹50 ಕೋಟಿಯೊಳಗಿನ ಬಂಡವಾಳ ಹೂಡಿಕೆಯ 108 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ₹2,238.37 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, ಅಂದಾಜು 6,526 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಹೆಚ್ಚುವರಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಮೂರು ಯೋಜನೆಗಳಿಗೂ ಅನುಮೋದನೆ ನೀಡಲಾಗಿದ್ದು, ಇವುಗಳಿಂದ ₹79.85 ಕೋಟಿ ಹೂಡಿಕೆಯಾಗಲಿದೆ.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಖುಷ್ಬೂ ಜಿ. ಚೌಧರಿ, ಕೆಐಎಡಿಬಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನಷ್ಟು ಸಂಬಂಧಿತ ಸುದ್ದಿಗಳನ್ನು ಓದಿ:

  • ವಿಮಾನ ಎಜೆಕ್ಷನ್ ಸೀಟು ತಯಾರಿಕೆಗೆ ಮಾರ್ಟಿನ್-ಬೇಕರ್ ₹380 ಕೋಟಿ ಹೂಡಿಕೆ; ವಿಜಯಪುರದಲ್ಲಿ ಟೊನ್ಬೊ ಇಮೇಜಿಂಗ್ ಪರೀಕ್ಷಾ ಸೌಲಭ್ಯ ಪ್ರಸ್ತಾಪ
  • ಬೆಂಗಳೂರಿನ ಗಿಟೆಕ್ಸ್ ಎಐ ಇಂಡಿಯಾ 2027 ಸಿದ್ಧತೆ ಪರಿಶೀಲಿಸಿದ ಕರ್ನಾಟಕ ಸರ್ಕಾರ

About the Author

The Bengaluru Live

Administrator

Visit Website View All Posts

Post navigation

Previous: E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ
Next: ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

Related Stories

ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 6:02 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ

The Bengaluru Live November 9, 2026 2:54 PM
ಮಳೆ ಸುರಿಯುತ್ತಿರುವ ರಸ್ತೆಯಲ್ಲಿ ವಾಹನಗಳ ಪಕ್ಕದಲ್ಲಿ ಕೊಡೆ ಹಿಡಿದು ಸಾಗುತ್ತಿರುವ ವ್ಯಕ್ತಿ
  • ಕರ್ನಾಟಕ
  • ಬೆಂಗಳೂರು

ಬೆಂಗಳೂರು ಹವಾಮಾನ: ಇಂದು ಹಗುರ ಮಳೆ ಸಾಧ್ಯತೆ, ಸೋಮವಾರ-ಮಂಗಳವಾರ ಒಣ ಹವೆ; ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ

The Bengaluru Live November 8, 2026 2:38 PM

Latest Post

ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್ ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

November 9, 2026 6:02 PM
ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ ಸಮಿತಿ ಸಭೆಯ ಕೊಠಡಿಯಲ್ಲಿ ಉದ್ದನೆಯ ಮೇಜಿನ ಸುತ್ತ ಕುಳಿತು ಚರ್ಚಿಸುತ್ತಿರುವ ಅಧಿಕಾರಿಗಳು
  • ಕರ್ನಾಟಕ

ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ

November 9, 2026 6:00 PM
E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ

November 9, 2026 2:54 PM
ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘದ ನಂಟಿರುವವರು: ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ರಾಜಕೀಯ

ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘದ ನಂಟಿರುವವರು: ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ

November 9, 2026 12:13 PM
ದೇವನಹಳ್ಳಿ ಹಿಟ್ ಅಂಡ್ ರನ್: ಇಬ್ಬರು ಬೈಕ್ ಸವಾರರು ಸಾವು; ಅರ್ಧ ಗಂಟೆಗೂ ಹೆಚ್ಚು ಕಾಲ ಬೆನ್ನಟ್ಟಿ ಫಾರ್ಚುನರ್ ಚಾಲಕನನ್ನು ಹಿಡಿದ ಪೊಲೀಸರು ದೇವನಹಳ್ಳಿ ಹಿಟ್ ಅಂಡ್ ರನ್‌ನಲ್ಲಿ ಮೃತಪಟ್ಟ ಇಬ್ಬರು ಬೈಕ್ ಸವಾರರ ಅಕ್ಕಪಕ್ಕದ ಭಾವಚಿತ್ರಗಳು
  • ಬೆಂಗಳೂರು

