Home ಬೆಂಗಳೂರು ನಗರ ಸಂಜಯ್‌ನಗರ ವೈಟ್ ಟಾಪಿಂಗ್ ಕಾಮಗಾರಿ ಮಾನ್ಯ ಮುಖ್ಯ ಆಯುಕ್ತರು ರವರಿಂದ ತಪಾಸಣೆ

ಸಂಜಯ್‌ನಗರ ವೈಟ್ ಟಾಪಿಂಗ್ ಕಾಮಗಾರಿ ಮಾನ್ಯ ಮುಖ್ಯ ಆಯುಕ್ತರು ರವರಿಂದ ತಪಾಸಣೆ

27
0

ಬೆಂಗಳೂರು:

ಬಿಬಿಎಂಪಿಯ ಸಂಜಯ್‌ನಗರದ 80 ಅಡಿ ರಸ್ತೆಯಲ್ಲಿ ಅಶ್ವಥ್ ನಗರದ ದ್ವಾರದಿಂದ ಎಂ.ಎಸ್ .ರಾಮಯ್ಯ ಆಸ್ಪತ್ತೆಯ ರಸ್ತೆಯ ಸ್ನಿಗಲ್ ವರೆಗೆ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮುಖ್ಯ ಆಯುಕ್ತರು ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Speed up white topping of Sanjay Nagar road BBMP chief2

ಪಾಲಿಕೆಯ ಯೋಜನಾ ವಿಭಾಗದಿಂದ ಸಂಜಯ್‌ನಗರದ 80 ಅಡಿ ರಸ್ತೆಯು ಸುಮಾರು 1 ಕಿ.ಮೀ ಇದ್ದು, 9.82 ಕೋಟಿ ರೂ. ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಮೇ ಅಂತ್ಯದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡು 30 ದಿನಗಳಲ್ಲಿ ಎರಡೂ ಬದಿ ವೈಟ್ ಟಾಪಿಂಗ್ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿರುತ್ತದೆ. ಈ ಪೈಕಿ ಒಂದು ಬದಿಯಲ್ಲಿ ಕ್ಯೂರಿಂಗ್ ಆಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಮತ್ತೊಂದು ಬದಿ ಕ್ಯೂರಿಂಗ್ ಬಾಕಿಯಿದೆ. ಅದಲ್ಲದೆ ರಸ್ತೆಯ ಎರಡೂ ಬದಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ನೀರಿನ ಪೈಪ್ ಲೈನ್, ಬೆಸ್ಕಾಂ, ಒಎಫ್‌ಸಿ ಕೇಬಲ್‌ಗಳಿಗೆ ಡಕ್ಟ್ಸ್ ಅಳವಡಿಕೆ, ಚರಂಡಿ ಕಾಮಗಾರಿ, ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರೆ ಸಿವಿಲ್ ಕಾಮಗಾರಿ ಬಾಕಿಯಿದ್ದು, 35 ರಿಂದ 40 ದಿನಗಳಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನಿಡಿದರು.

Speed up white topping of Sanjay Nagar road BBMP chief

ಈ ವೇಳೆ ಆಯುಕ್ತರು ಮಾತನಾಡಿ, ಕ್ಯೂರಿಂಗ್ ಆದ ಕೂಡಲೆ ಎರಡೂ ಕಡೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಿ, ಜೊತೆಗೆ ಬಾಕಿಯಿರುವ ಕಾಮಗಾರಿಯನ್ನು ವಾಹನ ಸಂಚಾರಕ್ಕೆ ತೊಮದರೆಯಾಗದಂತೆ ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here