Home ರಾಜಕೀಯ ಎಸ್ ಟಿಪಿ, ಟಿಎಸ್ ಪಿ ಅನುದಾನ ಬೇರೆ ಉದ್ದೇಶಕ್ಕೆ ಬಳಕೆ

ಎಸ್ ಟಿಪಿ, ಟಿಎಸ್ ಪಿ ಅನುದಾನ ಬೇರೆ ಉದ್ದೇಶಕ್ಕೆ ಬಳಕೆ

46
0

ಆಡಳಿತ ಪಕ್ಷ, ವಿಪಕ್ಷ ಸದಸ್ಯರಿಂದ ವಿಧಾನಸಭೆಯಲ್ಲಿ ಧರಣಿ

ಬೆಂಗಳೂರು:

ಎಸ್ ಟಿಪಿ, ಟಿಎಸ್ ಪಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಆಡಳಿತ ಪಕ್ಷ ಬಿಜೆಪಿ ಸೇರಿ ಕಾಂಗ್ರೆಸ್, ಜೆಡಿಎಸ್, ಬಿಎಸ್ ಪಿ, ಸದಸ್ಯರು ವಿಧಾನಸಭೆಯಲ್ಲಿಂದು ಸದನದ ಬಾವಿಗಳಿದು ಧರಣಿ ನಡೆಸಿದ ಪ್ರಸಂಗ ಇಂದು ನಡೆಯಿತು.

ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಪಿ.ರಾಜೀವ್, ಜೆಡಿಎಸ್ ನ ಅನ್ನದಾನಿ, ಬಿಎಸ್ ಪಿಯ ಮಹೇಶ್ ಸೇರಿ ಇತರ ಶಾಸಕರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದರು.
ಪಿ.ರಾಜೀವ್ ಮಾತನಾಡಿ, ಎಸ್ ಟಿಪಿ, ಟಿಎಸ್ ಪಿ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ, ಈ ಹಣವನ್ನು ದಲಿತರ ಯೋಜನೆಗಷ್ಟೇ ಉಪಯೋಗವಾಗಬೇಕು, ಬೇರೆಯದಕ್ಕೆ ಸರ್ಕಾರ ವಿನಿಯೋಗಿಸುವಂತಿಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್ ಪಿಯ ಮಹೇಶ್ ಮಾತನಾಡಿ, ಕಾಯ್ದೆಯ ದುರುಪಯೋಗವಾಗುತ್ತಿದೆ. ಡೀಮ್ಡ್ ಎಂಬ ಪದವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

Screenshot 919
ಶ್ರೀರಾಮುಲು

ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು ಉತ್ತರಿಸಿ, ಆರ್ಥಿಕ ಇಲಾಖೆ ಜೊತೆ ಮಾತನಾಡಿದ್ದೇವೆ, ಡೀಮ್ಡ್ ಖರ್ಚಿಗೆ ಎಷ್ಟು ತೆಗೆದುಕೊಳ್ಳಬೇಕು ಎಂಬುದನ್ನು ನಿಗದಿ ಮಾಡಿಲ್ಲ ಅದರ ಮುಖ್ಯಮಂತ್ರಿ ಜೊತೆ ಮಾತನಾಡಿ ಅಂತಿಮ ತೀರ್ಮಾನ ಮಾಡುತ್ತೇವೆ, ಡೀಮ್ಡ್ ಎಕ್ಸ್ ಪೆಂಡೀಚರ್ ಅನುದಾನ ಎಷ್ಟಿದೆ ಅದನ್ನು ಪಡೆಯುತ್ತೇವೆ, ಎಲ್ಲಾ ಹಣವನ್ನು ಎಸ್ಟಿಟಿ,ಟಿಎಸ್ಪಿ ಗೆ ಬಳಕೆ ಮಾಡುತ್ತೇವೆ ಎಂದು ಶ್ರೀರಾಮುಲು ಭರವಸೆ ನೀಡಿದರು.

