Home ಶಿಕ್ಷಣ ಎಸ್ಎಸ್ಎಲ್ ಸಿ ಪರೀಕ್ಷಾಭಿಮುಖವಾದ ಪಠ್ಯ ಬೋಧನೆಗೆ ಒತ್ತು : ಸುರೇಶ್ ಕುಮಾರ್

ಎಸ್ಎಸ್ಎಲ್ ಸಿ ಪರೀಕ್ಷಾಭಿಮುಖವಾದ ಪಠ್ಯ ಬೋಧನೆಗೆ ಒತ್ತು : ಸುರೇಶ್ ಕುಮಾರ್

24
0

ಬೆಂಗಳೂರು:

ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ ಸಿ ತರಗತಿಗೆ ಸಂಬಂಧಿಸಿದಂತೆ ಮುಂದಿನ ಪದವಿಪೂರ್ವ ಶಿಕ್ಷಣಕ್ಕೆ ಅವಶ್ಯಕವಾಗುವ ಕನಿಷ್ಟ ಜ್ಞಾನ ಹಾಗೂ ಪರೀಕ್ಷಾಭಿಮುಖವಾಗಿ ಅವಶ್ಯಕ‌ವಾಗುವ ಪಠ್ಯವನ್ನು ನಿರ್ಧರಿಸಿ ಬೋಧನೆಗೆ ನಿರ್ಣಯಿಸಲಾಗಿದೆ.ಬೋಧನೆಗೆ ಲಭ್ಯವಾಗುವ ಸಮಯದ ಆಧಾರದಲ್ಲಿ ರೂಪರೇಷೆಗಳನ್ನು ಮುಂದಿನ ಒಂದು ವಾರದ ಅವಧಿಯಲ್ಲಿ ಪ್ರಕಟಿಸಲಾಗುತ್ತದೆ‌ ಎಂದು ಸಚಿವಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿಗಳು ಈಗಾಗಲೇ‌ ಘೋಷಿಸಿರುವಂತೆ ಜನವರಿ ಒಂದಕ್ಕೆ ಶಾಲೆಗಳು ಆರಂಭವಾಗಲಿವೆ.ತಾಂತ್ರಿಕ‌ ಸಲಹಾ‌ ಸಮಿತಿಯ ಅಭಿಪ್ರಾಯ ಹಾಗೂ ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ‌ ಶಾಲಾರಂಭಕ್ಕೆ‌ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ‌ ಎಂದು‌ ಅವರು ಹೇಳಿದ್ದಾರೆ.

ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿರುವಂತೆ ಜನವರಿ ಒಂದಕ್ಕೆ ಶಾಲೆಗಳು ಆರಂಭವಾಗಲಿವೆ. ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯ ಹಾಗೂ ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಶಾಲಾರಂಭಕ್ಕೆ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.  ಜನವರಿ ಒಂದಕ್ಕೆ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ಅದರ ಯಶಸ್ಸಿನ ಆಧಾರದಲ್ಲಿ ಜ.15 ರಿಂದ ಉಳಿದ ತರಗತಿಗಳ ಪ್ರಾರಂಭಕ್ಕೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು. ಈಗಾಗಲೇ ತಿಳಿಸಲಾದ ರೀತಿಯಲ್ಲಿ ಜನವರಿ ಒಂದರಿಂದ ಆಯ್ದ ತರಗತಿಗಳ ವಿದ್ಯಾಗಮ  ಕಾರ್ಯಕ್ರಮವೂ ಆರಂಭವಾಗಲಿದೆ ಎಂದು ಅವರು ಖಚಿತಪಡಿಸಿದ್ದಾರೆ.

ಜ. 1ರಿಂದ 10, 12ನೇ ತರಗತಿ ಆರಂಭ; ಸಿಎಂಗೆ ಸಚಿವರ ಪತ್ರ

ಮುಖ್ಯಮಂತ್ರಿಯವರ ಸೂಚನೆ ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ  ಸಲಹೆ ಮತ್ತು ಮಾರ್ಗದರ್ಶನದಂತೆ ಜ. 1ರಿಂದ ಎಸ್ಸೆಸ್ಸೆಲ್ಸಿ ಮತ್ತು 12ನೇ ತರಗತಿ ಮತ್ತು ವಿದ್ಯಾಗಮ ಕಾರ್ಯಕ್ರಮ  ಆರಂಭಿಸುತ್ತಿದ್ದು, ಸಹಕಾರ ನೀಡಬೇಕು ಎಂದು ರಾಜ್ಯದ ಎಲ್ಲ ವಿಧಾನಸಭಾ ಸದಸ್ಯರು ಮತ್ತು ಜಿಲ್ಲಾ  ಉಸ್ತುವಾರಿ ಸಚಿವರಿಗೆ ಪ್ರಾಥಮಿಕ ಮತ್ತು ಪ್ರೌಢ  ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಶಾಲೆಗಳ ಆರಂಭಿಸುವ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಅಧಿಕಾರಿಗಳಿಗೆ ಸೂಕ್ತ, ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡಿ ಹೆಚ್ಚಿನ ಸಹಕಾರ ನೀಡಬೇಕು ಎಂದು ಪತ್ರದಲ್ಲಿ ಸಚಿವರು ಕೋರಿದ್ದಾರೆ. ತಮ್ಮ ಕ್ಷೇತ್ರ ಮತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ ಎಸ್ಸೆಎಸ್ಸೆಲ್ಸಿ ಪರೀಕ್ಷೆ  ಸಂದರ್ಭದಲ್ಲಿ ನೀಡಿದಂತೆ  ಶಾಲೆಗಳ ಆರಂಭಕ್ಕೆ ಸಹಕಾರ ನೀಡಬೇಕು. ಮಕ್ಕಳ ಸುಲಲಿತ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದೂ ಅವರು ಕೋರಿದ್ದಾರೆ. UNI

LEAVE A REPLY

Please enter your comment!
Please enter your name here