ದೇವನಹಳ್ಳಿ ಹಿಟ್ ಅಂಡ್ ರನ್: ಇಬ್ಬರು ಬೈಕ್ ಸವಾರರು ಸಾವು; ಅರ್ಧ ಗಂಟೆಗೂ ಹೆಚ್ಚು ಕಾಲ ಬೆನ್ನಟ್ಟಿ ಫಾರ್ಚುನರ್ ಚಾಲಕನನ್ನು ಹಿಡಿದ ಪೊಲೀಸರು

November 9, 2026 11:43 AM
ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ: ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್‌ಗಳಿಂದ 68 ಪ್ರಕರಣ, ₹76,500 ದಂಡ ವಸೂಲಿ ಸಿಂಗಸಂದ್ರದಲ್ಲಿ ಕಟ್ಟಡದ ಮುಂದೆ ವ್ಯಕ್ತಿಯೊಬ್ಬರಿಗೆ ದಂಡದ ರಸೀದಿ ನೀಡುತ್ತಿರುವ ಸಮವಸ್ತ್ರಧಾರಿ ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್
  • ಬೆಂಗಳೂರು ನಗರ
  • ಬೆಂಗಳೂರು

ಬೆಂಗಳೂರಿನಲ್ಲಿ ಕಸ ಎಸೆಯುವವರ ವಿರುದ್ಧ ಕಾರ್ಯಾಚರಣೆ: ಬಿಎಸ್‌ಡಬ್ಲ್ಯುಎಂಎಲ್ ಮಾರ್ಷಲ್‌ಗಳಿಂದ 68 ಪ್ರಕರಣ, ₹76,500 ದಂಡ ವಸೂಲಿ

November 9, 2026 11:35 AM

ನೀವು ತಪ್ಪಿಸಿಕೊಂಡಿರಬಹುದು

ಉರ್ದು ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿ ಹಾರ ಧರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಸ್ಮರಣಿಕೆ ಹಿಡಿದಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 6:02 PM
ಸಮಿತಿ ಸಭೆಯ ಕೊಠಡಿಯಲ್ಲಿ ಉದ್ದನೆಯ ಮೇಜಿನ ಸುತ್ತ ಕುಳಿತು ಚರ್ಚಿಸುತ್ತಿರುವ ಅಧಿಕಾರಿಗಳು
  • ಕರ್ನಾಟಕ

ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ

The Bengaluru Live November 9, 2026 6:00 PM
ಮೈಕ್ರೋಫೋನ್‌ಗಳ ನಡುವೆ ಪತ್ರಿಕಾಗೋಷ್ಠಿಯಲ್ಲಿ ಕುಳಿತಿರುವ ಸಚಿವ ರಿಜ್ವಾನ್ ಅರ್ಷದ್
  • ಕರ್ನಾಟಕ
  • ರಾಜಕೀಯ

E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ

The Bengaluru Live November 9, 2026 2:54 PM
ಕೊಚ್ಚಿಯ ಮುಸ್ಲಿಂ ಯೂತ್ ಲೀಗ್ ರ‍್ಯಾಲಿಯಲ್ಲಿ ವೇದಿಕೆಯಲ್ಲಿ ಸಂವಿಧಾನದ ಪ್ರತಿ ಹಿಡಿದು ಮಾತನಾಡುತ್ತಿರುವ ಪ್ರಿಯಾಂಕ್ ಖರ್ಗೆ
  • ರಾಜಕೀಯ

ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘದ ನಂಟಿರುವವರು: ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ

The Bengaluru Live November 9, 2026 12:13 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕರ್ನಾಟಕ ಉರ್ದು ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ, ಜಷ್ನ್ ಎ ಉರ್ದು ಸಮಾರಂಭ ಉದ್ಘಾಟಿಸಿದ ಸಿಎಂ ಡಿ.ಕೆ. ಶಿವಕುಮಾರ್
  • ರಾಜ್ಯ ಮಟ್ಟದ 161ನೇ ಏಕಗವಾಕ್ಷಿ ಅನುಮೋದನಾ ಸಮಿತಿಯಿಂದ 147 ಯೋಜನೆಗಳಿಗೆ ಒಪ್ಪಿಗೆ; ₹6,825 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ: ಸಚಿವ ಎಂ.ಬಿ. ಪಾಟೀಲ
  • E20 ಇಂಧನ ಪರೀಕ್ಷೆ: ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಎಥನಾಲ್ ಇದೆ? ತೈಲ ಕಂಪನಿಗಳಿಗೆ ಕರ್ನಾಟಕ ಸರ್ಕಾರದ ಪ್ರಶ್ನೆ
  • ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಹತ್ಯೆಗಳ ಹಿಂದೆ ಸಂಘದ ನಂಟಿರುವವರು: ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿಕೆ
©Copyright 2025 The Bengaluru Live All rights reserved. | MoreNews by AF themes.