ಶ್ರೀರಾಮುಲು ಉತ್ತರಕ್ಕೆ ದಲಿತ ಶಾಸಕರ ಆಕ್ಷೇಪ ವ್ಯಕ್ತಪಡಿಸಿದ ಹಲವು ಶಾಸಕರು, ಸಚಿವರು ತಮ್ಮ ಉತ್ತರ ವಾಪಸ್ ಪಡೆಯಬೇಕು, ಈ ಹಣವನ್ನು ಯಾವುದಕ್ಕೂ ಬಳಸಿಕೊಳ್ಳುವಂತಿಲ್ಲ, ವಾಪಸ್ ಪಡೆಯುವವರೆಗೆ ನಾವು ಬಿಡುವುದಿಲ್ಲ ಎಂದು ಹೇಳಿದ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.

ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್.ಟಿ.ಪಿ ಟಿಎಸ್ ಪಿದ ಅನುದಾನ ದುರುಪಯೋಗವಾಗಬಾರದು. ಹಂಚಿಕೆಯಾದ ಹಣ ಅದೇ ವರ್ಷವೇ ಖರ್ಚಾಗಬೇಕು, ಸಕಾರಣಕ್ಕೆ ಖರ್ಚಾಗದಿದ್ದರೆ ಆ ಹಣ ಮುಂದಿನ ವರ್ಷದ ಅನುದಾನದೊಂದಿಗೆ ಸೇರಿಸಿ ಖರ್ಚಾಗಬೇಕು. ಪರಿಶಿಷ್ಟ ಜಾತಿ, ವರ್ಗದವರ ಜನಸಂಖ್ಯೆಗೆ ಅನುಗುಣವಾಗಿ 24.1ರಷ್ಟು ಅನುದಾನ ಮೀಸಲಿಡಬೇಕು.

ಡೀಮ್ಡ್ ಎಂಬ ಪದ ದಾರಿತಪ್ಪಿಸುತ್ತಿದೆ. ಈ ಪದ ಎಸ್.ಟಿ.ಎಸ್ ಸಿ ಅವರಿಗೆ ಅನ್ಯಾಯ ಮಾಡುತ್ತಿದೆ. ಒಂದು ರೂಪಾಯಿ ಕೂಡ ಬೇರೆ ಕಡೆ ಖರ್ಚಾಗಬಾರದು. ರಂಗೋಲಿ ಕೆಳಗೆ ತೂರುವುದು ಸರಿಯಲ್ಲ. ಇಡೀ ಸಮುದಾಯಕ್ಕೆ ಮಾರಕವಾಗಲಿದೆ. ಕಳೆದ ವರ್ಷ 30 ಸಾವಿರ ಕೋಟಿ ಇತ್ತು. 26 ಸಾವಿರ ಕೋಟಿ ಗೆ ಬಂದು ನಿಂತಿದೆ. ಬೇರೆ ಬಾಬ್ತುಗಳಿಗೆ ಖರ್ಚು ಮಾಡಲು ಅವಕಾಶ ನೀಡುವುದಿಲ್ಲ. ಬೇರೆ ವರ್ಗಕ್ಕೆ ಖರ್ಚು ಮಾಡಲು ಅವಕಾಶ ನೀಡುವುದಿಲ್ಲ. ಸರ್ಕಾರದ ನಿರ್ಧಾರ ಖಂಡಿಸಿ ತಾವು ಕೂಡ ಸದನದ ಬಾವಿಗಳಿದು ಧರಣಿ ನಡೆಸುತ್ತೇನೆ ಎಂದು ಹೇಳಿ ಧರಣಿಗೆ ಇಳಿದರು.

ವಿಷಯದ ಗಂಭೀರತೆ ಪರಿಗಣಿಸಿ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುವುದು. ಎಲ್ಲಾ ಸದಸ್ಯರು ತಮ್ಮ ಆಸನಕ್ಕೆ ಹಿಂದಿರುಗಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು. ಆದರೆ ಯಾರು ಕೂಡ ಸ್ಪೀಕರ್ ಮನವಿಗೆ ಸ್ಪಂದಿಸಲಿಲ್ಲ. ಕೊನೆಗೆ ಸ್ಪೀಕರ್ ಅವರು ಸದನದ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿದರು.

LEAVE A REPLY

Please enter your comment!
Please enter your name here