ಹಿರಿಯ ನಾಗರಿಕರ ಕೋವಿಡ್-19 ಲಸಿಕಾ ಪಡೆದುಕೊಂಡ ನಂತರವೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ
ಬೆಂಗಳೂರು:
ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕೋವಿಡ್ -19 ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ಜಾರಿಗೊಳಿಸಲು, ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು, ಕೋವಿಡ್ ರಕ್ಷಾ ವೇದಿಕೆ ಆರಂಭಿಸಿದ್ದು, ಸಹಾಯವಾಣಿ 080 6191 4960 ಸಂಖ್ಯೆಗೆ ಕರೆ ಮಾಡಿದಲ್ಲಿ ಹತ್ತಿರದ ಆಸ್ಪತ್ರೆ / ಕೇಂದ್ರದಲ್ಲಿ ಹಿರಿಯ ನಾಗರಿಕರ ಲಸಿಕಾ ನೋಂದಣಿಗೆ ಸಹಾಯ, ತಜ್ಞ ವೈದ್ಯರಿಂದ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು ಇತರ ಸ್ವಯಂಸೇವಕರ ತಂಡದೊಂದಿಗೆ ‘ಕೋವಿಡ್ ರಕ್ಷಾ’ ವೇದಿಕೆಯ ಮೂಲಕ ಕಾಲ್ ಸೆಂಟರ್ ಅನ್ನು ಪ್ರಾರಂಭಿಸಿದ್ದು, ಈ ಸಹಾಯವಾಣಿಗೆ ಬರುವ ಕರೆಗಳ ಆಧಾರದಲ್ಲಿ ಲಸಿಕಾ ನೋಂದಣಿ ಕಾರ್ಯ ನಡೆಸಲಿದೆ. ಇದರನ್ವಯ, ಹಿರಿಯ ನಾಗರಿಕರಿಗೆ ಹತ್ತಿರದ ಆಸ್ಪತ್ರೆ/ಕೇಂದ್ರದಲ್ಲಿ ಲಸಿಕಾ ನೋಂದಣಿ, ಅಸ್ವಸ್ಥ ನಾಗರಿಕರಿಗೆ ಸಾರಿಗೆ ವ್ಯವಸ್ಥೆ ಹಾಗೂ ಲಸಿಕೆ ಪಡೆದುಕೊಂಡ ನಂತರ ತಜ್ಞ ವೈದ್ಯರಿಂದ ಸಲಹೆ, ಸಮಾಲೋಚನೆಗೆ ಕ್ರಮ ಕೈಗೊಳ್ಳಲಾಗಿದೆ.
‘ಕೋವಿಡ್ ರಕ್ಷಾ’ ಕುರಿತು ಮಾತನಾಡಿದ ಸಂಸದ ಶ್ರೀ ತೇಜಸ್ವೀ ಸೂರ್ಯ ರವರು, ” ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವತಿಯಿಂದ ಆರಂಭವಾಗಿರುವ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನದ ಅನ್ವಯ ಈಗಾಗಲೇ 50 ಲಕ್ಷಕ್ಕೂ ಅಧಿಕ ನಾಗರಿಕರು ಕೆಲವೇ ದಿನಗಳಲ್ಲಿ ಲಸಿಕೆ ಪಡೆದುಕೊಂಡಿದ್ದು, ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಲಸಿಕೆ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಈ ವೇದಿಕೆ ಆರಂಭಿಸಲಾಗಿದೆ. ಕೋವಿನ್ ಅಪ್ಲಿಕೇಶನ್ ಅಥವಾ ಆರೋಗ್ಯ ಸೇತು ಜಾಲತಾಣದ ಮೂಲಕ ನೋಂದಣಿಗೊಳ್ಳಲು ಇದರಿಂದ ಸಹಾಯ ಒದಗಿಸಲಿದ್ದು, ಲಸಿಕೆ ಪಡೆದುಕೊಂಡ ನಂತರವೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಲು ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.
ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶ್ರೀ ತೇಜಸ್ವೀ ಸೂರ್ಯರವರು, ಹಿರಿಯ ನಾಗರಿಕರ ಲಸಿಕಾ ಅನುಕೂಲಕ್ಕಾಗಿ ಪಕ್ಷದ ಕಾರ್ಯಕರ್ತರು, ಸ್ವಯಂ ಸೇವಕರ ಸಹಾಯದೊಂದಿಗೆ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಗಳನ್ನು ಆರಂಭಿಸುವಂತೆ ಸೂಚಿಸಿರುತ್ತಾರೆ. ಸಧ್ಯದಲ್ಲೇ ಎಲ್ಲ ಆಸ್ಪತ್ರೆ/ ಪಾರ್ಕ್ಗಳ ಹತ್ತಿರದಲ್ಲಿಯೂ ನೋಂದಣಿ ಡೆಸ್ಕ್ ಅನ್ನು ಆರಂಭಿಸಲಿರುವ ಕುರಿತು ಇದೇ ಸಂದರ್ಭದಲ್ಲಿ ವಿವರಿಸಿದರು.
Booking appointment for COVID-19 vaccination only takes few minutes
— Tejasvi Surya (@Tejasvi_Surya) March 12, 2021
Watch this video to understand how easy process on https://t.co/EcUFWkoVnc is
We've launched COVID Raksha helpline (080 6191 4960) to help senior citizens book appointment & seek expert post-vaccine advice pic.twitter.com/45QuGeDw5w
ಕೋವಿಡ್ ರಕ್ಷಾ ವೇದಿಕೆಯನ್ನು 100ಕ್ಕೂ ಅಧಿಕ ವೈದ್ಯರ ಹಾಗೂ 200ಕ್ಕೂ ಅಧಿಕ ಸ್ವಯಂಸೇವಕರ ತಂಡದೊಂದಿಗೆ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ನಂತರದ ಅವಧಿಯಲ್ಲಿ ನಾಗರಿಕರ ಅನುಕೂಲಕ್ಕಾಗಿ ಆರಂಭಿಸಲಾಗಿತ್ತು. ಮೊದಲ ಹಂತದ ಕಾರ್ಯಾಚರಣೆಯಲ್ಲಿ ‘ಕೋವಿಡ್ ರಕ್ಷಾ’ ವೇದಿಕೆಯ ಮೂಲಕ 10,700 ಕರೆಗಳಿಗೆ ಉತ್ತರಿಸಿದ್ದು, 3,465 ಸಮಾಲೋಚನೆಗಳನ್ನು ವಾಟ್ಸಾಪ್ ಮುಖಾಂತರ ನಿರ್ವಹಿಸಲಾಗಿದೆ. 582 ಜನರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಕಾರ್ಯ,96 ಕೇಸ್ ಗಳ ತುರ್ತುಪರಿಹಾರ ಕಾರ್ಯವನ್ನು ಮಾಡಲಾಗಿದೆ. ಟೆಲಿ ಸಮಾಲೋಚನೆ ಮೂಲಕ 1,698 ಜನ ಕೋವಿಡ್ -19 ಗುಣಲಕ್ಷಣಗಳನ್ನು ಹೊಂದಿರುವ ನಾಗರಿಕರ ಪರಾಮರ್ಶೆ ನಡೆಸಲಾಗಿದೆ ಎಂಬುದರ ಕುರಿತು ಬೆಂಗಳೂರು ದಕ್ಷಿಣ ಸಂಸದರ ಕಛೇರಿಯ ಪ್ರಕಟಣೆ ತಿಳಿಸಿರುತ್ತದೆ.