ಬೆಂಗಳೂರು:
ಬೆಂಗಳೂರಿಗೆ ಬರುವ ರೈಲು ಪ್ರಯಾಣಿಕರಿಗೆ ಒಂದು ಕೆಟ್ಟ ಸುದ್ದಿ. ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಕಾರಣಕ್ಕೆ ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು (ರೈಲು ನಂ.07353/07354) ಜುಲೈ 16 ರಿಂದ ನಿಲ್ಲಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.
Cancellation of trains:
— DRM Hubballi (@drmubl) July 6, 2023
T. No. 07353/07354 KSR #Bengaluru – SSS #Hubballi – KSR Bengaluru Express Special will be cancelled with effect from 16.07.2023. pic.twitter.com/2VZ9244Gyb
ಬೆಂಗಳೂರು-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಗೆ ತಲುಪುತ್ತಿತ್ತು. ಬಳಿಕ ಮಧ್ಯಾಹ್ನ 3.15 ಕ್ಕೆ ಹುಬ್ಬಳ್ಳಿಯಿಂದ ಹೊರಟು ರಾತ್ರಿ 11.10 ಕ್ಕೆ ಬೆಂಗಳೂರು ತಲುಪುತ್ತಿತ್ತು. ಈ ವಿಶೇಷ ರೈಲಿನಲ್ಲಿ ಮೂರು ಎಸಿ ಕೋಚ್‌ಗಳಿತ್ತು ಮತ್ತು ಏಳು ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 16 ಕೋಚ್‌ಗಳನ್ನು ಹೊಂದಿತ್ತು.