Home ಬೆಂಗಳೂರು ನಗರ ನೈರುತ್ಯ ರೈಲ್ವೆಯಿಂದ ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ

ನೈರುತ್ಯ ರೈಲ್ವೆಯಿಂದ ಕಾಯ್ದಿರಿಸದ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ

21
0

ಬೆಂಗಳೂರು:

ಸುಮಾರು ಎಂಟು ತಿಂಗಳ ಅಂತರದ ನಂತರ ನೈರುತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಸೋಮವಾರದಿಂದ ಮಹಾನಗರದಿಂದ ಸುತ್ತಲಿನ ಪಟ್ಟಣಗಳ ನಡುವೆ ಕಾಯ್ದಿರಿಸದ ಪ್ರಯಾಣಿಕರ ಸೇವೆಯನ್ನು ಪುನರಾರಂಭಿಸಿದೆ.

ಮೈಸೂರು-ಬಂಗಾರಪೇಟೆ, ಬೆಂಗಳೂರು-ಮಾರಿಕುಪ್ಪಂ ಮತ್ತು ಹಿಂದೂಪುರ-ಯಶವಂತಪುರ ಪ್ಯಾಸೆಂಜರ್ ರೈಲುಗಳು ಸೋಮವಾರ ಪುನರಾರಂಭಗೊಂಡಿವೆ. ಈ ಮೂಲಕ ಆರು ರೈಲುಗಳನ್ನು ಓಡಿಸಲಾಗಿದೆ.ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗ, ಬೆಂಗಳೂರು ಕೆಎಸ್‍ಆರ್ ನಿಲ್ದಾಣದಿಂದ ತಮಿಳುನಾಡಿನ ಹೊಸೂರಿಗೆ ಮೆಮು ರೈಲು ಸೇವೆಯನ್ನೂ ಆರಂಭಿಸಿದೆ. ರೈಲ್ವೆ ಮಂಡಳಿಯಿಂದ ಅನುಮೋದನೆ ಪಡೆದ ನಂತರ ಈ ಸೇವೆ ಆರಂಭಿಸಲಾಗಿದೆ.ಮೊದಲ ದಿನದಲ್ಲಿ ಮಾರಿಕುಪ್ಪಂ-ಬೆಂಗಳೂರು-ಮಾರಿಕುಪ್ಪಂ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಉಳಿದ ರೈಲುಗಳಿಗೆ ಹೆಚ್ಚು ಪ್ರತಿಕ್ರಿಯೆ ಕಂಡುಬಂದಿಲ್ಲ. ಜನರಿಗೆ ಹೆಚ್ಚು ಪರಿಚಿತವಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಬೇಡಿಕೆಯನುಸಾರ ರೈಲುಗಳನ್ನು ಓಡಿಸಲಾಗುವುದು. ಬೋಗಿಗಳ ಸಂಪೂರ್ಣ ಸ್ವಚ್ಛತೆ ಮತ್ತು ಕೋವಿಡ್‍-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಉಪ ಪ್ರಾದೇಶಿಕ ಮೇಲ್ವಿಚಾರಕ ಅಶೋಕ್ ಕುಮಾರ್ ವರ್ಮಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here